ದಾವಣಗೆರೆ ಉಪಚುನಾವಣೆ: ಸ್ಟ್ರಾಂಗ್ ರೂಮ್ ಕೀ ಅದಲು ಬದಲು! ಬೀಗ ಒಡೆದು ಇವಿಎಂ ಹೊರಕ್ಕೆ ತೆಗೆದ ಅಧಿಕಾರಿಗಳು

Davanagere election officers breaking strong room lock due to key mismatch during counting.

—Election Update—

🚨 ದಾವಣಗೆರೆ ದಕ್ಷಿಣ ಉಪಚುನಾವಣೆ LIVE

👉 7ನೇ ಸುತ್ತಿನ ಮತ ಎಣಿಕೆ: ಮುನ್ನಡೆ ಕಾಯ್ದುಕೊಂಡ ಬಿಜೆಪಿ | ಚೇತರಿಕೆ ಕಂಡ ಕಾಂಗ್ರೆಸ್, ಅಂತರ 3,925 ಕ್ಕೆ ಇಳಿಕೆ | ಲೈವ್ ಅಪ್‌ಡೇಟ್‌ಗಳು ಮುಂದುವರಿಯುತ್ತಿವೆ...

Srinivas Dasakariyappa
ಶ್ರೀನಿವಾಸ್ ದಾಸಕರಿಯಪ್ಪ
ಬಿಜೆಪಿ
25,878
Samarth Shamanuru
ಸಮರ್ಥ್ ಶಾಮನೂರು
ಕಾಂಗ್ರೆಸ್
21,953
👉 ಬಿಜೆಪಿ 3,925 ಮತಗಳ ಮುನ್ನಡೆ

ದಾವಣಗೆರೆ: ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಅಧಿಕಾರಿಗಳ ಎಡವಟ್ಟಿನಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ಇಂದು ನಡೆದಿದೆ.

ಏನಿದು ಎಡವಟ್ಟು?

ಇಂದು ಬೆಳಿಗ್ಗೆ 8 ಗಂಟೆಗೆ ನಿಗದಿತ ಸಮಯದಂತೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ಏಜೆಂಟರು ಇವಿಎಂ (EVM) ಯಂತ್ರಗಳನ್ನು ಇರಿಸಲಾಗಿದ್ದ ‘ಸ್ಟ್ರಾಂಗ್ ರೂಮ್’ ತೆರೆಯಲು ಆಗಮಿಸಿದ್ದರು. ಆದರೆ, ರೂಮ್ ತೆರೆಯಲು ಹೋದಾಗ ಅಧಿಕಾರಿಗಳ ಬಳಿ ಇದ್ದ ಬೀಗದ ಕೈ (Key) ಬದಲಾಗಿರುವುದು ಕಂಡುಬಂದಿದೆ.

ಬೀಗ ಒಡೆದ ಅಧಿಕಾರಿಗಳು:

ಸರಿಯಾದ ಕೀ ಇಲ್ಲದೆ ಸ್ಟ್ರಾಂಗ್ ರೂಮ್ ತೆರೆಯಲು ಸಾಧ್ಯವಾಗದಿದ್ದಾಗ ಅಧಿಕಾರಿಗಳು ತೀವ್ರ ಪರದಾಡಿದರು. ಮತ ಎಣಿಕೆ ವಿಳಂಬವಾಗುವುದನ್ನು ತಪ್ಪಿಸಲು ಮತ್ತು ಸಮಯದ ಅಭಾವದಿಂದಾಗಿ, ಅಂತಿಮವಾಗಿ ಅಧಿಕಾರಿಗಳು ಬೀಗವನ್ನು ಒಡೆದು ಬಾಗಿಲು ತೆರೆಯಲು ನಿರ್ಧರಿಸಿದರು. ಬೀಗ ಒಡೆದ ನಂತರ ಇವಿಎಂ ಯಂತ್ರಗಳನ್ನು ಎಣಿಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಅಧಿಕಾರಿಗಳ ಈ ಬೇಜವಾಬ್ದಾರಿತನದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಭದ್ರತೆಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಸ್ಟ್ರಾಂಗ್ ರೂಮ್ ಕೀ ವಿಷಯದಲ್ಲಿ ಇಂತಹ ಎಡವಟ್ಟು ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp