ಚಿತ್ರದುರ್ಗ: ಕೃಷಿಯಲ್ಲಿ ಮಣ್ಣಿನ ಆರೋಗ್ಯ ಮತ್ತು ಸುಸ್ಥಿರ ಇಳುವರಿ ಪಡೆಯಲು ರೈತರು ಕೇವಲ ಡಿ.ಎ.ಪಿ (DAP) ರಸಗೊಬ್ಬರಕ್ಕೆ ಅಂಟಿಕೊಳ್ಳದೆ, ಪರ್ಯಾಯವಾಗಿ ಲಭ್ಯವಿರುವ ‘ಸಂಯುಕ್ತ ರಸಗೊಬ್ಬರಗಳನ್ನು’ (Complex Fertilizers) ಬಳಸಬೇಕು ಎಂದು ಚಿತ್ರದುರ್ಗ ಜಂಟಿ ಕೃಷಿ ನಿರ್ದೇಶಕರಾದ ಬಿ. ಮಂಜುನಾಥ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೋಷಕಾಂಶಗಳ ಸಮತೋಲನ ತಪ್ಪುತ್ತಿದೆ: ಎಚ್ಚರಿಕೆ
ಸಸ್ಯಗಳ ಸರ್ವತೋಮುಖ ಬೆಳವಣಿಗೆಗೆ ಒಟ್ಟು 17 ಪೋಷಕಾಂಶಗಳ ಅಗತ್ಯವಿದೆ. ಇವುಗಳಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅತ್ಯಂತ ಪ್ರಮುಖವಾದವು. ಪ್ರಸ್ತುತ ರೈತರು ಡಿ.ಎ.ಪಿ ಮತ್ತು ಯೂರಿಯಾವನ್ನು ಮಿತಿಮೀರಿ ಬಳಸುತ್ತಿರುವುದರಿಂದ ಮಣ್ಣಿನಲ್ಲಿ ಪೊಟ್ಯಾಷ್ ಅಂಶ ಕ್ಷೀಣಿಸುತ್ತಿದೆ.
ವೈಜ್ಞಾನಿಕ ಶಿಫಾರಸ್ಸಿನಂತೆ ಈ ಪೋಷಕಾಂಶಗಳ ಅನುಪಾತವು 4:2:1 ಇರಬೇಕು. ಆದರೆ, ಪ್ರಸ್ತುತ ಬಳಕೆಯು 6.0:3.9:1.0 ರಷ್ಟಿದ್ದು, ಅಸಮತೋಲನದಿಂದಾಗಿ ಬೆಳೆಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಯಾವೆಲ್ಲಾ ಪರ್ಯಾಯ ಗೊಬ್ಬರಗಳು ಲಭ್ಯ?
ಡಿ.ಎ.ಪಿ ಗೊಬ್ಬರಕ್ಕೆ ಸಮಾನವಾಗಿ ಅಥವಾ ಅದಕ್ಕಿಂತ ಉತ್ತಮವಾಗಿ ಕೆಲಸ ಮಾಡುವ ವಿವಿಧ ಗ್ರೇಡ್‌ಗಳ ಸಂಯುಕ್ತ ಗೊಬ್ಬರಗಳು ಮಾರುಕಟ್ಟೆಯಲ್ಲಿವೆ:
-
- ಗಂಧಕದ ಅಂಶವಿರುವ ಗೊಬ್ಬರಗಳು: 20:20:0:13 ಮತ್ತು 16:20:0:13.
- ಇತರ ಗ್ರೇಡ್‌ಗಳು: 15:15:15, 10:26:26, 12:32:16, 17:17:17 ಹಾಗೂ 19:19:19.
- ರಂಜಕದ ಮೂಲಗಳು: ಸಿಂಗಲ್ ಸೂಪರ್ ಫಾಸ್ಫೇಟ್ (SSP), ಪ್ರಾಂ (PROM), ಟ್ರಿಪಲ್ ಸೂಪರ್ ಫಾಸ್ಫೇಟ್ (TSP) ಮತ್ತು ನ್ಯಾನೋ ಡಿ.ಎ.ಪಿ.
ಬಣ್ಣಕ್ಕೆ ಮರುಳಾಗಬೇಡಿ: “ಮಾರುಕಟ್ಟೆಯಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಡಿ.ಎ.ಪಿ ಅರಳುಗಳು ಸಿಗುತ್ತಿವೆ. ಇವುಗಳ ಬಣ್ಣ ಬೇರೆಯಾಗಿದ್ದರೂ ಪೋಷಕಾಂಶಗಳ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರೈತರು ಯಾವುದೇ ಆತಂಕವಿಲ್ಲದೆ ಲಭ್ಯವಿರುವ ಬಣ್ಣದ ಗೊಬ್ಬರವನ್ನು ಬಳಸಬಹುದು,” ಎಂದು ಮಂಜುನಾಥ್ ಅವರು ಸ್ಪಷ್ಟಪಡಿಸಿದ್ದಾರೆ.
ರೈತರು ತಮ್ಮ ಜಮೀನಿನ ಮಣ್ಣಿನ ಆರೋಗ್ಯ ಕಾಪಾಡಲು ಇಂದೇ ಸಮತೋಲಿತ ರಸಗೊಬ್ಬರ ಬಳಕೆಗೆ ಆದ್ಯತೆ ನೀಡಬೇಕೆಂದು ಇಲಾಖೆ ಮನವಿ ಮಾಡಿದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
