ಚಿತ್ರದುರ್ಗ: ಕೋಟಿ ನಾಡು ಚಿತ್ರದುರ್ಗ ನಗರದಲ್ಲಿ ಕರ್ಕಶ ಶಬ್ದ ಹೊರಸೂಸುತ್ತಾ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಬೈಕ್ಗಳ ವಿರುದ್ಧ ಚಿತ್ರದುರ್ಗ ಸಂಚಾರಿ ಪೊಲೀಸರು ಸದ್ದಿಲ್ಲದೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಿಯಮ ಮೀರಿ ಅಳವಡಿಸಲಾಗಿದ್ದ ಡಿಫೆಕ್ಟಿವ್ (ಮಾರ್ಪಡಿಸಿದ) ಸೈಲೆನ್ಸರ್ಗಳ ವಿರುದ್ಧ ರಸ್ತೆಗಿಳಿದ ಪೊಲೀಸರು, ಒಟ್ಟು 13 ಬೈಕ್ಗಳನ್ನು ವಶಪಡಿಸಿಕೊಂಡು ಭಾರಿ ದಂಡ ವಿಧಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವಕರು ತಮ್ಮ ದ್ವಿಚಕ್ರ ವಾಹನಗಳಿಗೆ, ವಿಶೇಷವಾಗಿ ಬುಲೆಟ್ ಹಾಗೂ ಸ್ಪೋರ್ಟ್ಸ್ ಬೈಕ್ಗಳಿಗೆ ಕಂಪನಿಯ ಮೂಲ ಸೈಲೆನ್ಸರ್ಗಳನ್ನು ತೆಗೆದು, ಅತಿ ಹೆಚ್ಚು ಸೌಂಡ್ ಬರುವಂತಹ ಪಟಾಕಿ ಹಾಗೂ ಕರ್ಕಶ ಶಬ್ದದ ಸೈಲೆನ್ಸರ್ಗಳನ್ನು ಅಳವಡಿಸುತ್ತಿದ್ದರು. ಇದರಿಂದ ರಸ್ತೆಯಲ್ಲಿ ಹೋಗುವ ವೃದ್ಧರು, ಮಕ್ಕಳು ಹಾಗೂ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿತ್ತು. ಈ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು.

ಪೊಲೀಸರ ಖಡಕ್ ಆಕ್ಷನ್:
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸಿದ ಚಿತ್ರದುರ್ಗ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದ ಪ್ರಮುಖ ವೃತ್ತಗಳಲ್ಲಿ ವಿಶೇಷ ವಾಹನ ತಪಾಸಣೆ (Special Drive) ಹಮ್ಮಿಕೊಂಡಿದ್ದರು. ಈ ವೇಳೆ ಸಾರ್ವಜನಿಕ ರಸ್ತೆಗಳಲ್ಲಿ ಅತಿಯಾದ ಹಾರ್ನ್ ಹಾಗೂ ಕರ್ಕಶ ಶಬ್ದ ಮಾಡುತ್ತಾ ಸಾಗುತ್ತಿದ್ದ 13 ಬೈಕ್ಗಳನ್ನು ತಡೆದು ನಿಲ್ಲಿಸಿ, ವಶಕ್ಕೆ ಪಡೆದಿದ್ದಾರೆ.

ಭಾರಿ ದಂಡ, ಸೈಲೆನ್ಸರ್ ಅಮಾನತು:
ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿ ಬೈಕ್ ಸವಾರರು ಅಳವಡಿಸಿಕೊಂಡಿದ್ದ ಎಲ್ಲಾ ಡಿಫೆಕ್ಟಿವ್ ಸೈಲೆನ್ಸರ್ಗಳನ್ನು ಸ್ಥಳದಲ್ಲೇ ಬಿಚ್ಚಿಸಿ, ಅವುಗಳನ್ನು ಪೊಲೀಸರು ಮುಟ್ಟುಗೋಲು (ಅಮಾನತು) ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ನಿಯಮ ಉಲ್ಲಂಘಿಸಿದ ಪ್ರತಿಯೊಬ್ಬ ಬೈಕ್ ಸವಾರನಿಗೂ ಕಾನೂನು ರೀತ್ಯಾ ಭಾರಿ ದಂಡ ವಿಧಿಸಲಾಗಿದೆ. ವಾಹನಗಳಿಗೆ ಕಂಪನಿ ನಿಯಮಾವಳಿ ಪ್ರಕಾರ ಇರುವ ಸೈಲೆನ್ಸರ್ಗಳನ್ನು ಮಾತ್ರ ಬಳಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
