ದಾವಣಗೆರೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯ ಹಣ ದುರುಪಯೋಗವಾಗುತ್ತಿರುವ ಆಘಾತಕಾರಿ ಪ್ರಕರಣವೊಂದು ದಾವಣಗೆರೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಮೃತಪಟ್ಟಿರುವ ಸಾವಿರಾರು ಮಹಿಳೆಯರ ಖಾತೆಗಳಿಗೆ ಸದ್ದಿಲ್ಲದೆ ಜಮೆಯಾಗುತ್ತಿದ್ದ ತಲಾ 2,000 ರೂಪಾಯಿ ಹಣವನ್ನು ಅವರ ಸಂಬಂಧಿಕರೇ ಎಟಿಎಂ ಮೂಲಕ ಡ್ರಾ ಮಾಡುತ್ತಿದ್ದ ತಾಂತ್ರಿಕ ವಂಚನೆಯನ್ನು ಜಿಲ್ಲಾಡಳಿತ ಪತ್ತೆಹಚ್ಚಿದೆ.
ನಡೆದಿದ್ದೇನು? ತಾಂತ್ರಿಕ ಲೋಪದ ಲಾಭ ಪಡೆದ ಸಂಬಂಧಿಕರು!
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 3,885 ಫಲಾನುಭವಿ ಮಹಿಳೆಯರು ಮರಣ ಹೊಂದಿದ್ದರೂ, ಅವರ ಕುಟುಂಬಸ್ಥರು ಈ ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸದೆ ಮುಚ್ಚಿಟ್ಟಿದ್ದರು. ತಾಂತ್ರಿಕ ಲೋಪದ ಕಾರಣದಿಂದಾಗಿ ಮೃತರ ಖಾತೆಗಳಿಗೂ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ಯಥಾಪ್ರಕಾರ ಜಮೆಯಾಗುತ್ತಿತ್ತು. ಇದನ್ನು ಅರಿತ ಮೃತರ ಕುಟುಂಬದ ಸದಸ್ಯರು, ಅವರ ಎಟಿಎಂ ಕಾರ್ಡ್‌ಗಳನ್ನು ಬಳಸಿ ಹಣವನ್ನು ನಗದೀಕರಿಸಿಕೊಳ್ಳುತ್ತಿದ್ದರು.

ಅಧಿಕಾರಿಗಳ ಅದಿರು ದಾಳಿ: ₹36.26 ಲಕ್ಷ ಸರ್ಕಾರಕ್ಕೆ ವಾಪಸ್
ಈ ವ್ಯವಸ್ಥಿತ ವಂಚನೆಯ ಸುಳಿವು ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ದಾವಣಗೆರೆ ಜಿಲ್ಲಾ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಾಥಮಿಕ ಹಂತವಾಗಿ ಜಿಲ್ಲೆಯ 398 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದ್ದು, ಅವುಗಳಲ್ಲಿದ್ದ ₹36.26 ಲಕ್ಷ ಹಣವನ್ನು ಯಶಸ್ವಿಯಾಗಿ ಜಪ್ತಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಮರುಪಾವತಿ ಮಾಡಿಸಿದ್ದಾರೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಅಧಿಕಾರಿಗಳ ಎಚ್ಚರಿಕೆ: ಈಗಾಗಲೇ ಮೃತರ ಖಾತೆಗಳಿಂದ ಡ್ರಾ ಮಾಡಲಾಗಿರುವ ಬಾಕಿ ಮೊತ್ತವನ್ನು ಸಂಬಂಧಪಟ್ಟ ಕುಟುಂಬಸ್ಥರಿಂದ ಪತ್ತೆಹಚ್ಚಿ, ಕಾನೂನು ರೀತ್ಯಾ ಕಠಿಣ ಕ್ರಮಗಳ ಮೂಲಕ ವಸೂಲಿ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ದುರುಪಯೋಗ ತಡೆಯಲು ಮುಂದಿನ ದಿನಗಳಲ್ಲಿ ಫಲಾನುಭವಿಗಳ ‘ಜೀವಿತ ಪ್ರಮಾಣ ಪತ್ರ’ (Life Certificate) ಸಲ್ಲಿಕೆಯನ್ನು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
