ಕೊಬ್ಬರಿ ಬೆಲೆ: “ತೆಂಗು ಬೆಳೆದವ ಕೆಂಗಗೆಟ್ಟ” ಎಂಬ ಕಾಲ ಹೋಯ್ತು! ಮಧ್ಯಕರ್ನಾಟಕದ ರೈತರಿಗೆ ಈಗ ಜಾಕ್‌ಪಾಟ್ ಹೊಡೆದಿದೆ. ಇತಿಹಾಸದಲ್ಲೇ ಕಾಣದ ಬೆಲೆ ಕೊಬ್ಬರಿಗೆ ಸಿಗುತ್ತಿದೆ.
10 ವರ್ಷಗಳ ಹಿಂದೆ ₹19,600 ರೂಪಾಯಿಗೆ ಮುಟ್ಟಿದ್ದೇ ದಾಖಲೆಯಾಗಿತ್ತು. ಆದರೆ ಫೆಬ್ರವರಿ 3 ರಂದು ಉಂಡೆ ಕೊಬ್ಬರಿ ಬರೋಬ್ಬರಿ 30 ಸಾವಿರದ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ.
📈
ಬೆಲೆ ಏರಿಕೆಗೆ 3 ಮುಖ್ಯ ಕಾರಣಗಳು
- 1. ಉತ್ತರ ಭಾರತದ ಡಿಮ್ಯಾಂಡ್: ಉತ್ತರ ಭಾರತದಲ್ಲಿ ಅಡುಗೆಗೆ ಕೊಬ್ಬರಿ ಎಣ್ಣೆ ಬಳಕೆ ಹೆಚ್ಚಾಗಿದ್ದು, ಅಲ್ಲಿಂದ ಭಾರಿ ಬೇಡಿಕೆ ಬರುತ್ತಿದೆ.
- 2. ಇಳುವರಿ ಕುಸಿತ: ತಮಿಳುನಾಡು ಮತ್ತು ಕೇರಳದಲ್ಲಿ ತೆಂಗಿನ ಇಳುವರಿ ಕಡಿಮೆಯಾಗಿದೆ. ಹೀಗಾಗಿ ವರ್ತಕರು ಕರ್ನಾಟಕದತ್ತ ಮುಖ ಮಾಡಿದ್ದಾರೆ.
- 3. ಸ್ಥಳೀಯ ಸಮಸ್ಯೆ: ರೋಗಬಾಧೆಯಿಂದ ಚಿತ್ರದುರ್ಗ, ಹಿರಿಯೂರು ಭಾಗದಲ್ಲಿ ಆವಕ ಕಡಿಮೆಯಾಗಿದೆ. ಸರಕು ಕಡಿಮೆ, ಬೆಲೆ ಜಾಸ್ತಿ!
🔥 ತೆಂಗಿನ ಚಿಪ್ಪಿಗೂ ಬಂತು ಬೆಲೆ!
ಕೇವಲ ಕೊಬ್ಬರಿ ಮಾತ್ರವಲ್ಲ, ಒಲೆಗೆ ಹಾಕುತ್ತಿದ್ದ ತೆಂಗಿನ ಚಿಪ್ಪು (Shell) ಕೂಡ ಈಗ ಬಂಗಾರವಾಗಿದೆ. ಪ್ರತಿ ಚಿಪ್ಪಿಗೆ ₹1.50 ರೂಪಾಯಿ ನೀಡಿ ಗುಜರಿ ವ್ಯಾಪಾರಿಗಳು ಮನೆ ಬಾಗಿಲಲ್ಲೇ ಖರೀದಿಸುತ್ತಿದ್ದಾರೆ.
ರೈತರ ಮಾತು: “ಬೆಲೆ ಬಂದಾಗ ಬೆಳೆ ಕೈಯಲ್ಲಿಲ್ಲ ಎಂಬ ಕೊರಗು ಕೆಲವರಲ್ಲಿದ್ದರೆ, ಬೆಳೆ ಉಳಿಸಿಕೊಂಡ ರೈತರಿಗೆ ಸುಗ್ಗಿಯೋ ಸುಗ್ಗಿ!”
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
