ದಾವಣಗೆರೆ: “ಲೌಕಿಕ ಸುಖ-ಸಂತೋಷಗಳು ಕೇವಲ ಕ್ಷಣಿಕ, ಆತ್ಮದ ಶಾಂತಿ ಮತ್ತು ಮುಕ್ತಿಯೇ ಶಾಶ್ವತ” ಎಂಬ ಮಂತ್ರದೊಂದಿಗೆ ಬೆಣ್ಣೆನಗರಿ ದಾವಣಗೆರೆಯ ನಾಲ್ವರು ಮಹನೀಯರು ಐಶಾರಾಮಿ ಜೀವನವನ್ನು ತ್ಯಜಿಸಿ ಕಠಿಣವಾದ ಜೈನ ಸನ್ಯಾಸತ್ವದ ದೀಕ್ಷೆಯನ್ನು ಸ್ವೀಕರಿಸಿದ್ದಾರೆ. ಆಚಾರ್ಯ ಶ್ರೀ ಅಭಯಶೇಖರ್ ಸುರೇಶ್ವರಜಿ ಮಹಾರಾಜ್ ಅವರ ದಿವ್ಯ ಸಾನಿಧ್ಯದಲ್ಲಿ ಈ ಭವ್ಯ ದೀಕ್ಷಾ ಕಾರ್ಯಕ್ರಮ ಜರುಗಿತು.
ವಿದ್ಯಾವಂತ ಯುವತಿಯರ ವೈರಾಗ್ಯ:
ಈ ಬಾರಿಯ ದೀಕ್ಷಾ ಕಾರ್ಯಕ್ರಮದಲ್ಲಿ ಸುಶಿಕ್ಷಿತ ಯುವತಿಯರು ಭಾಗವಹಿಸಿರುವುದು ವಿಶೇಷ. ಪುಣೆಯ ಪ್ರತಿಷ್ಠಿತ ಸಿಂಬೋಸಿಸ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿರುವ 30 ವರ್ಷದ ಕ್ರನಾಲ್ ಬೇನ್ ಹಾಗೂ ದಾವಣಗೆರೆಯ ಎಂಕಾಂ ಪದವಿಧರೆ 28 ವರ್ಷದ ದೀಕ್ಷಿತ ಬೇನ್ ಅವರು ಲೌಕಿಕ ಜೀವನದ ವ್ಯಾಮೋಹ ತೊರೆದು ಸನ್ಯಾಸತ್ವದ ಹಾದಿ ಹಿಡಿದಿದ್ದಾರೆ.
ಉದ್ಯಮಿ ದಂಪತಿಗಳ ಮಹಾನ್ ತ್ಯಾಗ:
ದಾವಣಗೆರೆಯ ಖ್ಯಾತ ಉದ್ಯಮಿ, ಲಲಿತ್ ಗಾರ್ಮೆಂಟ್ಸ್ ಮಾಲೀಕರಾದ 52 ವರ್ಷದ ಭರತ್ ಜೈನ್ ಮತ್ತು ಅವರ ಪತ್ನಿ 50 ವರ್ಷದ ಆರತಿ ಬೇನ್ ಅವರು ಕೋಟ್ಯಾಂತರ ರೂಪಾಯಿ ಆಸ್ತಿ-ಪಾಸ್ತಿಯನ್ನು ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ವಿಶೇಷವೇನೆಂದರೆ, ಇವರ ಇಬ್ಬರು ಪುತ್ರರು ಈಗಾಗಲೇ ಕೆಲವು ವರ್ಷಗಳ ಹಿಂದೆ ಸನ್ಯಾಸತ್ವ ಸ್ವೀಕರಿಸಿದ್ದು, ಇದೀಗ ಪೋಷಕರು ಕೂಡ ಅದೇ ಹಾದಿಯನ್ನು ಅನುಸರಿಸಿದ್ದಾರೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಕಠಿಣ ಪಂಚಮಹಾವ್ರತಗಳ ಪಾಲನೆ:
ಜೈನ ಧರ್ಮದಲ್ಲಿ ಸನ್ಯಾಸತ್ವ ಎನ್ನುವುದು ಕೆಂಡದ ಮೇಲೆ ನಡೆದಂತೆ. ಇನ್ನು ಮುಂದೆ ಇವರು ಬರಿಗಾಲಿನಲ್ಲೇ ನಡೆಯಬೇಕು, ಕೈಯಿಂದಲೇ ಕೂದಲನ್ನು ಕಿತ್ತುಕೊಳ್ಳುವ ಕಠಿಣ ವಿಧಿಗಳನ್ನು ಪಾಲಿಸಬೇಕು. ಮೊಬೈಲ್, ವಿದ್ಯುತ್ ಅಥವಾ ಯಾವುದೇ ವಾಹನಗಳನ್ನು ಬಳಸುವಂತಿಲ್ಲ ಮತ್ತು ಭಿಕ್ಷೆಯ ಮೂಲಕವೇ ಜೀವನ ಸಾಗಿಸಬೇಕಾಗುತ್ತದೆ.
ಈ ಮೂಲಕ ಶಾಂತಿ ಮತ್ತು ಮುಕ್ತಿ ಇರುವುದು ಹಣದಲ್ಲಲ್ಲ, ಬದಲಿಗೆ ತ್ಯಾಗದಲ್ಲಿ ಎಂಬುದನ್ನು ಈ ನಾಲ್ವರು ಮುಮುಕ್ಷುಗಳು ಇಡೀ ಸಮಾಜಕ್ಕೆ ಸಾರಿದ್ದಾರೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
