ಸಚಿವ ಡಿ. ಸುಧಾಕರ್ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ಗೌರವಾರ್ಥವಾಗಿ ಇಂದು ನಮ್ಮ ವೆಬ್‌ಸೈಟ್ ಕಪ್ಪು-ಬಿಳುಪಿನಲ್ಲಿ ಪ್ರಕಟವಾಗುತ್ತಿದೆ.
D Sudhakar
ಭಾವಪೂರ್ಣ ಶ್ರದ್ಧಾಂಜಲಿ
ಸಚಿವ ಡಿ. ಸುಧಾಕರ್
ರಾಜಕೀಯ ಹೆಜ್ಜೆಗುರುತು ಡಿ. ಸುಧಾಕರ್ ಅವರು ತಮ್ಮ ಜನಪರ ಕಾರ್ಯಗಳಿಂದ ‘ಸೋಲಿಲ್ಲದ ಸರದಾರ’ ಎಂದೇ ಖ್ಯಾತರಾಗಿದ್ದ ಅನುಭವಿ ರಾಜಕಾರಣಿ.
2004
ಮೊದಲ ಬಾರಿಗೆ ಆಯ್ಕೆ ಮೊದಲ ಬಾರಿಗೆ ಚಳ್ಳಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆ.
2008
ಪಕ್ಷೇತರ ಗೆಲುವು & ಸಚಿವ ಸ್ಥಾನ ಹಿರಿಯೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು. ಬಳಿಕ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಸಮಾಜ ಕಲ್ಯಾಣ ಸಚಿವರಾಗಿ (2008-2009) ಹಾಗೂ ಯುವಜನ ವ್ಯವಹಾರ ಸಚಿವರಾಗಿ ಸೇವೆ.
2013
ಕಾಂಗ್ರೆಸ್ ಮರಳುವಿಕೆ ಕಾಂಗ್ರೆಸ್ ಪಕ್ಷಕ್ಕೆ ಮರಳಿ, ಹಿರಿಯೂರು ಕ್ಷೇತ್ರದಿಂದ ಜೆಡಿಎಸ್‌ನ ಎ. ಕೃಷ್ಣಪ್ಪ ವಿರುದ್ಧ ಗೆಲುವು ಸಾಧಿಸಿದ್ದರು.
2018
ಚುನಾವಣಾ ಹಿನ್ನಡೆ ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸೋಲು.
2023
ಮತ್ತೆ ಜಯಭೇರಿ ಮತ್ತೆ ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಜಯಭೇರಿ. ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ. ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ.
ಚಿತ್ರದುರ್ಗಕ್ಕೆ ತುಂಬಲಾರದ ನಷ್ಟ ಸಚಿವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದು, ಇಡೀ ಚಿತ್ರದುರ್ಗ ಜಿಲ್ಲೆ ಓರ್ವ ಜನಪ್ರಿಯ ನಾಯಕನನ್ನು ಕಳೆದುಕೊಂಡಂತಾಗಿದೆ.

ಡಿ.ಸುಧಾಕರ್ ವ್ಯಕ್ತಿ ಪರಿಚಯ ಹಾಗೂ ರಾಜಕೀಯ ಪಯಣ

D Sudhakar
ಜನನ ಡಿ ಸುಧಾಕರ್ ಅವರು 28.03.1961 ರಲ್ಲಿ ಜನಿಸಿದರು.
D Sudhakar
ರಾಜಕೀಯ ಪ್ರವೇಶ (2004) ಪ್ರಥಮ ಬಾರಿಗೆ ಚಳ್ಳಕೆರೆಯಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದರು.
D Sudhakar
ಪಕ್ಷೇತರ ಜಯ (2008) ಹಿರಿಯೂರು ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು.
D Sudhakar
ಸಚಿವ ಸ್ಥಾನ ಯಡಿಯೂರಪ್ಪ ಸರ್ಕಾರಕ್ಕೆ ಬೆಂಬಲ ನೀಡಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದರು.
D Sudhakar
ಮರು ಆಯ್ಕೆ (2023) ಕಾಂಗ್ರೆಸ್ ನಿಂದ ಆಯ್ಕೆಯಾಗಿ ಸಾಂಖಿಕ ಮತ್ತು ಯೋಜನಾ ಸಚಿವರಾಗಿದ್ದರು.
ಸಹಕಾರ ಕ್ಷೇತ್ರದ ಧೀಮಂತ ಕಳೆದ 20 ವರ್ಷಗಳಿಂದ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದರು.
ಬಡವರ ಬಂಧು ಅಧಿಕಾರ ಇದ್ದಾಗ, ಇಲ್ಲದಿದ್ದಾಗ ಅಪಾರ ಜನರಿಗೆ ಸಹಾಯಾಸ್ತ ಚಾಚಿದ್ದ ಅವರು 'ಬಡವರ ಬಂಧು' ಎಂದೇ ಪ್ರಸಿದ್ಧರು.

ರೇಷನ್ ಕಾರ್ಡ್ ತಿದ್ದುಪಡಿ ಆರಂಭ; ಹೊಸ ಅರ್ಜಿ ಸಲ್ಲಿಸಲು ಇಂದೇ ಭೇಟಿ ನೀಡಿ!

Official poster of Karnataka Ration Card correction and new application process 2026 schedule."

—Election Update—

ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಬಹಳ ದಿನಗಳಿಂದ ಕಾಯುತ್ತಿದ್ದ ಪಡಿತರ ಚೀಟಿ (Ration Card) ತಿದ್ದುಪಡಿ ಹಾಗೂ ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಈಗ ಅಧಿಕೃತವಾಗಿ ಚಾಲನೆ ಸಿಕ್ಕಿದೆ.

ರಾಜ್ಯಾದ್ಯಂತ ರೇಷನ್ ಕಾರ್ಡ್ ಅಭಿಯಾನ ಪ್ರಾರಂಭ
​ರಾಜ್ಯ ಸರ್ಕಾರವು ಪಡಿತರ ಚೀಟಿದಾರರ ಅನುಕೂಲಕ್ಕಾಗಿ ಮೇ 8, 2026 ರಿಂದ ಹೊಸ ಅರ್ಜಿ ಸಲ್ಲಿಕೆ ಮತ್ತು ತಿದ್ದುಪಡಿ ಪ್ರಕ್ರಿಯೆಯನ್ನು ಆರಂಭಿಸಿದೆ. ಇದು ಮಾರ್ಚ್ 31, 2027 ರವರೆಗೆ ಮುಂದುವರಿಯಲಿದೆ. ಈ ಕಾಲಮಿತಿಯೊಳಗೆ ಸಾರ್ವಜನಿಕರು ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.

ಯಾವೆಲ್ಲಾ ತಿದ್ದುಪಡಿಗಳಿಗೆ ಅವಕಾಶವಿದೆ?

ಹೆಸರು ಸೇರ್ಪಡೆ: ಕುಟುಂಬಕ್ಕೆ ಹೊಸದಾಗಿ ಸೇರಿದ ಸದಸ್ಯರ (ಮಕ್ಕಳು ಅಥವಾ ವಿವಾಹಿತರು) ಹೆಸರು ಸೇರಿಸಲು ಅವಕಾಶ.

ಹೆಸರು ತೆಗೆದುಹಾಕುವುದು: ಮರಣ ಹೊಂದಿದ ಅಥವಾ ಬೇರೆಡೆಗೆ ವರ್ಗಾವಣೆಯಾದ ಸದಸ್ಯರ ಹೆಸರು ತೆಗೆಯುವುದು.

ವಿಳಾಸ ಬದಲಾವಣೆ: ಮನೆ ಬದಲಾಯಿಸಿದ ಸಂದರ್ಭದಲ್ಲಿ ಹೊಸ ವಿಳಾಸವನ್ನು ನವೀಕರಿಸುವುದು.

ಬೆರಳಚ್ಚು ಹಾಗೂ ಇ-ಕೆವೈಸಿ (e-KYC): ಅನ್ನಭಾಗ್ಯ ಯೋಜನೆಯ ಹಣ ಮತ್ತು ಪಡಿತರ ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದೆ.

ಸಮಯ ಮತ್ತು ಸೇವಾ ಕೇಂದ್ರಗಳ ವಿವರ

ಸಾರ್ವಜನಿಕರು ತಮ್ಮ ಹತ್ತಿರದ ಈ ಕೆಳಗಿನ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು:

  • ಗ್ರಾಮ ಒನ್ (Grama One)
  • ಕರ್ನಾಟಕ ಒನ್ (Karnataka One)
  • ಬೆಂಗಳೂರು ಒನ್ (Bengaluru One)

ವೇಳಾಪಟ್ಟಿ:

ಅರ್ಜಿ ಸಲ್ಲಿಕೆ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ.

ಅಧಿಕಾರಿಗಳ ಅನುಮೋದನೆ (FI Approval): ಬೆಳಿಗ್ಗೆ 10:00 ರಿಂದ ರಾತ್ರಿ 9:00 ರವರೆಗೆ.

ಅಗತ್ಯವಿರುವ ದಾಖಲೆಗಳು

  • ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
  • ಜನನ ಪ್ರಮಾಣ ಪತ್ರ (ಮಕ್ಕಳ ಹೆಸರು ಸೇರಿಸಲು).
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.
  • ಆದಾಯ ಮತ್ತು ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ).

ಹೆಚ್ಚಿನ ಮಾಹಿತಿಗಾಗಿ: ಪಡಿತರ ಚೀಟಿದಾರರು ಅಧಿಕೃತ ವೆಬ್‌ಸೈಟ್ ahara.kar.nic.in ಗೆ ಭೇಟಿ ನೀಡಬಹುದು ಅಥವಾ ಸಹಾಯವಾಣಿ ಸಂಖ್ಯೆ 1800-425-9339 ಗೆ ಕರೆ ಮಾಡಬಹುದು.

ಸೂಚನೆ: ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಪ್ರಕ್ರಿಯೆಯೂ ಚಾಲ್ತಿಯಲ್ಲಿದ್ದು, ಅರ್ಹ ಫಲಾನುಭವಿಗಳು ಮಾತ್ರ ಈ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಇಲಾಖೆ ತಿಳಿಸಿದೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp