ದಾವಣಗೆರೆ : “ಮನೆಯಲ್ಲೇ ಎಂಪಿ, ಮಂತ್ರಿಗಳಿದ್ದಾರೆ.. ಸಾಲದೇ?” ಶಾಮನೂರು ಕುಟುಂಬದ ವಿರುದ್ಧ ಸುಭಾಷ್ ಚಂದ್ರ ಕಿಡಿ!

Subhash Chandra speaking against family politics in Davanagere - Madhyakarnataka Live News
— ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಹಿರಿಯ ಮುಖಂಡ ಸುಭಾಷ್ ಚಂದ್ರ.

—Advertisement—

📍 ದಾವಣಗೆರೆ ದಕ್ಷಿಣ

ಉಪಸಮರ - 2026

ಮಹಾ ಕದನ: ಯಾರಿಗೆ ಒಲಿಯಲಿದೆ ಟಿಕೆಟ್?

Samarth Jabbar Vinay Ajay Yashwanth
ಕ್ಷಣ ಕ್ಷಣದ ಲೈವ್ ಅಪ್ಡೇಟ್ಸ್ ➔

ದಾವಣಗೆರೆ: ಜಿಲ್ಲೆಯ ರಾಜಕಾರಣದಲ್ಲಿ ಕುಟುಂಬ ರಾಜಕಾರಣದ ಕಿಚ್ಚು ಮತ್ತೆ ಹತ್ತಿಕೊಂಡಿದೆ. ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ರಾಜಕೀಯ ಪ್ರಾಬಲ್ಯದ ವಿರುದ್ಧ ದಾವಣಗೆರೆಯ ಮುಖಂಡರಾದ ಸುಭಾಷ್ ಚಂದ್ರ ಅವರು ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

“ಸಮರ್ಥ್ ಇನ್ನು ಸಣ್ಣ ಹುಡುಗ, ಮೊದಲು ಕಾರ್ಪೊರೇಷನ್ ಅನುಭವ ಕೊಡಿಸಿ”

ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಅವರನ್ನು ರಾಜಕೀಯಕ್ಕೆ ತರುತ್ತಿರುವ ವಿಚಾರವಾಗಿ ಮಾತನಾಡಿದ ಸುಭಾಷ್ ಚಂದ್ರ, “ಸಮರ್ಥ್ ಇನ್ನೂ ಚಿಕ್ಕ ಹುಡುಗ. ಅವರಿಗೆ ರಾಜಕೀಯದ ಆಳ-ಅಗಲ ಅರ್ಥವಾಗಬೇಕಾದರೆ ಮೊದಲು ಮಹಾನಗರ ಪಾಲಿಕೆ (Corporation) ಚುನಾವಣೆಗೆ ನಿಲ್ಲಿಸಿ. ಅಲ್ಲಿ ಗೆದ್ದು ಬಂದ ಮೇಲೆ ರಾಜಕೀಯದ ಅನುಭವ ಪಡೆಯಲಿ. ಅದನ್ನು ಬಿಟ್ಟು ನೇರವಾಗಿ ದೊಡ್ಡ ಹುದ್ದೆಗಳಿಗೆ ತರುವುದು ಸರಿಯಲ್ಲ” ಎಂದು ಸಲಹೆ ನೀಡಿದ್ದಾರೆ.

ಮನೆಯಲ್ಲೇ ಎಲ್ಲ ಅಧಿಕಾರವಿದ್ದರೆ ಹೇಗೆ?

ಶಾಮನೂರು ಕುಟುಂಬವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಅವರು, “ಆಯ್ತಲ್ರಿ ನಿಮ್ಮ ಮನೇಲಿ ಎಷ್ಟು ಜನ ಇದ್ದೀರಿ? ಮನೆಯಲ್ಲೇ ಎಂಪಿ (ಸಂಸದರು) ಇದ್ದಾರೆ, ಮೇಡಂ ಮಂತ್ರಿಯಾಗಿದ್ದಾರೆ. ಇಷ್ಟೆಲ್ಲಾ ಅಧಿಕಾರ ಸಾಲದೇ? ಇನ್ನು ಸಣ್ಣ ಹುಡುಗರನ್ನು ನೇರವಾಗಿ ಮುಖ್ಯಮಂತ್ರಿ ಮಾಡುವ ಕನಸು ಕಾಣುವ ಬದಲು, ಅವರಿಗೆ ಕೆಳಮಟ್ಟದಿಂದ ರಾಜಕೀಯ ಕಲಿಸಿ” ಎಂದು ಮಾರ್ಮಿಕವಾಗಿ ನುಡಿದರು.

ಸಮಾಜಕ್ಕೆ ಬೇಕಾದವರಾಗಿ ಬಾಳಬೇಕು:

ತಮ್ಮ ಕುಟುಂಬದ ಹಿನ್ನೆಲೆಯನ್ನು ನೆನಪಿಸಿಕೊಂಡ ಸುಭಾಷ್ ಚಂದ್ರ, “ನಮ್ಮ ತಂದೆಯವರು ನಾಲ್ಕು ಬಾರಿ ಕಾರ್ಪೊರೇಟರ್ ಆಗಿದ್ದರು, ಮುನ್ಸಿಪಲ್ ಅಧ್ಯಕ್ಷರಾಗಿದ್ದರು. ನಾವು ಇದುವರೆಗೂ ಏನೂ ಆಗಿಲ್ಲ. ನಾವು ಅಧಿಕಾರಕ್ಕಾಗಿ ಹಪಹಪಿಸುತ್ತಿಲ್ಲ. ರಾಜಕೀಯ ಅಂದರೆ ಸಮಾಜಕ್ಕೆ ಬೇಕಾದವರಾಗಿ ಬಾಳಬೇಕು. ಎಲ್ಲವನ್ನೂ ಒಂದೇ ಕುಟುಂಬದವರೇ ಅನುಭವಿಸಬಾರದು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆಯ ರಾಜಕೀಯ ವಲಯದಲ್ಲಿ ಸುಭಾಷ್ ಚಂದ್ರ ಅವರ ಈ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಕುಟುಂಬ ರಾಜಕಾರಣದ ಬಗ್ಗೆ ಪರ-ವಿರೋಧದ ಚರ್ಚೆಗಳು ಶುರುವಾಗಿವೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp