ದಾವಣಗೆರೆ ದಕ್ಷಿಣ ದಂಗಲ್: ಶ್ರೀನಿವಾಸ್ ದಾಸಕರಿಯಪ್ಪ ‘ಹವಾ’ ಹೇಗಿದೆ? ಬಿಜೆಪಿಯ ಹೊಸ ‘ಅಹಿಂದ’ ಅಸ್ತ್ರ ವರ್ಕೌಟ್ ಆಗುತ್ತಾ?

Srinivas Dasakariyappa BJP Candidate Davanagere South Constituency
— ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಟಿ. ದಾಸಕರಿಯಪ್ಪ.

—Election Update—

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಶ್ರೀನಿವಾಸ್ ಟಿ. ದಾಸಕರಿಯಪ್ಪ ಕಣಕ್ಕೆ. ಸಾಮಾನ್ಯ ಕಾರ್ಯಕರ್ತನ ಪ್ಲಸ್ ಮತ್ತು ಮೈನಸ್ ಪಾಯಿಂಟ್‌ಗಳೇನು? ಶಾಮನೂರು ಕುಟುಂಬದ ಭದ್ರಕೋಟೆಯಲ್ಲಿ ಕೇಸರಿ ಪಡೆಯ ‘ಅಹಿಂದ’ ಲೆಕ್ಕಾಚಾರ ಹೇಗಿದೆ? ಸಂಪೂರ್ಣ ವಿಶ್ಲೇಷಣೆ ಓದಿ.

ಸಾಮಾನ್ಯ ಕಾರ್ಯಕರ್ತನಿಗೆ ಮಣೆ: ಯಾರು ಈ ಶ್ರೀನಿವಾಸ್ ದಾಸಕರಿಯಪ್ಪ?

ಜಿಲ್ಲೆಯ ರಾಜಕೀಯದ ಕೇಂದ್ರಬಿಂದುವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಈಗಲೇ ಕಹಳೆ ಮೊಳಗಿದೆ. ಬಿಜೆಪಿ ಈ ಬಾರಿ ಯಾವುದೇ ಘಟಾನುಘಟಿ ನಾಯಕರಿಗೆ ಟಿಕೆಟ್ ನೀಡದೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಕಣಕ್ಕಿಳಿಸಿದೆ. ಕಳೆದ 30 ವರ್ಷಗಳಿಂದ ಸಂಘಟನೆಯಲ್ಲಿ ಸಕ್ರಿಯರಾಗಿರುವ ಇವರು, ಸದ್ಯ ರಾಜ್ಯ ಎಸ್‌ಟಿ ಮೋರ್ಚಾದ ಉಪಾಧ್ಯಕ್ಷರಾಗಿದ್ದಾರೆ. ಇವರ ತಂದೆ ದಿ. ಟಿ. ದಾಸಕರಿಯಪ್ಪ ಅವರು ಕೂಡ ದೂಡಾ ಅಧ್ಯಕ್ಷರಾಗಿ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿದ್ದರು.

ಶ್ರೀನಿವಾಸ್ ದಾಸಕರಿಯಪ್ಪ ಅವರ ಬಲ (Plus Points):

  • ಅಹಿಂದ ಮತಗಳ ಮೇಲೆ ಕಣ್ಣು: ಎಸ್.ಟಿ (ನಾಯಕ) ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ದಲಿತ ಮತ್ತು ಹಿಂದುಳಿದ ಮತಗಳನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.
  • ಯುವ ಪಡೆಯ ಬೆಂಬಲ (SDK Boys): ದಕ್ಷಿಣ ಕ್ಷೇತ್ರದಲ್ಲಿ ‘SDK Boys’ ಎಂಬ ದೊಡ್ಡ ಯುವಕರ ಪಡೆಯೇ ಇವರಿಗೆ ಶ್ರೀರಕ್ಷೆಯಾಗಿದೆ.
  • ಕಾಂಗ್ರೆಸ್‌ನ ಆಂತರಿಕ ಕಿತ್ತಾಟ: ಶಾಮನೂರು ಕುಟುಂಬ ಮತ್ತು ಅಲ್ಪಸಂಖ್ಯಾತ ನಾಯಕರ ನಡುವಿನ ಟಿಕೆಟ್ ಫೈಟ್ ಬಿಜೆಪಿಗೆ ವರದಾನವಾಗುವ ಸಾಧ್ಯತೆಯಿದೆ.
  • ಅಭಿವೃದ್ಧಿ ಶೂನ್ಯ ವಿಚಾರ: ಕ್ಷೇತ್ರದಲ್ಲಿ ಹೈಟೆಕ್ ಆಸ್ಪತ್ರೆ ಮತ್ತು ರೈಲ್ವೆ ಅಂಡರ್‌ಪಾಸ್ ಸಮಸ್ಯೆಗಳನ್ನು ಬಿಜೆಪಿ ಪ್ರಬಲವಾಗಿ ಜನರ ಮುಂದೆ ಇಡುತ್ತಿದೆ.

ಎದುರಾಗಿರುವ ಸವಾಲುಗಳು (Minus Points):

  • ಬಿಜೆಪಿಯ ಒಳಜಗಳ: ‘ಸಿದ್ದೇಶ್ವರ’ ಮತ್ತು ‘ರೇಣುಕಾಚಾರ್ಯ’ ಬಣಗಳು ಒಂದಾಗಿ ಕೆಲಸ ಮಾಡದಿದ್ದರೆ ಹಿನ್ನಡೆಯಾಗುವ ಭೀತಿಯಿದೆ.
  • ಅಲ್ಪಸಂಖ್ಯಾತ ಮತದಾರರ ಪಾತ್ರ: ಕ್ಷೇತ್ರದಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದು, ಅವರು ಈ ಚುನಾವಣೆಯ ನಿರ್ಣಾಯಕ ಶಕ್ತಿಯಾಗಿದ್ದಾರೆ.
  • ಆಡಳಿತ ಪಕ್ಷದ ಬಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು ಮತ್ತು ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ 100 ಕೋಟಿ ರೂ. ಅನುದಾನ ಬಿಜೆಪಿಗೆ ಸವಾಲಾಗಬಹುದು.

ಕ್ಷೇತ್ರದ ಲೀಡ್ ಲೆಕ್ಕಾಚಾರ:

ಪಕ್ಷ ಪ್ರಾಬಲ್ಯದ ಏರಿಯಾಗಳು (Areas)
ಕಾಂಗ್ರೆಸ್ ಗಾಂಧಿನಗರ, ಬಾಷಾನಗರ, ಅಜಾದ್ ನಗರ, ಅಹಮದ್ ನಗರ, ಗ್ರಾಮೀಣ ಭಾಗ.
ಬಿಜೆಪಿ ಜಗಜೀವನರಾಮ್ ನಗರ, ಕುರುಬರಕೇರಿ, ಜಾಲಿನಗರ, ಸುರೇಶ್ ನಗರ, ಮಂಡಕ್ಕಿಪೇಟೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp