ದಾವಣಗೆರೆ: ರಾಜ್ಯ ರಾಜಕಾರಣದ ‘ಬೆಣ್ಣೆ ನಗರಿ’ ಎಂದೇ ಖ್ಯಾತಿಯಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಈಗ ಹೈವೋಲ್ಟೇಜ್ ಉಪಚುನಾವಣೆಗೆ ಸಾಕ್ಷಿಯಾಗುತ್ತಿದೆ. ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕ್ರಪ್ಪ ಅವರ ನಿಧನದಿಂದ ತೆರವಾಗಿರುವ ಈ ಕ್ಷೇತ್ರದಲ್ಲಿ ಈಗ ‘ಕೈ’ ಪಾಳಯಕ್ಕೆ ಸ್ವಪಕ್ಷೀಯರೇ ನುಂಗಲಾರದ ತುತ್ತಾಗಿದ್ದಾರೆ.
ಶಾಮನೂರು ಕುಟುಂಬಕ್ಕೆ ಎದುರಾಯ್ತು ‘ಸ್ವಜಾತಿ’ ವರ್ಸಸ್ ‘ಅಲ್ಪಸಂಖ್ಯಾತ’ ಫೈಟ್!
ದಶಕಗಳಿಂದ ಶಾಮನೂರು ಕುಟುಂಬದ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೆ ವಂಶಪಾರಂಪರ್ಯ ರಾಜಕಾರಣಕ್ಕೆ ಮುಂದಾಗಿದೆ. ಶಾಮನೂರು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಒಲವು ತೋರುತ್ತಿದೆ. ಆದರೆ, ಸುಮಾರು 80,000ಕ್ಕೂ ಹೆಚ್ಚು ಮುಸ್ಲಿಂ ಮತದಾರರಿರುವ ಈ ಕ್ಷೇತ್ರದಲ್ಲಿ ಈ ಬಾರಿ “ನಮಗೇಕೆ ಪ್ರಾತಿನಿಧ್ಯವಿಲ್ಲ?” ಎಂಬ ಬಂಡಾಯದ ಧ್ವನಿ ಜೋರಾಗಿದೆ.
ಟ್ವಿಸ್ಟ್ ನೀಡಿದ ಡಾ. ನಾಝಿಯಾ ಕೌಸರ್ ಎಂಟ್ರಿ!
ಕಾಂಗ್ರೆಸ್‌ನ ಈ ಆಂತರಿಕ ಅಸಮಾಧಾನದ ಲಾಭ ಪಡೆಯಲು ಸಜ್ಜಾಗಿರುವುದು ಪ್ರಖ್ಯಾತ ಪತ್ರಕರ್ತೆ, ಸಂಶೋಧಕಿ ಹಾಗೂ ಜನಪ್ರಿಯ ಆ್ಯಂಕರ್ ಡಾ. ನಾಝಿಯಾ ಕೌಸರ್. ಮೂಲಗಳ ಪ್ರಕಾರ, ನಾಝಿಯಾ ಕೌಸರ್ ಅವರು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
-
ವಿದ್ಯಾವಂತ ಮಹಿಳಾ ನಾಯಕತ್ವ: ಕ್ಷೇತ್ರದಲ್ಲಿ ಬದಲಾವಣೆ ಬಯಸುತ್ತಿರುವ ಯುವಕರು ಮತ್ತು ಮಹಿಳೆಯರು ನಾಝಿಯಾ ಪರ ನಿಲ್ಲುವ ಸಾಧ್ಯತೆ ಇದೆ.
-
ಧೈರ್ಯಶಾಲಿ ಧ್ವನಿ: ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳ ಬಗ್ಗೆ ಖಡಕ್ ಆಗಿ ಮಾತನಾಡುವ ನಾಝಿಯಾ ಎಂಟ್ರಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಕನ್ನ ಹಾಕುವ ಆತಂಕ ಮೂಡಿಸಿದೆ.
ಕಾಂಗ್ರೆಸ್‌ಗೆ ಏಕಿದೆ ‘ಬಿಸಿತುಪ್ಪ’ದ ಪರಿಸ್ಥಿತಿ?
ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಮತಗಳೇ ಗೆಲುವಿನ ನಿರ್ಣಾಯಕ ಶಕ್ತಿ. ಒಂದು ವೇಳೆ ನಾಝಿಯಾ ಕೌಸರ್ ಅವರು ಸ್ಪರ್ಧಿಸಿದರೆ, ಮುಸ್ಲಿಂ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರಿಗೆ ಹಿನ್ನಡೆಯಾಗುವ ಭೀತಿ ಎದುರಾಗಿದೆ. “ನಮಗೆ ಕೇವಲ ಮತ ಹಾಕುವ ಯಂತ್ರಗಳನ್ನಾಗಿ ಮಾಡಬೇಡಿ, ನಮ್ಮವರಿಗೂ ಅಧಿಕಾರ ನೀಡಿ” ಎನ್ನುತ್ತಿರುವ ಸ್ಥಳೀಯ ಮುಸ್ಲಿಂ ನಾಯಕರು ಕಾಂಗ್ರೆಸ್‌ಗೆ ಶಾಕ್ ನೀಡಲು ಸಜ್ಜಾಗಿದ್ದಾರೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
