ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರರಾದ ಸಮರ್ಥ್, ಯುವ ನಾಯಕತ್ವದ ಭರವಸೆಯೊಂದಿಗೆ ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ.
ಅಭಿವೃದ್ಧಿಯ ಮಂತ್ರ: 100 ಕೋಟಿ ಅನುದಾನದ ಭರವಸೆ
ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಸಮರ್ಥ್ ಶಾಮನೂರು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಈಗಾಗಲೇ 100 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಘೋಷಿಸಿದ್ದಾರೆ. ಈ ಹಣವನ್ನು ಕ್ಷೇತ್ರದ ದೇವಸ್ಥಾನಗಳು, ಸಮುದಾಯ ಭವನಗಳು ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಳಸಲಾಗುವುದು” ಎಂದು ತಿಳಿಸಿದರು.
‘ಅಳಿಲು ಸೇವೆ’ಯ ಸಂಕಲ್ಪ
ತಮ್ಮ ಭಾಷಣದಲ್ಲಿ ರಾಮಾಯಣದ ರಾಮಸೇತು ನಿರ್ಮಾಣದ ಉದಾಹರಣೆಯನ್ನು ನೀಡಿದ ಅವರು, “ನಮ್ಮ ಅಜ್ಜ ಶಾಮನೂರು ಶಿವಶಂಕರಪ್ಪ ಅವರು ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸುದೀರ್ಘ ಸೇವೆಯ ಮುಂದೆ ನನ್ನದೊಂದು ‘ಅಳಿಲು ಸೇವೆ’ ಇರಲಿ ಎಂಬ ಆಶಯ ನನ್ನದು. ಬಾಕಿ ಉಳಿದಿರುವ ರಸ್ತೆ, ಚರಂಡಿ ಹಾಗೂ ಇತರ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಲು ನನಗೊಂದು ಅವಕಾಶ ನೀಡಿ” ಎಂದು ವಿನಂತಿಸಿದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ನೇರ ಸಂಪರ್ಕಕ್ಕೆ ಲಭ್ಯವಿರುವ ನಾಯಕ
“ನಾನು ಯಾವಾಗಲೂ ನಿಮ್ಮ ಕೈಗೆ ಸಿಗುವ ವ್ಯಕ್ತಿ. ಯಾವುದೇ ಸಮಸ್ಯೆಯಿದ್ದರೂ ಮುಕ್ತವಾಗಿ ನನ್ನನ್ನು ಭೇಟಿ ಮಾಡಬಹುದು. ನಿಮ್ಮ ಊರಿನಲ್ಲಿಯೇ ಕುಳಿತು ಸಮಸ್ಯೆಗಳನ್ನು ಆಲಿಸಲು ನಾನು ಸಿದ್ಧ” ಎಂದು ಹೇಳುವ ಮೂಲಕ ಮತದಾರರಲ್ಲಿ ವಿಶ್ವಾಸ ತುಂಬಿದರು. ಇದೇ ವೇಳೆ, “ಬರುವ ಏಪ್ರಿಲ್ 9ರಂದು ಎಲ್ಲರೂ ತಪ್ಪದೇ ಮತದಾನ ಮಾಡಿ, ಕೈ ಗುರುತನ್ನು ಬೆಂಬಲಿಸಿ” ಎಂದು ಕರೆ ನೀಡಿದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
