ಮಧ್ಯ ಕರ್ನಾಟಕದ ಜನತೆಗೆ ಸಿಹಿಸುದ್ದಿ: 3 ಡೆಮು ರೈಲುಗಳು ಖಾಯಂ, ದಾವಣಗೆರೆ-ಬಳ್ಳಾರಿ ಪ್ರಯಾಣಿಕರ ದೈನಂದಿನ ಸಂಚಾರ ಇನ್ಮುಂದೆ ಸುಗಮ!

Author Picture
Published On: May 12, 2026
davanagere-ballari-demu-trains

—Election Update—

ದಾವಣಗೆರೆ: ನೈರುತ್ಯ ರೈಲ್ವೆಯು ರಾಜ್ಯದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಮಧ್ಯ ಮತ್ತು ಉತ್ತರ ಕರ್ನಾಟಕದ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಈವರೆಗೆ ವಿಶೇಷ ರೈಲುಗಳಾಗಿ ಕಾರ್ಯಾಚರಣೆ ಮಾಡುತ್ತಿದ್ದ ಮೂರು ಪ್ರಮುಖ ಡೆಮು (DEMU) ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ಇದೀಗ ಖಾಯಂಗೊಳಿಸಿದೆ.

ಈ ಮಹತ್ವದ ನಿರ್ಧಾರದಿಂದ ದಾವಣಗೆರೆ, ಬಳ್ಳಾರಿ, ಹೊಸಪೇಟೆ, ಗದಗ, ಕೊಪ್ಪಳ ಮತ್ತು ಹುಬ್ಬಳ್ಳಿ ಭಾಗದ ದೈನಂದಿನ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ, ಉದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ. ಎಂಟು ಬೋಗಿಗಳನ್ನು ಹೊಂದಿರುವ ಈ ಡೆಮು ರೈಲುಗಳು ದಿನನಿತ್ಯದ ಸಂಚಾರವನ್ನು ಮತ್ತಷ್ಟು ಸುಲಭಗೊಳಿಸಲಿವೆ.

ರೈಲುಗಳ ಸಂಪೂರ್ಣ ವೇಳಾಪಟ್ಟಿ ಮತ್ತು ವಿವರ ಇಲ್ಲಿದೆ:

1. ಬಳ್ಳಾರಿ – ದಾವಣಗೆರೆ – ಬಳ್ಳಾರಿ ಡೆಮು ರೈಲು (ರೈಲು ಸಂಖ್ಯೆ: 76509/76510) ಕಲ್ಯಾಣ ಕರ್ನಾಟಕದ ಬಳ್ಳಾರಿಯನ್ನು ನಮ್ಮ ಮಧ್ಯ ಕರ್ನಾಟಕದ ದಾವಣಗೆರೆಯೊಂದಿಗೆ ಬೆಸೆಯುವ ಪ್ರಮುಖ ರೈಲು ಇದಾಗಿದ್ದು, ಈ ಭಾಗದ ಜನರಿಗೆ ಇದು ಜೀವನಾಡಿಯಾಗಲಿದೆ.

  • ರೈಲು ಸಂಖ್ಯೆ 76509 (ಬಳ್ಳಾರಿ – ದಾವಣಗೆರೆ): ಈ ರೈಲು ಬಳ್ಳಾರಿ ಜಂಕ್ಷನ್‌ನಿಂದ ಬೆಳಗ್ಗೆ 7:50ಕ್ಕೆ ಹೊರಟು, ಹೊಸಪೇಟೆ (ಬೆಳಗ್ಗೆ 9:30), ಕೊಟ್ಟೂರು (ಬೆಳಗ್ಗೆ 11:36), ಹರಪನಹಳ್ಳಿ (ಮಧ್ಯಾಹ್ನ 12:25) ಮಾರ್ಗವಾಗಿ ಮಧ್ಯಾಹ್ನ 1:30ಕ್ಕೆ ದಾವಣಗೆರೆ ತಲುಪಲಿದೆ.

  • ರೈಲು ಸಂಖ್ಯೆ 76510 (ದಾವಣಗೆರೆ – ಬಳ್ಳಾರಿ): ದಾವಣಗೆರೆಯಿಂದ ಮಧ್ಯಾಹ್ನ 2:30ಕ್ಕೆ ಹೊರಟು, ಅದೇ ಮಾರ್ಗವಾಗಿ ಹಿಂತಿರುಗಿ ರಾತ್ರಿ 8:00 ಗಂಟೆಗೆ ಬಳ್ಳಾರಿ ತಲುಪಲಿದೆ.

2. ಹೊಸಪೇಟೆ – ಬಳ್ಳಾರಿ – ಹೊಸಪೇಟೆ ಡೆಮು ರೈಲು (ರೈಲು ಸಂಖ್ಯೆ: 76511/76512) ಬಳ್ಳಾರಿ ಮತ್ತು ಹೊಸಪೇಟೆ ನಡುವೆ ಪ್ರತಿದಿನ ಸಂಚರಿಸುವ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಈ ರೈಲು ಬಹಳ ಉಪಯುಕ್ತವಾಗಿದೆ.

  • ರೈಲು ಸಂಖ್ಯೆ 76511 (ಹೊಸಪೇಟೆ – ಬಳ್ಳಾರಿ): ಮುಂಜಾನೆ 6:00 ಗಂಟೆಗೆ ಹೊಸಪೇಟೆಯಿಂದ ಹೊರಟು, ತೋರಣಗಲ್ಲು (6:29) ಮಾರ್ಗವಾಗಿ ಬೆಳಗ್ಗೆ 7:40ಕ್ಕೆ ಬಳ್ಳಾರಿ ಜಂಕ್ಷನ್ ತಲುಪಲಿದೆ.

  • ರೈಲು ಸಂಖ್ಯೆ 76512 (ಬಳ್ಳಾರಿ – ಹೊಸಪೇಟೆ): ಬಳ್ಳಾರಿಯಿಂದ ರಾತ್ರಿ 8:10ಕ್ಕೆ ಹೊರಟು ರಾತ್ರಿ 8:50ಕ್ಕೆ ಹೊಸಪೇಟೆ ತಲುಪಲಿದೆ.

3. ಹೊಸಪೇಟೆ – ಹುಬ್ಬಳ್ಳಿ – ಹೊಸಪೇಟೆ ಡೆಮು ರೈಲು (ರೈಲು ಸಂಖ್ಯೆ: 76507/76508) ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಹೊಸಪೇಟೆಯಿಂದ ವಾಣಿಜ್ಯ ನಗರಿ ಹುಬ್ಬಳ್ಳಿಗೆ ನೇರ ಸಂಪರ್ಕ ಕಲ್ಪಿಸುವ ರೈಲು ಇದಾಗಿದೆ.

  • ರೈಲು ಸಂಖ್ಯೆ 76507 (ಹೊಸಪೇಟೆ – ಹುಬ್ಬಳ್ಳಿ): ಹೊಸಪೇಟೆಯಿಂದ ರಾತ್ರಿ 10:00 ಗಂಟೆಗೆ ಹೊರಟು, ಕೊಪ್ಪಳ (ರಾತ್ರಿ 10:36), ಗದಗ (ರಾತ್ರಿ 11:36) ಮಾರ್ಗವಾಗಿ ಮಧ್ಯರಾತ್ರಿ 12:35ಕ್ಕೆ ಹುಬ್ಬಳ್ಳಿ ತಲುಪಲಿದೆ. (ಇದು ಮೇ 16, 2026 ರಿಂದ ಅನ್ವಯವಾಗಲಿದೆ).

  • ರೈಲು ಸಂಖ್ಯೆ 76508 (ಹುಬ್ಬಳ್ಳಿ – ಹೊಸಪೇಟೆ): ಹುಬ್ಬಳ್ಳಿಯಿಂದ ರಾತ್ರಿ 11:30ಕ್ಕೆ ಹೊರಟು ಮುಂಜಾನೆ 2:05ಕ್ಕೆ ಹೊಸಪೇಟೆ ತಲುಪಲಿದೆ. (ಇದು ಮೇ 10, 2026 ರಿಂದ ಅನ್ವಯ).

ಹೆಚ್ಚಿನ ಮಾಹಿತಿಗಾಗಿ: ರೈಲಿನ ನಿಖರ ಸಮಯ, ನಿಲ್ದಾಣ ಮತ್ತು ಇತರ ಮಾಹಿತಿಗಾಗಿ ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ (indianrailways.gov.in) ಅಥವಾ NTES ಆ್ಯಪ್ ಬಳಸಬಹುದು. ಇಲ್ಲವೇ ರೈಲ್ವೆ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರವಾಗಿರುವ ದಾವಣಗೆರೆಗೆ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಸಂಪರ್ಕ ಮತ್ತಷ್ಟು ಗಟ್ಟಿಯಾಗಲಿದ್ದು, ಇದು ನಮ್ಮ ಭಾಗದ ಅಭಿವೃದ್ಧಿಗೆ ದೊಡ್ಡ ಮಟ್ಟದ ಪೂರಕ ಕೊಡುಗೆ ನೀಡಲಿದೆ. ದೈನಂದಿನ ರೈಲು ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Home
Web Stories
Instagram
WhatsApp