ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ 13ನೇ ಘಟಿಕೋತ್ಸವದಲ್ಲಿ (ದಾವಣಗೆರೆ ವಿವಿ ಘಟಿಕೋತ್ಸವ) ಈ ಬಾರಿ ಮೂವರು ವಿಶಿಷ್ಟ ಸಾಧಕರಿಗೆ ‘ಗೌರವ ಡಾಕ್ಟರೇಟ್’ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ. ಬಿ.ಡಿ ಕುಂಬಾರ ಘೋಷಿಸಿದ್ದಾರೆ.
ಗುರುವಾರ ದಾವಣಗೆರೆ ವಿವಿಯ ಎಂಬಿಎ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಪ್ರೊ. ಸಿ.ಹೆಚ್. ಮುರುಗೇಂದ್ರಪ್ಪ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದ ಸಾಧಕ ಎಂ. ರಾಮಪ್ಪ ಹಾಗೂ ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ತಂದು ನಿವೃತ್ತರಾಗಿರುವ ಎಲ್. ರೇವಣಸಿದ್ದಯ್ಯ ಅವರಿಗೆ ಈ ಬಾರಿಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. (ಗೌರವ ಡಾಕ್ಟರೇಟ್‍ಗೆ ಒಟ್ಟು 9 ಅರ್ಜಿಗಳು ಸಲ್ಲಿಕೆಯಾಗಿದ್ದವು).
ಜ.30 ರಂದು ಘಟಿಕೋತ್ಸವ ಸಂಭ್ರಮ ದಾವಣಗೆರೆ ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವವು ಜನವರಿ 30 ರಂದು (ಶುಕ್ರವಾರ) ಜ್ಞಾನಸೌಧದ ಪ್ರಾಂಗಣದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವನ್ವಿತ ರಾಜ್ಯಪಾಲರಾದ ಶ್ರೀ ಥಾವರ್‍ಚಂದ್ ಗೆಹ್ಲೋಟ್ ಅವರು ವಹಿಸಲಿದ್ದಾರೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಮುಖ್ಯ ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವರು ಹಾಗೂ ವಿವಿಯ ಸಮಕುಲಾಧಿಪತಿಗಳಾದ ಡಾ. ಎಂ.ಸಿ. ಸುಧಾಕರ್ ಅವರು ಭಾಗವಹಿಸುವರು. ಘಟಿಕೋತ್ಸವ ಭಾಷಣವನ್ನು ಖ್ಯಾತ ವಿಜ್ಞಾನಿ, ಡಿಆರ್‍ಡಿಒ ಮಾಜಿ ಮಹಾನಿರ್ದೇಶಕರು ಹಾಗೂ ಪದ್ಮವಿಭೂಷಣ ಪುರಸ್ಕೃತರಾದ ಡಾ. ವಾಸುದೇವ ಕೆ. ಅತ್ರೆ ಅವರು ನೆರವೇರಿಸಲಿದ್ದಾರೆ.
Read Also: ದಾವಣಗೆರೆ ವಿವಿ ಘಟಿಕೋತ್ಸವ: ಕೃಷಿಕನ ಮಗಳ ಮುಡಿಗೆ 7 ಚಿನ್ನದ ಪದಕ; ಎನ್.ಬಿ. ನಯನಾ ವಿವಿಯ ‘ಚಿನ್ನದ ಹುಡುಗಿ’!
7 ಚಿನ್ನದ ಪದಕ ಪಡೆದ ‘ನಯನ’ 2024-25 ನೇ ಸಾಲಿನ ಶೈಕ್ಷಣಿಕ ಸಾಧನೆಯಲ್ಲಿ ದಾವಣಗೆರೆ ವಿವಿ ಕ್ಯಾಂಪಸ್‍ನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ (M.Com) ವಿಭಾಗದ ವಿದ್ಯಾರ್ಥಿನಿ ನಯನ ಎನ್.ಬಿ. ಅವರು ಪ್ರಥಮ ರ್ಯಾಂಕ್ ನೊಂದಿಗೆ ಬರೋಬ್ಬರಿ 7 ಸ್ವರ್ಣ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ದಾವಣಗೆರೆ ವಿವಿ ಘಟಿಕೋತ್ಸವ, ಇತರೆ ಸ್ವರ್ಣ ಪದಕ ವಿಜೇತರು:
-
4 ಪದಕ: ಆರ್. ದೀಪ (ಎಂಬಿಎ).
-
ತಲಾ 3 ಪದಕ: ಕವನ (ಗಣಿತಶಾಸ್ತ್ರ), ರುಚಿತ (ಬೈಯೋಕೆಮಿಸ್ಟ್ರಿ), ಪುಟ್ಟರಾಜ್ ಎಂ.ಆರ್. (ಭೌತಶಾಸ್ತ್ರ), ಜೆ. ಪುಷ್ಪ (ಪ್ರಾಣಿಶಾಸ್ತ್ರ), ವಿಜಯಲಕ್ಷ್ಮಿ ಎಂ (ಆಂಗ್ಲಭಾಷೆ), ಅನುಷಾ (ಕನ್ನಡ).
-
2 ಪದಕ: ಚಂದನ್ ವಿ.ಎಂ (ಪತ್ರಿಕೋದ್ಯಮ).
ಪದಕಗಳ ಅಂಕಿ-ಅಂಶಗಳು
ಈ ಸಾಲಿನಲ್ಲಿ ಒಟ್ಟು 87 ಸ್ವರ್ಣ ಪದಕಗಳನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿನಿಯರ ಮೇಲುಗೈ ಸಾಧಿಸಿದ್ದಾರೆ.
-
ಸ್ನಾತಕ ಪದವಿ (UG): 11 ಮಹಿಳಾ ಹಾಗೂ 2 ಪುರುಷರು ಸೇರಿದಂತೆ 13 ವಿದ್ಯಾರ್ಥಿಗಳು 22 ಪದಕಗಳನ್ನು ಪಡೆಯಲಿದ್ದಾರೆ.
-
ಸ್ನಾತಕೋತ್ತರ ಪದವಿ (PG): 24 ಮಹಿಳಾ ಹಾಗೂ 8 ಪುರುಷರು ಸೇರಿದಂತೆ 32 ವಿದ್ಯಾರ್ಥಿಗಳು 65 ಪದಕಗಳನ್ನು ಹಂಚಿಕೊಂಡಿದ್ದಾರೆ.
-
ಒಟ್ಟಾರೆ 35 ಮಹಿಳಾ ಮತ್ತು 10 ಪುರುಷ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 45 ಪ್ರತಿಭಾವಂತರು 87 ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ.
ಪಿಹೆಚ್.ಡಿ ಮತ್ತು ಪದವಿ ಪ್ರದಾನ ಘಟಿಕೋತ್ಸವದಲ್ಲಿ 30 ಮಹಿಳಾ ಹಾಗೂ 40 ಪುರುಷರು ಸೇರಿ ಒಟ್ಟು 70 ಸಂಶೋಧಕರಿಗೆ ಡಾಕ್ಟರ್ ಆಫ್ ಫಿಲಾಸಫಿ (Ph.D) ಪದವಿ ಪ್ರದಾನ ಮಾಡಲಾಗುವುದು.
-
ಸ್ನಾತಕ ಪದವಿ (UG): ಬಿ.ಎ., ಬಿ.ಕಾಂ, ಬಿ.ಎಸ್ಸಿ ಸೇರಿದಂತೆ ವಿವಿಧ ಪದವಿಗಳಲ್ಲಿ 6401 ಮಹಿಳಾ ಹಾಗೂ 4283 ಪುರುಷರು ಸೇರಿ ಒಟ್ಟು 10,684 ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ.
-
ಸ್ನಾತಕೋತ್ತರ ಪದವಿ (PG): ಎಂ.ಎ., ಎಂ.ಕಾಂ, ಎಂ.ಎಸ್ಸಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ 1191 ಮಹಿಳಾ ಹಾಗೂ 831 ಪುರುಷರು ಸೇರಿ ಒಟ್ಟು 2,022 ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ.
-
ಒಟ್ಟಾರೆಯಾಗಿ ಈ ಬಾರಿ 12,706 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹತೆ ಪಡೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಎಸ್.ಬಿ.ಗಂಟಿ, ಪರೀಕ್ಷಾಂಗ ಕುಲಸಚಿವ ಸಿ.ಕೆ.ರಮೇಶ್, ಹಣಕಾಸು ಅಧಿಕಾರಿ ವಂದನಾ, ಡೀನರಾದ ಕೆ.ವೆಂಕಟೇಶ, .ಎಂ.ಯು.ಲೋಕೇಶ, ಗೋವಿಂದಪ್ಪ, ಶ್ರೀನಿವಾಸ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವಕುಮಾರ ಕಣಸೋಗಿ ಹಾಗೂ ಸಿಂಡಿಕೇಟ್ ಮತ್ತು ಅಕಾಡೆಮಿಕ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
