ದಾವಣಗೆರೆ: ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಮನೂರು ಸಮರ್ಥ್ ಅವರ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ. ಎಐಸಿಸಿ (AICC) ಕಡೆಯಿಂದ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಸಮರ್ಥ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಮುಂದಿನ ನಡೆ ಹಾಗೂ ಪಕ್ಷದ ಒಗ್ಗಟ್ಟಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ದೇವಸ್ಥಾನದಲ್ಲಿದ್ದಾಗ ಸಿಕ್ಕಿತು ಶುಭಸುದ್ದಿ!
ಟಿಕೆಟ್ ಘೋಷಣೆಯಾದ ಸಂದರ್ಭದಲ್ಲಿ ಸಮರ್ಥ್ ಅವರು ದಾವಣಗೆರೆಯ ಪ್ರಸಿದ್ಧ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿದ್ದರು. “ನಾನು ದೇವಸ್ಥಾನದ ಬಳಿ ಇದ್ದಾಗ ನನ್ನ ಸ್ನೇಹಿತ ವರುಣ್ ಬಂದು ಟಿಕೆಟ್ ಕನ್ಫರ್ಮ್ ಆದ ವಿಷಯ ತಿಳಿಸಿದ. ಕೇಳಿ ಬಹಳ ಸಂತೋಷವಾಯಿತು. ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ,” ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಅಸಮಾಧಾನಿತರ ಮನವೊಲಿಕೆಗೆ ಸಿದ್ಧ
ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಲ್ಪಸಂಖ್ಯಾತ ನಾಯಕರು ಮತ್ತು ಕೆಲವು ಆಕಾಂಕ್ಷಿಗಳು ವ್ಯಕ್ತಪಡಿಸಿರುವ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಸಮರ್ಥ್, “ದಾವಣಗೆರೆ ಎಂಬುದು ಒಂದು ದೊಡ್ಡ ಕುಟುಂಬವಿದ್ದಂತೆ. ಚುನಾವಣೆ ಸಮಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ನಾವೆಲ್ಲರೂ ಶಾಮನೂರು ಶಿವಶಂಕರಪ್ಪ (ಅಜ್ಜ) ಅವರ ಮಾರ್ಗದರ್ಶನದಲ್ಲಿ ಬೆಳೆದವರು. ಶೀಘ್ರದಲ್ಲೇ ಅಸಮಾಧಾನಿತ ಎಲ್ಲ ನಾಯಕರನ್ನು ಭೇಟಿ ಮಾಡಿ, ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ,” ಎಂದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಪ್ರಚಾರದ ರಣತಂತ್ರ ಮತ್ತು ಸ್ಟಾರ್ ಪ್ರಚಾರಕರು
”ಪ್ರಚಾರ ಯಾವಾಗ ಆರಂಭ?” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾವು ಜನರ ನಡುವೆಯೇ ಹುಟ್ಟಿ ಬೆಳೆದವರು, ಹಾಗಾಗಿ ನಮಗೆ ಪ್ರತಿದಿನವೂ ಪ್ರಚಾರವೇ. ಜನರ ಸಂಪರ್ಕ ನಮಗೆ ಹೊಸತಲ್ಲ,” ಎಂದು ಮಾರ್ಮಿಕವಾಗಿ ನುಡಿದರು. ಇನ್ನು ಪ್ರಚಾರಕ್ಕೆ ರಾಜ್ಯದ ಯಾವ ಪ್ರಮುಖ ನಾಯಕರು ಬರಲಿದ್ದಾರೆ ಎಂಬ ಪ್ರಶ್ನೆಗೆ, “ಸದ್ಯಕ್ಕೆ ಅದನ್ನು ಸಸ್ಪೆನ್ಸ್ ಆಗಿ ಇಡೋಣ, ಶೀಘ್ರದಲ್ಲೇ ಎಲ್ಲರಿಗೂ ತಿಳಿಯಲಿದೆ,” ಎಂದು ಉತ್ತರಿಸಿದರು.

ಗೆಲುವಿನ ಗುರಿ
ದಾವಣಗೆರೆ ಯಾವಾಗಲೂ ಕಾಂಗ್ರೆಸ್‌ನ ಭದ್ರಕೋಟೆ. ಈ ಬಾರಿಯೂ ಕೂಡ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಮತ ಕೇಳುತ್ತೇವೆ ಮತ್ತು ಭರ್ಜರಿ ಜಯ ಸಾಧಿಸುತ್ತೇವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
