ಚಿತ್ರದುರ್ಗ: ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಆಸಿಡ್ ಸುರಿದಿದ್ದ ಪತಿ ಅರೆಸ್ಟ್!

Chitradurga Police arrested Suhel Basha for acid attack on wife and relatives, Karnataka Police News.
— ಪತ್ನಿಯ ಮೇಲೆ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ಸುಹೇಲ್ ಬಾಷಾನನ್ನು ಬಂಧಿಸಿದ ಚಿತ್ರದುರ್ಗ ಕೋಟೆ ಪೊಲೀಸರು.

—Election Update—

ಚಿತ್ರದುರ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಆಕೆಯ ಸಂಬಂಧಿಕರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಆಸಿಡ್ ಸುರಿದು ಪರಾರಿಯಾಗಿದ್ದ ಭೀಕರ ಘಟನೆಯ ಆರೋಪಿಯನ್ನು ಚಿತ್ರದುರ್ಗದ ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:

ದಿನಾಂಕ 19.03.2026 ರಂದು ಚಿತ್ರದುರ್ಗದ ಬಾಲಾಜಿ ಬಡಾವಣೆಯಲ್ಲಿ ವಾಸವಿದ್ದ ತಹಸೀನಾಬಾನು ಮತ್ತು ಆಕೆಯ ಸಂಬಂಧಿಕರ ಮೇಲೆ ಈ ದಾಳಿ ನಡೆದಿತ್ತು. ಆರೋಪಿ ಸುಹೇಲ್ ಬಾಷಾ, ತನ್ನ ಪತ್ನಿ ತಹಸೀನಾಬಾನು ಬೆಂಗಳೂರಿಗೆ ಹೋಗಿ ಒಂಟಿಯಾಗಿ ಬದುಕುತ್ತಿದ್ದಾಳೆ ಎಂಬ ದ್ವೇಷದಿಂದ ಆಕೆ ಇದ್ದ ಮನೆಗೆ ನುಗ್ಗಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ತನ್ನ ಕೈಯಲ್ಲಿದ್ದ ಮಚ್ಚಿನಿಂದ ಆಕೆಯ ಬೆನ್ನಿಗೆ ಹೊಡೆದು ತೀವ್ರ ರಕ್ತಗಾಯ ಮಾಡಿದ್ದಾನೆ.

ಅಷ್ಟಕ್ಕೇ ನಿಲ್ಲದ ಈತ, ತಾನು ತಂದಿದ್ದ ಆಸಿಡ್ ಅನ್ನು ಪತ್ನಿಯ ಮೇಲೆ ಸುರಿದಿದ್ದಾನೆ. ಈ ವೇಳೆ ಆಕೆಯನ್ನು ರಕ್ಷಿಸಲು ಬಂದ ಸಂಬಂಧಿಕರಾದ ನಗ್ಮಾ ನಾಯ್ಕ್, ನೇಹಾ, ರೋಷಿನಿ ಮತ್ತು ಇಕ್ರಾ ಫಾತೀಮಾ ಅವರ ಮೇಲೂ ಆಸಿಡ್ ಬಿದ್ದಿದ್ದು, ಎಲ್ಲರೂ ಸುಟ್ಟ ಗಾಯಗಳಿಂದ ನರಳುತ್ತಿದ್ದಾರೆ.

ಪೊಲೀಸ್ ಕಾರ್ಯಾಚರಣೆ:

ಘಟನೆ ನಡೆದ ಬೆನ್ನಲ್ಲೇ ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು (IPS) ಮಾರ್ಗದರ್ಶನದಲ್ಲಿ 3 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತೀವ್ರ ಹುಡುಕಾಟ ನಡೆಸಿದ ತಂಡವು 23.03.2026 ರಂದು ಆರೋಪಿ ಸುಹೇಲ್ ಬಾಷಾನನ್ನು ಪತ್ತೆ ಹಚ್ಚಿ ಬಂಧಿಸಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್ಪಿಯವರು ಶ್ಲಾಘಿಸಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp