ಚಿತ್ರದುರ್ಗ: ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಜಿಲ್ಲಾಸ್ಪತ್ರೆ ಹಾಗೂ ದಾವಣಗೆರೆಯ ಪ್ರಸಿದ್ಧ ಎಸ್.ಎಸ್. ನಾರಾಯಣ ಹೆಲ್ತ್ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಇನ್ಮುಂದೆ ಪ್ರತಿ ತಿಂಗಳ ಮೊದಲನೇ ಬುಧವಾರದಂದು ಮಕ್ಕಳ ಹೃದಯ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನವಾಗಿ ಕಾರ್ಯಾಚರಿಸುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ (MCH) ಈ ವಿಶೇಷ ಉಚಿತ ವೈದ್ಯಕೀಯ ಸೇವೆ ಸಾರ್ವಜನಿಕರಿಗೆ ಲಭ್ಯವಿರಲಿದೆ.
ಶಿಬಿರದ ಸಂಪೂರ್ಣ ವಿವರ ಹಾಗೂ ವೇಳಾಪಟ್ಟಿ
ಮಕ್ಕಳಲ್ಲಿ ಈ ಲಕ್ಷಣಗಳಿದ್ದರೆ ತಕ್ಷಣ ಸಂಪರ್ಕಿಸಿ
ಮಕ್ಕಳ ಬೆಳವಣಿಗೆಯ ಹಂತದಲ್ಲಿ ಕಂಡುಬರುವ ಕೆಲವು ಪ್ರಮುಖ ದೈಹಿಕ ಬದಲಾವಣೆ ಅಥವಾ ಲಕ್ಷಣಗಳನ್ನು ಪೋಷಕರು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಕೆಳಗಿನ ತೊಂದರೆಗಳಿದ್ದಲ್ಲಿ ಮಗುವನ್ನು ತಕ್ಷಣವೇ ಶಿಬಿರಕ್ಕೆ ಕರೆತಂದು ಉಚಿತ ತಪಾಸಣೆ ಮಾಡಿಸಿಕೊಳ್ಳಲು ಕೋರಲಾಗಿದೆ:
- ಮಕ್ಕಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ವಿವಿಧ ಸೋಂಕುಗಳು ಮತ್ತು ಮರುಕಳಿಸುವ ತೀವ್ರ ಕೆಮ್ಮು.
- ಮಗುವಿನ ಚರ್ಮ, ಕೈಕಾಲು ಉಗುರುಗಳು ಅಥವಾ ತುಟಿಗಳು ನೀಲಿ ಬಣ್ಣಕ್ಕೆ ತಿರುಗುವುದು (Cyanosis).
- آಟವಾಡುವಾಗ, ಓಡುವಾಗ ಅಥವಾ ಸಾಮಾನ್ಯ ಸಮಯದಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು ಹಾಗೂ ಏದುಸಿರು ಬಿಡುವುದು.
- ಅನಿಯಮಿತವಾಗಿ ಕಂಡುಬರುವ ಎದೆಬಡಿತ ಅಥವಾ ಅತ್ಯಂತ ವೇಗದ ಹೃದಯ ಬಡಿತ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
