ದಾವಣಗೆರೆ: ಅಮಾಯಕ ಯುವಕರನ್ನು ಪ್ರೀತಿಯ ಬಲೆಗೆ ಬೀಳಿಸಿ, ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ದರೋಡೆ ಮಾಡುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಯಶಸ್ವಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 18.80 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ಹಿನ್ನೆಲೆ ಏನು?
ದೂರುದಾರ ಅಭಿಷೇಕ್ ಎಂಬುವವರಿಗೆ ಪಂಚಮಿ @ ಪೂಜಾ ಎಂಬಾಕೆಯ ಪರಿಚಯವಾಗಿತ್ತು. ಮೇ 9ರಂದು ರಾತ್ರಿ “ನಿನ್ನೊಂದಿಗೆ ಮಾತನಾಡಬೇಕು” ಎಂದು ನಂಬಿಸಿದ ಆಕೆ, ಅಭಿಷೇಕ್ ಅವರನ್ನು ಹರಿಹರ ರಸ್ತೆಯ ಶಿವನಹಳ್ಳಿ ಕ್ರಾಸ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಅಭಿಷೇಕ್ ಅಲ್ಲಿಗೆ ತಲುಪಿದಾಗ, ಮೊದಲೇ ಹೊಂಚು ಹಾಕಿ ಕುಳಿತಿದ್ದ ಆಕೆಯ ಸಹಚರರು ಇನ್ನೋವಾ ಕಾರು ಮತ್ತು ಬೈಕ್ನಲ್ಲಿ ಬಂದು ಅಟ್ಯಾಕ್ ಮಾಡಿದ್ದಾರೆ.
“ನನ್ನ ತಂಗಿಯನ್ನು ಯಾಕೆ ಇಲ್ಲಿಗೆ ಕರೆದುಕೊಂಡು ಬಂದಿದ್ದೀಯಾ?” ಎಂದು ಗಲಾಟೆ ತೆಗೆದ ಈ ಗ್ಯಾಂಗ್, ಅಭಿಷೇಕ್ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ಅವರ ಬಳಿಯಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಪೊಲೀಸರ ಬಿಗಿ ಕಾರ್ಯಾಚರಣೆ
ಪ್ರಕರಣ ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ದಾವಣಗೆರೆ ಗ್ರಾಮಾಂತರ ಪೊಲೀಸರು, ಎಸ್ಪಿ ಶ್ರೀ ಶೇಖರ್ ಹೆಚ್.ಟಿ ಮತ್ತು ಹೆಚ್ಚುವರಿ ಎಸ್ಪಿ ಶ್ರೀ ಪರಮೇಶ್ವರ ಹೆಗಡೆ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಗಳು:
-
ಪಂಚಮಿ @ ಪೂಜಾ @ ಸಮೀನಾ (29): ಹನಿಟ್ರ್ಯಾಪ್ ಮಾಡುವ ಕಿಲಾಡಿ ಲೇಡಿ.
-
ಸುರೇಶ್ (34): ದಾವಣಗೆರೆ ನಗರ.
-
ಜಗದೀಶ್ (35): ಅಣಜಿ ಗ್ರಾಮ.
-
ಗಂಗಾ @ ಮಲ್ಲೇಶ್ ನಾಯ್ಕ್ (25): ದಾವಣಗೆರೆ.
-
ವೆಂಕಟೇಶ್ (30): ದಾವಣಗೆರೆ.
ವಶಪಡಿಸಿಕೊಂಡ ಸ್ವತ್ತುಗಳ ವಿವರ:
-
ಚಿನ್ನಾಭರಣ: 10.20 ಲಕ್ಷ ರೂ. ಮೌಲ್ಯದ 80.16 ಗ್ರಾಂ ತೂಕದ ಆಭರಣಗಳು.
-
ಇನ್ನೋವಾ ಕಾರು: 8 ಲಕ್ಷ ರೂ. ಮೌಲ್ಯದ ವಾಹನ.
-
ಹೋಂಡಾ ಆಕ್ಟಿವಾ: 60 ಸಾವಿರ ರೂ. ಮೌಲ್ಯದ ಸ್ಕೂಟರ್.
-
ಒಟ್ಟು ಮೌಲ್ಯ: ಸುಮಾರು 18.80 ಲಕ್ಷ ರೂಪಾಯಿಗಳು.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಪ್ರಭು ಡಿ. ಕೆಳಗಿನ ಮನಿ ಮತ್ತು ಅವರ ತಂಡದ ಶ್ರಮವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಸಾರ್ವಜನಿಕರು ಅಪರಿಚಿತ ಮಹಿಳೆಯರ ಸ್ನೇಹ ಮತ್ತು ನಿರ್ಜನ ಪ್ರದೇಶಗಳಿಗೆ ಕರೆದಾಗ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
