ದಾವಣಗೆರೆ: ಹರಿಹರ ತಾಲೂಕಿನಲ್ಲಿ ಸರಣಿ ದೇವಸ್ಥಾನಗಳ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಬಂಧಿತರಲ್ಲಿ ಅಪ್ಪ ಮತ್ತು ಮಗನೇ ಪ್ರಮುಖ ಆರೋಪಿಗಳಾಗಿರುವುದು ತಾಲೂಕಿನ ಜನರ ಅಚ್ಚರಿಗೆ ಕಾರಣವಾಗಿದೆ.
ಏನಿದು ಪ್ರಕರಣ?
ಹರಿಹರ ತಾಲೂಕಿನ ದೊಗ್ಗಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ರಾತ್ರಿ ದರೋಡೆ ನಡೆದಿತ್ತು. ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ದೇವರ ಮೈಮೇಲಿದ್ದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ತೀವ್ರ ತನಿಖೆ ನಡೆಸಿದ್ದರು.
ಬಂಧಿತರು ಯಾರು?: ಬಂಧಿತರನ್ನು ವೀರೇಶ್ (64), ಅವರ ಪುತ್ರ ಶಿವಕುಮಾರ್ (26) ಮತ್ತು ಇವರಿಗೆ ಸಹಕರಿಸುತ್ತಿದ್ದ ಮಂಜುನಾಥ್ (40) ಎಂದು ಗುರುತಿಸಲಾಗಿದೆ. ಮೂಲತಃ ಶಂಷಿಪುರ ಗ್ರಾಮದವರಾದ ಇವರು ಸದ್ಯ ದಾವಣಗೆರೆ ನಗರದಲ್ಲಿ ವಾಸವಿದ್ದರು. ಆರೋಪಿಗಳಿಂದ 10.90 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಆರೋಪಿಗಳ ಕಳ್ಳತನದ ಶೈಲಿ ಕೇಳಿದ್ರೆ ಶಾಕ್ ಆಗ್ತೀರಾ!
ಆರೋಪಿಗಳು ಕೇವಲ ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ಭಕ್ತರ ವೇಷದಲ್ಲಿ ದೇವಸ್ಥಾನೆ ತೆರಳಿ ಹಬ್ಬ ಅಥವಾ ಜಾತ್ರೆಗಳ ಮರುದಿನವೇ ಇವರು ದರೋಡೆಗೆ ಇಳಿಯುತ್ತಿದ್ದರು. ಮೊದಲೇ ಭಕ್ತರಂತೆ ದೇವಸ್ಥಾನಕ್ಕೆ ಹೋಗಿ ಎಲ್ಲವನ್ನೂ ಗಮನಿಸಿ ಬರುತ್ತಿದ್ದರು. ನಂತರ ತಮ್ಮ ಕೈಚಳಕ ಆರಂಭಿಸುತ್ತಿದ್ದರು. ದೇವಸ್ಥಾನದಲ್ಲಿ ಆಭರಣಗಳು ದೇವರ ಮೇಲೆಯೇ ಇರುತ್ತವೆ, ಹುಂಡಿಯೂ ಕಣ್ಣೆದುರೇ ಇರುತ್ತದೆ, ಹುಡುಕುವ ಶ್ರಮವಿಲ್ಲ” ಎಂಬುದು ಇವರ ಅಭಿಪ್ರಾಯವಾಗಿತ್ತು.
ಪೊಲೀಸ್ ಕಾರ್ಯಾಚರಣೆ: ಕಳ್ಳತನ ಮಾಡಿದ ಬೆಳ್ಳಿಯನ್ನು ಕರಗಿಸಲು ಪ್ರಯತ್ನಿಸುತ್ತಿದ್ದಾಗ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಮಂಜುನಾಥ್ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಆತನನ್ನು ವಿಚಾರಣೆಗೊಳಪಡಿಸಿದಾಗ ಈ ಅಪ್ಪ-ಮಗನ ಅಸಲಿ ಮುಖವಾಡ ಕಳಚಿದೆ. ಮಲೇಬೆನ್ನೂರಿನ ಶ್ರೀರಾಮ ದೇವಸ್ಥಾನ ಸೇರಿದಂತೆ ಹತ್ತಾರು ಕಡೆ ಇವರು ಕೈಚಳಕ ತೋರಿಸಿರುವುದು ತನಿಖೆಯಿಂದ ಬಯಲಾಗಿದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
