ಸಚಿವ ಡಿ. ಸುಧಾಕರ್ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ಗೌರವಾರ್ಥವಾಗಿ ಇಂದು ನಮ್ಮ ವೆಬ್‌ಸೈಟ್ ಕಪ್ಪು-ಬಿಳುಪಿನಲ್ಲಿ ಪ್ರಕಟವಾಗುತ್ತಿದೆ.
D Sudhakar
ಭಾವಪೂರ್ಣ ಶ್ರದ್ಧಾಂಜಲಿ
ಸಚಿವ ಡಿ. ಸುಧಾಕರ್
ರಾಜಕೀಯ ಹೆಜ್ಜೆಗುರುತು ಡಿ. ಸುಧಾಕರ್ ಅವರು ತಮ್ಮ ಜನಪರ ಕಾರ್ಯಗಳಿಂದ ‘ಸೋಲಿಲ್ಲದ ಸರದಾರ’ ಎಂದೇ ಖ್ಯಾತರಾಗಿದ್ದ ಅನುಭವಿ ರಾಜಕಾರಣಿ.
2004
ಮೊದಲ ಬಾರಿಗೆ ಆಯ್ಕೆ ಮೊದಲ ಬಾರಿಗೆ ಚಳ್ಳಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆ.
2008
ಪಕ್ಷೇತರ ಗೆಲುವು & ಸಚಿವ ಸ್ಥಾನ ಹಿರಿಯೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು. ಬಳಿಕ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಸಮಾಜ ಕಲ್ಯಾಣ ಸಚಿವರಾಗಿ (2008-2009) ಹಾಗೂ ಯುವಜನ ವ್ಯವಹಾರ ಸಚಿವರಾಗಿ ಸೇವೆ.
2013
ಕಾಂಗ್ರೆಸ್ ಮರಳುವಿಕೆ ಕಾಂಗ್ರೆಸ್ ಪಕ್ಷಕ್ಕೆ ಮರಳಿ, ಹಿರಿಯೂರು ಕ್ಷೇತ್ರದಿಂದ ಜೆಡಿಎಸ್‌ನ ಎ. ಕೃಷ್ಣಪ್ಪ ವಿರುದ್ಧ ಗೆಲುವು ಸಾಧಿಸಿದ್ದರು.
2018
ಚುನಾವಣಾ ಹಿನ್ನಡೆ ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸೋಲು.
2023
ಮತ್ತೆ ಜಯಭೇರಿ ಮತ್ತೆ ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಜಯಭೇರಿ. ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ. ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ.
ಚಿತ್ರದುರ್ಗಕ್ಕೆ ತುಂಬಲಾರದ ನಷ್ಟ ಸಚಿವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದು, ಇಡೀ ಚಿತ್ರದುರ್ಗ ಜಿಲ್ಲೆ ಓರ್ವ ಜನಪ್ರಿಯ ನಾಯಕನನ್ನು ಕಳೆದುಕೊಂಡಂತಾಗಿದೆ.

ಡಿ.ಸುಧಾಕರ್ ವ್ಯಕ್ತಿ ಪರಿಚಯ ಹಾಗೂ ರಾಜಕೀಯ ಪಯಣ

D Sudhakar
ಜನನ ಡಿ ಸುಧಾಕರ್ ಅವರು 28.03.1961 ರಲ್ಲಿ ಜನಿಸಿದರು.
D Sudhakar
ರಾಜಕೀಯ ಪ್ರವೇಶ (2004) ಪ್ರಥಮ ಬಾರಿಗೆ ಚಳ್ಳಕೆರೆಯಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದರು.
D Sudhakar
ಪಕ್ಷೇತರ ಜಯ (2008) ಹಿರಿಯೂರು ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು.
D Sudhakar
ಸಚಿವ ಸ್ಥಾನ ಯಡಿಯೂರಪ್ಪ ಸರ್ಕಾರಕ್ಕೆ ಬೆಂಬಲ ನೀಡಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದರು.
D Sudhakar
ಮರು ಆಯ್ಕೆ (2023) ಕಾಂಗ್ರೆಸ್ ನಿಂದ ಆಯ್ಕೆಯಾಗಿ ಸಾಂಖಿಕ ಮತ್ತು ಯೋಜನಾ ಸಚಿವರಾಗಿದ್ದರು.
ಸಹಕಾರ ಕ್ಷೇತ್ರದ ಧೀಮಂತ ಕಳೆದ 20 ವರ್ಷಗಳಿಂದ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದರು.
ಬಡವರ ಬಂಧು ಅಧಿಕಾರ ಇದ್ದಾಗ, ಇಲ್ಲದಿದ್ದಾಗ ಅಪಾರ ಜನರಿಗೆ ಸಹಾಯಾಸ್ತ ಚಾಚಿದ್ದ ಅವರು 'ಬಡವರ ಬಂಧು' ಎಂದೇ ಪ್ರಸಿದ್ಧರು.

ರೈತ ಸಂಜೀವಿನಿ ಯೋಜನೆ 2026: ಕೃಷಿ ಅಪಘಾತ ಸಂಭವಿಸಿದರೆ ಸಿಗಲಿದೆ ₹5 ಲಕ್ಷದವರೆಗೆ ಪರಿಹಾರ!

Karnataka Raitha Sanjeevini Scheme 5 Lakh Insurance Security for Farmers

—Election Update—

ಕರ್ನಾಟಕ ಸರ್ಕಾರದ ಈ ಮಹತ್ವದ ಯೋಜನೆಯು ಕೃಷಿಕರ ಕುಟುಂಬಕ್ಕೆ ಆಪತ್ಕಾಲದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಯೋಜನೆಯ ಲಾಭ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಏನಿದು ರೈತ ಸಂಜೀವಿನಿ ಯೋಜನೆ?

ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವಾಗ ರೈತರು ಅನೇಕ ಅನಿರೀಕ್ಷಿತ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ರೈತ ಕುಟುಂಬಗಳು ಬೀದಿಗೆ ಬೀಳಬಾರದು ಎಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ರೈತ ಸಂಜೀವಿನಿ’ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಹೊಲದಲ್ಲಿ ಕೆಲಸ ಮಾಡುವಾಗ ಸಂಭವಿಸುವ ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯಕ್ಕೆ ಈ ಯೋಜನೆಯಡಿ ಪರಿಹಾರ ಧನ ನೀಡಲಾಗುತ್ತದೆ.

ಯಾವೆಲ್ಲಾ ಅವಘಡಗಳಿಗೆ ಪರಿಹಾರ ಸಿಗುತ್ತದೆ?

ಕೆಳಗಿನ ಸಂದರ್ಭಗಳಲ್ಲಿ ರೈತರು ಅಥವಾ ಅವರ ಕುಟುಂಬದವರು ಪರಿಹಾರಕ್ಕೆ ಅರ್ಹರಾಗಿರುತ್ತಾರೆ:

ಹಾವು ಕಡಿತ: ಕೃಷಿ ಕೆಲಸದ ವೇಳೆ ಹಾವು ಕಡಿತದಿಂದ ಸಾವು ಸಂಭವಿಸಿದರೆ.

ಯಂತ್ರೋಪಕರಣಗಳ ಅಪಘಾತ: ಟ್ರ್ಯಾಕ್ಟರ್, ಹಾರೈ ಅಥವಾ ಇತರ ಕೃಷಿ ಉಪಕರಣ ಬಳಸುವಾಗ ಆಗುವ ಅವಘಡಗಳು.

ವಿದ್ಯುತ್ ಅವಘಡ: ಪಂಪ್‌ಸೆಟ್ ಅಥವಾ ವಿದ್ಯುತ್ ತಂತಿಗಳಿಂದ ಸಂಭವಿಸುವ ಅಪಘಾತಗಳು.

ಇತರ ಆಕಸ್ಮಿಕಗಳು: ಬಾವಿಗೆ ಬೀಳುವುದು ಅಥವಾ ಕೃಷಿ ಸಂಬಂಧಿತ ಕೆಲಸಗಳ ವೇಳೆ ಆಗುವ ಸಾವು/ಅಂಗವೈಕಲ್ಯ.

ಪರಿಹಾರದ ಮೊತ್ತ ಎಷ್ಟು?

ಈ ಯೋಜನೆಯು ಏಕಕಾಲಕ್ಕೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ದೊಡ್ಡ ಮೊತ್ತದ ಭದ್ರತೆ ನೀಡುತ್ತದೆ:
​ರೈತ ಸಂಜೀವಿನಿ (APMC): ₹1 ಲಕ್ಷ ನೇರ ಪರಿಹಾರ.
​ಕಂದಾಯ ಇಲಾಖೆ ಹಾಗೂ ಇತರ ಯೋಜನೆಗಳು: ಹೆಚ್ಚುವರಿ ಮೊತ್ತ ಸೇರಿ ಒಟ್ಟು ₹5 ಲಕ್ಷದವರೆಗೆ ಸಹಾಯಧನ ಲಭ್ಯವಾಗುತ್ತದೆ.

ಅರ್ಜಿ ಸಲ್ಲಿಸಲು ಪ್ರಮುಖ ಅಂಶಗಳು:

ವಯೋಮಿತಿ: 15 ರಿಂದ 70 ವರ್ಷದೊಳಗಿನ ರೈತರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ.

ಸಮಯ ಮಿತಿ: ಅಪಘಾತ ಸಂಭವಿಸಿದ 30 ದಿನಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯ.

ಅರ್ಜಿ ಎಲ್ಲಿ ಸಲ್ಲಿಸಬೇಕು?:

ನಿಮ್ಮ ವ್ಯಾಪ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಅಗತ್ಯವಿರುವ ದಾಖಲೆಗಳು:

  • ಮರಣ ಪ್ರಮಾಣ ಪತ್ರ (ಸಾವು ಸಂಭವಿಸಿದಲ್ಲಿ).
  • ಪೊಲೀಸ್ ಎಫ್‌ಐಆರ್ (FIR) ಪ್ರತಿ.
  • ವೈದ್ಯಕೀಯ ಮರಣೋತ್ತರ ಪರೀಕ್ಷಾ ವರದಿ (Post-mortem report).
  • ರೈತನ ಪಹಣಿ (RTC) ಅಥವಾ ಕೃಷಿ ಕಾರ್ಮಿಕನೆಂಬ ದಾಖಲೆ.
  • ​ಬ್ಯಾಂಕ್ ಖಾತೆ ವಿವರ ಮತ್ತು ಆಧಾರ್ ಕಾರ್ಡ್.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp