ಚಿತ್ರದುರ್ಗ ಸಾಹಿತ್ಯ ಸಮ್ಮೇಳನ: ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಇಂದು ಅಕ್ಷರಶಃ ಕನ್ನಡದ ಕಂಪು ಸೂಸುವ ಹಬ್ಬದ ಮನೆಯಂತಾಗಿತ್ತು. ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಸಾಹಿತಿಯೊಬ್ಬರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ತವರು ನೆಲದಲ್ಲಿ ಡಾ.ಕೆ.ಆರ್. ಸಂಧ್ಯಾರೆಡ್ಡಿ ಅವರಿಗೆ ಅಭೂತಪೂರ್ವ ಸ್ವಾಗತ ಕೋರಲಾಯಿತು.
ಕೋಟೆನಾಡಿನ ಕನ್ನಡ ಹಬ್ಬಕ್ಕೆ ಅದ್ದೂರಿ ಚಾಲನೆ ದೊರೆತಿದ್ದು, ನಗರದ ಪ್ರಮುಖ ಬೀದಿಗಳು ಹಳದಿ-ಕೆಂಪು ಬಣ್ಣದಲ್ಲಿ ಮಿಂದೆದ್ದವು.
ಚಿತ್ರದುರ್ಗ ಸಾಹಿತ್ಯ ಸಮ್ಮೇಳನ: ಇತಿಹಾಸ ಸೃಷ್ಟಿಸಿದ ಮೆರವಣಿಗೆ
ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಮಹಿಳಾ ಅಧ್ಯಕ್ಷರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಈ ಬಾರಿಯ ಮೆರವಣಿಗೆ ವಿಶೇಷವಾಗಿತ್ತು. ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಸಮ್ಮೇಳನಾಧ್ಯಕ್ಷರಿಗೆ ಗೌರವ ಸಮರ್ಪಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಸುಂದರವಾದ ಆಕಳಿನ ಪ್ರತಿಮೆ, ತಾಯಿ ಭುವನೇಶ್ವರಿ ಹಾಗೂ ಭಾರತ ಮಾತೆಯ ಭಾವಚಿತ್ರಗಳೊಂದಿಗೆ ಅಲಂಕೃತಗೊಂಡಿದ್ದ ಸಾರೋಟಿನಲ್ಲಿ ಅಧ್ಯಕ್ಷರನ್ನು ಕರೆತರುವ ಮೂಲಕ ತವರಿನ ಗೌರವ ನೀಡಲಾಯಿತು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ನಗರದಲ್ಲಿ ಜಾನಪದ ಕಳೆ
ಮೆರವಣಿಗೆಯುದ್ದಕ್ಕೂ ಜಾನಪದ ಕಲಾತಂಡಗಳ ವೈಭವ ಎದ್ದು ಕಾಣುತ್ತಿತ್ತು:
-
ವೀರಗಾಸೆ ಮತ್ತು ಡೊಳ್ಳು ಕುಣಿತದ ಗತ್ತು.
-
ಕೊಂಬು ಕಹಳೆ, ಸಮಾಳಗಳ ನಾದ.
-
ವಿಶೇಷವಾಗಿ ಮಹಿಳಾ ತಮಟೆ ವಾದನ ಮತ್ತು ಶಾರದ ಬ್ರಾಸ್ ಬ್ಯಾಂಡ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು.
ನಗರದ ವೃತ್ತಗಳನ್ನು ಬಂಟಿಂಗ್ಸ್ ಮತ್ತು ಕನ್ನಡ ಬಾವುಟಗಳಿಂದ ಸಿಂಗರಿಸಲಾಗಿತ್ತು. ಭುವನೇಶ್ವರಿ, ಭಕ್ತ ಕನಕದಾಸ, ಬಸವಣ್ಣ ಸೇರಿದಂತೆ ಮಹಾನ್ ಪುರುಷರ ವೇಷಭೂಷಣ ಧರಿಸಿದ ಮಕ್ಕಳು ಮೆರವಣಿಗೆಯ ಅಂದ ಹೆಚ್ಚಿಸಿದರು.
ಮೆರವಣಿಗೆ ಸಾಗಿದ ದಾರಿ
ನಗರದ ಹೃದಯಭಾಗವಾದ ಮಹಾತ್ಮಗಾಂಧಿ ವೃತ್ತದಿಂದ ಆರಂಭವಾದ ಮೆರವಣಿಗೆ, ಬಿ.ಡಿ.ರಸ್ತೆ, ಮಹಾವೀರ ಸರ್ಕಲ್, ಅಂಬೇಡ್ಕರ್ ವೃತ್ತ, ಮದಕರಿನಾಯಕ ಸರ್ಕಲ್, ಜೋಗಿಮಟ್ಟಿ ರಸ್ತೆ ಮಾರ್ಗವಾಗಿ ಸಾಗಿ ಅಂತಿಮವಾಗಿ ಸ್ಟೇಡಿಯಂ ರಸ್ತೆಯ ಜಿಜಿ ಸಮುದಾಯ ಭವನ ತಲುಪಿತು.
ಗಣ್ಯರ ಸಾಥ್
ಈ ಐತಿಹಾಸಿಕ ಕ್ಷಣಕ್ಕೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ, ತಾಲೂಕು ಅಧ್ಯಕ್ಷ ಡಾ. ವಿ.ಎಲ್. ಪ್ರಶಾಂತ್, ಕರವೇ ಅಧ್ಯಕ್ಷ ಟಿ. ರಮೇಶ್, ಕೆ.ಟಿ. ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು, ಸಾಹಿತ್ಯಾಸಕ್ತರು ಹೆಗಲ ಮೇಲೆ ಕನ್ನಡ ಶಾಲು ಹೊದ್ದು ಸಾಕ್ಷಿಯಾದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
