ಕ್ಷೇತ್ರದ ಹಿನ್ನೆಲೆ ಮತ್ತು ರಾಜಕೀಯ ಇತಿಹಾಸ
ಒಂದು ಶಕೆಯ ಅಂತ್ಯ: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. 94 ವರ್ಷದ ಶಾಮನೂರು ಅವರು ಆರು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ದಾವಣಗೆರೆಯನ್ನು ಶೈಕ್ಷಣಿಕ ಹಾಗೂ ವಾಣಿಜ್ಯ ಕೇಂದ್ರವಾಗಿ ಬೆಳೆಸುವಲ್ಲಿ ಅವರ ಪಾತ್ರ ದೊಡ್ಡದು.
ಅಭಿವೃದ್ಧಿಯ ಅಸ್ತ್ರ: ಉಪಚುನಾವಣೆಯಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಬರೋಬ್ಬರಿ 100 ಕೋಟಿ ರೂಪಾಯಿ ವಿಶೇಷ ಅನುದಾನ ಘೋಷಿಸಿದ್ದಾರೆ.
ಟಿಕೆಟ್ ಆಕಾಂಕ್ಷಿಗಳು (Key Aspirants)
ಸಮರ್ಥ್ ಶಾಮನೂರು
ಶಾಮನೂರು ಕುಟುಂಬದ ಕುಡಿಹಿರಿಯ ನಾಯಕ ಶಾಮನೂರು ಅವರ ಮೊಮ್ಮಗ. ಯುವ ಮುಖವಾಗಿ ಕಣಕ್ಕಿಳಿಯುವ ಪ್ರಬಲ ಸಾಧ್ಯತೆ.
ಅಬ್ದುಲ್ ಜಬ್ಬಾರ್
ಅಲ್ಪಸಂಖ್ಯಾತ ನಾಯಕವಿಧಾನ ಪರಿಷತ್ ಸದಸ್ಯ. ಅಲ್ಪಸಂಖ್ಯಾತ ಕೋಟಾದಡಿ ಟಿಕೆಟ್ ಪಡೆಯುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ವಿನಯ್ ಕುಮಾರ್ ಜಿ.ಬಿ
ಪಕ್ಷೇತರ ಆಕಾಂಕ್ಷಿದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀವ್ರ ಸಿದ್ಧತೆ ನಡೆಸುತ್ತಿರುವ ಯುವ ನಾಯಕ.
ಬಿ.ಜಿ. ಅಜಯ್ ಕುಮಾರ್
ಮಾಜಿ ಮೇಯರ್ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಪೈಪೋಟಿ ನೀಡಿದ್ದ ಇವರು, ಈ ಬಾರಿಯೂ ಬಿಜೆಪಿಯ ಪ್ರಬಲ ಆಕಾಂಕ್ಷಿ.
ಯಶವಂತ ರಾವ್ ಜಾಧವ್
ಹಿರಿಯ ಮುಖಂಡಬಿಜೆಪಿಯ ಹಿರಿಯ ನಾಯಕ ಹಾಗೂ ಸಂಘ ಪರಿವಾರದ ಹಿನ್ನೆಲೆಯುಳ್ಳ ಟಿಕೆಟ್ ಆಕಾಂಕ್ಷಿ.
ದಕ್ಷಿಣ ದಂಗಲ್ - ಇತ್ತೀಚಿನ ಸುದ್ದಿಗಳು

ಮುಸ್ಲಿಮರಿಗೆ ಟಿಕೆಟ್ ಬಗ್ಗೆ ಅಪ್ಪ ಎಲ್ಲಿ ಹೇಳಿದ್ದಾರೆ?: ಜಬ್ಬಾರ್ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಿಡಿ
ದಾವಣಗೆರೆ: ಮುಂಬರುವ ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವ ವಿಚಾರವಾಗಿ ಕಾಂಗ್ರೆಸ್ ಪಕ್ಷದೊಳಗೆ ಉಂಟಾಗಿರುವ ಗೊಂದಲಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್...

“ಇದು ಇವನೊಬ್ಬನ ಪಕ್ಷನಾ?”: ಸಚಿವ ಜಮೀರ್ ವಿರುದ್ಧ ದಾವಣಗೆರೆಯಲ್ಲಿ ಗುಡುಗಿದ ಎಸ್.ಎಸ್. ಮಲ್ಲಿಕಾರ್ಜುನ್!
ದಾವಣಗೆರೆ: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಇತ್ತೀಚಿನ ಹೇಳಿಕೆಗಳು ಮತ್ತು ನಡೆಗಳು ತೀವ್ರ ವಿವಾದಕ್ಕೆ...