ಚಿತ್ರದುರ್ಗ: ನಗರದ ವಿದ್ಯುತ್ ಗ್ರಾಹಕರಿಗೆ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಲಾಗಿದೆ. ಚಿತ್ರದುರ್ಗ ನಗರ ಉಪವಿಭಾಗ ಕಾರ್ಯ ಮತ್ತು ಪಾಲನಾ ಘಟಕ-3ರ ವ್ಯಾಪ್ತಿಯಲ್ಲಿ ಇಂದು (ಮೇ 30) ಅತ್ಯಗತ್ಯ ನಿರ್ವಹಣಾ ಕೆಲಸಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ.
ಯಾವ ಸಮಯದಲ್ಲಿ ಕರೆಂಟ್ ಇರಲ್ಲ?
ಚಿತ್ರದುರ್ಗದ 220/66/11 ಕೆ.ವಿ ಎಸ್.ಆರ್.ಎಸ್ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ‘ಎಫ್-1 ಕಾಪರ್‍ಮೈನ್ಸ್’ ಮಾರ್ಗದಲ್ಲಿ ತುರ್ತು ದುರಸ್ತಿ ಕಾರ್ಯ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಮೇ 30ರಂದು (ಇಂದು) ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ.

ವಿದ್ಯುತ್ ವ್ಯತ್ಯಯವಾಗುವ ಗ್ರಾಮಗಳು/ಪ್ರದೇಶಗಳು:
ಚಿತ್ರದುರ್ಗ ನಗರದ ಉಪ ವಿಭಾಗ ಘಟಕ-3ರ ಅಡಿಯಲ್ಲಿ ಬರುವ ಈ ಕೆಳಗಿನ ಗ್ರಾಮಗಳು ಹಾಗೂ ಅವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗೃಹ ಬಳಕೆ ವಿದ್ಯುತ್ ಹಾಗೂ ಐ.ಪಿ. ಸೆಟ್‌ಗಳ (ಪಂಪ್‌ಸೆಟ್) ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಳ್ಳಲಿದೆ:
- ಕುಂಚಿಗನಹಾಳ್
- ಡಿ.ಎಸ್.ಹಳ್ಳಿ
- ಎಣ್ಣಿಗೆರೆ
- ಕ್ಯಾದಿಗೆರೆ
- ಓರಗುಂಟನಳಿಗೆ
- ಕಸವನಹಳ್ಳಿ
- ಇಂಗಳದಾಳ್
- ಕುರುಮರಡಿಕೆರೆ
- ಕೆನ್ನೆಡಲು
- ಬಾಪೂಜಿ ಕಾಲೋನಿ
“ವಿದ್ಯುತ್ ಲೈನ್ ನಿರ್ವಹಣಾ ಕಾರ್ಯಕ್ಕೆ ಸಾರ್ವಜನಿಕರು ಮತ್ತು ರೈತ ಬಾಂಧವರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ. ಆದ್ದರಿಂದ ಈ ಭಾಗದ ಸಾರ್ವಜನಿಕರು ಮುನ್ನೆಚ್ಚರಿಕೆಯಾಗಿ ಇಂದೇ ತಮ್ಮ ಅಗತ್ಯ ಕೆಲಸಗಳನ್ನು ಮುಗಿಸಿಕೊಳ್ಳುವುದು ಸೂಕ್ತ.”
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
