ದಾವಣಗೆರೆ: ಜಿಲ್ಲಾ ರಾಜಕಾರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ಈಗ ಬೀದಿಗೆ ಬಂದಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮಾಜಿ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಒಬ್ಬನಿಂದ ಇಡೀ ಊರು ಹಾಳಾಗುವುದು ಬೇಡ” ಎಂದು ಗುಡುಗಿದ್ದಾರೆ.
ಕಾರ್ನರ್ ಮೀಟಿಂಗ್ಗಳೇ ವಿವಾದದ ಕೇಂದ್ರಬಿಂದು
ಇತ್ತೀಚೆಗೆ ಅಲ್ಪಸಂಖ್ಯಾತ ನಾಯಕ ಅಬ್ದುಲ್ ಜಬ್ಬಾರ್ ಅವರು ನಗರದ ವಿವಿಧೆಡೆ ನಡೆಸುತ್ತಿರುವ ‘ಕಾರ್ನರ್ ಮೀಟಿಂಗ್’ಗಳ (ಮೂಲೆ ಸಭೆಗಳು) ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇಂತಹ ಸಭೆಗಳಿಂದಲೇ ಪರಿಸ್ಥಿತಿ ಸಂಕೀರ್ಣಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಇಂತಹ ಸಭೆಗಳನ್ನು ಮಾಡುವುದು ಅವರಿಗೆ ಹೊಸದಲ್ಲ, 1991-94ರಿಂದಲೂ ಅವರು ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಆದರೆ ಒಬ್ಬನ ಹಿತಾಸಕ್ತಿಗಾಗಿ ಇಡೀ ಊರನ್ನು ಬಲಿ ಕೊಡಬಾರದು,” ಎಂದು ಮಾರ್ಮಿಕವಾಗಿ ನುಡಿದರು.
ಜೋಕರ್ ಪ್ರದರ್ಶನ ಬೇಡ: ಸಚಿವರ ಖಡಕ್ ವಾರ್ನಿಂಗ್
ವಿಡಿಯೋ ಹೇಳಿಕೆಯಲ್ಲಿ ಅತ್ಯಂತ ಕಟುವಾಗಿ ಮಾತನಾಡಿರುವ ಮಲ್ಲಿಕಾರ್ಜುನ್, “ಇಲ್ಲಿ ಒಬ್ಬೊಬ್ಬರು ಬಂದು ಒಂದೊಂದು ಸ್ಟೇಟ್ಮೆಂಟ್ ಕೊಡುವುದು ನೋಡಿದರೆ ಇದು ಯಾವುದೋ ಜೋಕರ್ಗಳ ಪ್ರದರ್ಶನದಂತೆ ಕಾಣುತ್ತಿದೆ. ಇದು ನಿಲ್ಲಬೇಕು. ಎಲ್ಲರೂ ಒಟ್ಟಾಗಿ ಕುಳಿತು ಮಾತನಾಡಿದರೆ ಒಂದು ಗೌರವ ಇರುತ್ತದೆ,” ಎಂದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
“ಕಾರ್ಯಕರ್ತರಿಲ್ಲದೆ ಯಾರೂ ಇಲ್ಲಿ ‘ಪುಂಗಿ’ ಊದಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಕೆಲಸ ಮಾಡಬೇಕು.”
– ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
ನನಗೂ ಮಾತನಾಡಲು ಬರುತ್ತದೆ…
ತಾವು ಸುಮ್ಮನಿರುವುದನ್ನು ಯಾರೂ ದೌರ್ಬಲ್ಯ ಎಂದು ಭಾವಿಸಬಾರದು ಎಂಬ ಎಚ್ಚರಿಕೆಯನ್ನೂ ನೀಡಿದ ಅವರು, “ನನಗೂ ಎಲ್ಲವನ್ನೂ ಎದುರಿಸಿ ಮಾತನಾಡಲು ಬರುತ್ತದೆ. ಆದರೆ ಪಕ್ಷದ ಶಿಸ್ತು ಮುಖ್ಯ,” ಎಂದು ಪರೋಕ್ಷವಾಗಿ ಅಬ್ದುಲ್ ಜಬ್ಬಾರ್ ಅವರಿಗೆ ಎಚ್ಚರಿಕೆ ನೀಡಿದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
