ನಮ್ಮ ನೀರು ನಮ್ಮ ಹಕ್ಕು: ಚನ್ನಗಿರಿಯಲ್ಲಿ ನೂರಾರು ರೈತರಿಂದ ಬೃಹತ್ ಬೈಕ್ ರ್ಯಾಲಿ; ಸರ್ಕಾರಕ್ಕೆ ಎಚ್ಚರಿಕೆ!

Channagiri farmers bike rally protest for Ubrani and Sastehalli irrigation project water rights.
— ಚನ್ನಗಿರಿಯಲ್ಲಿ "ನಮ್ಮ ನೀರು - ನಮ್ಮ ಹಕ್ಕು" ಘೋಷಣೆಯಡಿ ಉಬ್ರಾಣಿ ಮತ್ತು ಸಾಸ್ಟೆಹಳ್ಳಿ ಏತ ನೀರಾವರಿ ಯೋಜನೆಗಾಗಿ ರೈತರು ನಡೆಸಿದ ಬೃಹತ್ ಬೈಕ್ ರ್ಯಾಲಿ.

—Advertisement—

ಚನ್ನಗಿರಿ: “ಬೆಳೆಗಳಿಗೆ ನೀರಿಲ್ಲ, ಬದುಕಿಗೆ ದಾರಿಯಿಲ್ಲ” ಎಂದು ಆಕ್ರೋಶ ಹೊರಹಾಕಿದ ಚನ್ನಗಿರಿ ತಾಲ್ಲೂಕಿನ ರೈತರು ಇಂದು ಬೃಹತ್ ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ಉಬ್ರಾಣಿ ಹಾಗೂ ಸಾಸ್ಟೆಹಳ್ಳಿ ಏತ ನೀರಾವರಿ ಯೋಜನೆಗಳಿದ್ದರೂ ಸಹ, ಹಲವು ಗ್ರಾಮಗಳು ಇಂದಿಗೂ ನೀರಿನ ಸೌಲಭ್ಯದಿಂದ ವಂಚಿತವಾಗಿರುವುದನ್ನು ಖಂಡಿಸಿ ‘ನಮ್ಮ ನೀರು – ನಮ್ಮ ಹಕ್ಕು’ ಘೋಷಣೆಯಡಿ ಬೈಕ್ ರ್ಯಾಲಿ ನಡೆಸಲಾಯಿತು.

ಬೆಂಕಿಕೆರೆ ಸನ್ನಿಧಿಯಿಂದ ತಹಶೀಲ್ದಾರ್ ಕಚೇರಿಯವರೆಗೆ ಹರಿದ ಬಂದ ಜನಸಾಗರ

Channagiri farmers bike rally protest for Ubrani and Sastehalli irrigation project water rights.
ಚನ್ನಗಿರಿಯಲ್ಲಿ “ನಮ್ಮ ನೀರು – ನಮ್ಮ ಹಕ್ಕು” ಘೋಷಣೆಯಡಿ ಉಬ್ರಾಣಿ ಮತ್ತು ಸಾಸ್ಟೆಹಳ್ಳಿ ಏತ ನೀರಾವರಿ ಯೋಜನೆಗಾಗಿ ರೈತರು ನಡೆಸಿದ ಬೃಹತ್ ಬೈಕ್ ರ್ಯಾಲಿ.

ಗುರುವಾರ ಬೆಳಿಗ್ಗೆ ತಾಲ್ಲೂಕಿನ ಪ್ರಸಿದ್ಧ ಬೆಂಕಿಕೆರೆ ಕರಿಯಮ್ಮ ದೇವಿಯ ಸನ್ನಿಧಿಯಲ್ಲಿ ರೈತರು ಸಮಾವೇಶಗೊಂಡರು. ಅಲ್ಲಿಂದ ಆರಂಭವಾದ ಬೈಕ್ ರ್ಯಾಲಿಗೆ ಮುಖಂಡರಾದ ವಡ್ಡಾಲ್ ಜಗದೀಶ್ ಅವರು ಚಾಲನೆ ನೀಡಿದರು. ನೂರಾರು ಬೈಕ್‌ಗಳಲ್ಲಿ ಆಗಮಿಸಿದ ರೈತರು ಚನ್ನಗಿರಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಯೋಜನೆ ಇದ್ದೂ ಪ್ರಯೋಜನವಿಲ್ಲ: ರೈತರ ಅಳಲು

Channagiri farmers bike rally protest for Ubrani and Sastehalli irrigation project water rights.

ರ್ಯಾಲಿಯ ನಂತರ ತಹಶೀಲ್ದಾರ್ ಕಚೇರಿಗೆ ತೆರಳಿದ ರೈತರು ಮನವಿ ಸಲ್ಲಿಸಿ ಮಾತನಾಡಿದರು. “ಉಬ್ರಾಣಿ ಮತ್ತು ಸಾಸ್ಟೆಹಳ್ಳಿಯಂತಹ ಬೃಹತ್ ಏತ ನೀರಾವರಿ ಯೋಜನೆಗಳು ಪಕ್ಕದಲ್ಲೇ ಇದ್ದರೂ, ನಮ್ಮ ಭಾಗದ ಗ್ರಾಮಗಳಿಗೆ ಒಂದು ಹನಿ ನೀರು ಸಿಗುತ್ತಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನಾವು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಅಂತರ್ಜಲ ಕುಸಿದು ಕೃಷಿ ಮಾಡುವುದು ಕಷ್ಟವಾಗಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ವಂಚಿತ ಗ್ರಾಮಗಳಿಗೆ ಕೂಡಲೇ ನೀರಾವರಿ ಸೌಲಭ್ಯ ಕಲ್ಪಿಸದಿದ್ದರೆ ಮುಂಬರುವ ದಿನಗಳಲ್ಲಿ ಅನಿರ್ದಿಷ್ಟಾವಧಿ ಧರಣಿ ಅಥವಾ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp