ಇಂದಿನ ದಿನ ಭವಿಷ್ಯ (27-01-2026) ಇಲ್ಲಿದೆ. ಯಾವ ರಾಶಿಗೆ ಧನಲಾಭ? ಯಾರಿಗೆ ಎಚ್ಚರಿಕೆ ಅಗತ್ಯ? ದ್ವಾದಶ ರಾಶಿಗಳ ಸಂಪೂರ್ಣ ಫಲಾಫಲ ಮತ್ತು ಅದೃಷ್ಟ ಸಂಖ್ಯೆಯನ್ನು ಇಲ್ಲಿ ನೋಡಿ.
♈ ಮೇಷ ರಾಶಿ: ದಿನ ಭವಿಷ್ಯ
ದಿನದ ಫಲ:
ವೃತ್ತಿಪರ ಸಮಸ್ಯೆಗಳು ದೂರವಾಗಲಿವೆ. ಅನಗತ್ಯ ಕೋಪವನ್ನು ನಿಯಂತ್ರಿಸಿ. ಆದಾಯ ಹೆಚ್ಚಾದಂತೆ ಖರ್ಚು ಕೂಡ ಇರುತ್ತದೆ. ಎದೆ/ಹೃದಯ ಸಂಬಂಧಿ ಆರೋಗ್ಯದ ಬಗ್ಗೆ ಎಚ್ಚರವಿರಲಿ.
✨ ಅದೃಷ್ಟ ಸಂಖ್ಯೆ: 8
♉ ವೃಷಭ ರಾಶಿ
ದಿನದ ಫಲ:
ಅಧಿಕಾರ ಯೋಗವಿದೆ. ಮೇಲಧಿಕಾರಿಗಳೊಂದಿಗೆ ವಿರೋಧ ಬೇಡ, ತಾಳ್ಮೆ ಇರಲಿ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ. ಹೊಸ ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಇದು ಸಕಾಲ.
✨ ಅದೃಷ್ಟ ಸಂಖ್ಯೆ: 6
♊ ಮಿಥುನ ರಾಶಿ
ದಿನದ ಫಲ:
ಮನೆಯಲ್ಲಿ ಸಹೋದರರ ಒಗ್ಗಟ್ಟು ಮುಖ್ಯ. ಒಗ್ಗಟ್ಟಿನಿಂದ ಇದ್ದರೆ ಯಾರೂ ನಿಮ್ಮನ್ನು ಸೋಲಿಸಲಾರರು. ಚಂಚಲ ಮನಸ್ಸು ಬಿಟ್ಟು ಒಂದೇ ನಿರ್ಧಾರಕ್ಕೆ ಬದ್ಧರಾಗಿರಿ.
✨ ಅದೃಷ್ಟ ಸಂಖ್ಯೆ: 3
♋ ಕರ್ಕಾಟಕ ರಾಶಿ
ದಿನದ ಫಲ:
ಇದು ಪರಿವರ್ತನೆಯ ಕಾಲ. ಶತ್ರುಗಳ ಕಾಟ ಮತ್ತು ವಿರೋಧಗಳು ತಣ್ಣಗಾಗಲಿವೆ. ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ರಾಜಕೀಯ ಕ್ಷೇತ್ರದಲ್ಲಿ ಅನುಕೂಲವಿದೆ.
✨ ಅದೃಷ್ಟ ಸಂಖ್ಯೆ: 1
♌ ಸಿಂಹ ರಾಶಿ
ದಿನದ ಫಲ:
ಅತ್ಯಂತ ಶುಭದಾಯಕ ಕಾಲವಿದು. ಆರ್ಥಿಕ ಅಭಿವೃದ್ಧಿ ಕಾಣಲಿದ್ದೀರಿ ಹಾಗೂ ಹಳೆಯ ಸಾಲಬಾಧೆಯಿಂದ ಮುಕ್ತಿ ಸಿಗಲಿದೆ. ಶೀತ, ಕಫ ಸಂಬಂಧಿತ ಆರೋಗ್ಯದ ಬಗ್ಗೆ ಎಚ್ಚರ.
✨ ಅದೃಷ್ಟ ಸಂಖ್ಯೆ: 4
♍ ಕನ್ಯಾ ರಾಶಿ
ದಿನದ ಫಲ:
ಗುರಿ ತಲುಪುವಾಗ ಅಡೆತಡೆಗಳು ಬರಬಹುದು, ಧೈರ್ಯಗೆಡದೆ ಮುನ್ನಡೆಯಿರಿ. ರಾಜಕೀಯ ಮತ್ತು ಸಾಮಾಜಿಕ ವ್ಯವಹಾರಗಳಲ್ಲಿ ಅಲ್ಪ ಅಸ್ಪಷ್ಟತೆ ಇರಬಹುದು.
✨ ಅದೃಷ್ಟ ಸಂಖ್ಯೆ: 2
♎ ತುಲಾ ರಾಶಿ
ದಿನದ ಫಲ:
ಕೃಷಿ ಕ್ಷೇತ್ರದಲ್ಲಿ ಲಾಭ. ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಉದ್ಯೋಗದಲ್ಲಿ ವರ್ಗಾವಣೆ ಸಾಧ್ಯತೆ. ಹೊಸ ಮನೆ ಕಟ್ಟಲು ಅಡಿಪಾಯ ಹಾಕಲು ಒಳ್ಳೆಯ ದಿನ.
✨ ಅದೃಷ್ಟ ಸಂಖ್ಯೆ: 9
♏ ವೃಶ್ಚಿಕ ರಾಶಿ
ದಿನದ ಫಲ:
ಅವಿವಾಹಿತರು ಜೂನ್‌ವರೆಗೆ ಕಾಯುವುದು ಉತ್ತಮ. ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯ. 4-5 ರೀತಿಯಲ್ಲಿ ಧನ ಲಾಭವಾಗುವ ಸೂಚನೆ ಇದೆ.
✨ ಅದೃಷ್ಟ ಸಂಖ್ಯೆ: 5
♐ ಧನು ರಾಶಿ
ದಿನದ ಫಲ:
ವ್ಯವಹಾರದಲ್ಲಿ ಲಾಭ. ಅನಿರೀಕ್ಷಿತ ವರ್ಗಾವಣೆ ಬರಬಹುದು. ಮಂಗಳ ಕಾರ್ಯಕ್ಕೆ ವಿಘ್ನ ಬಂದರೆ ಗಣಪತಿ ಪ್ರಾರ್ಥನೆ ಮಾಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಲ್ಪ ತೊಂದರೆ.
✨ ಅದೃಷ್ಟ ಸಂಖ್ಯೆ: 7
♑ ಮಕರ ರಾಶಿ
ದಿನದ ಫಲ:
ವ್ಯಾಪಾರದಲ್ಲಿ ಹೆಚ್ಚಿನ ಶ್ರಮದ ಅಗತ್ಯವಿದೆ. ಅನಗತ್ಯ ವಾದ-ವಿವಾದ ಬೇಡ. ಹಣವಿದ್ದರೂ ಖರ್ಚು ಹೆಚ್ಚು. ವಿದೇಶ ಪ್ರವಾಸದ ಯೋಗ.
✨ ಅದೃಷ್ಟ ಸಂಖ್ಯೆ: 3
♒ ಕುಂಭ ರಾಶಿ
ದಿನದ ಫಲ:
ಸರ್ಕಾರಿ ಇಲಾಖೆಯಿಂದ ಅನುಕೂಲ. ಹಂಗಾಮಿ ನೌಕರರಿಗೆ ಉತ್ತಮ ಉದ್ಯೋಗ. ಮನೆಯ ಕಲಹ ಹೊರಗೆ ಹೇಳಬೇಡಿ. ವಿದ್ಯಾರ್ಥಿಗಳು ಹೆಚ್ಚು ಶ್ರಮ ಪಡಬೇಕು.
✨ ಅದೃಷ್ಟ ಸಂಖ್ಯೆ: 1
♓ ಮೀನ ರಾಶಿ
ದಿನದ ಫಲ:
ಹೊಸ ಉದ್ಯಮ ಆರಂಭಿಸಲು ಸಕಾಲ. ಹಿರಿಯರೊಂದಿಗೆ ವಿನಯದಿಂದ ವರ್ತಿಸಿ. ರಾಜಕೀಯ ಕ್ಷೇತ್ರದಲ್ಲಿ ಶುಭ. ವಾಹನ ಚಾಲನೆಯಲ್ಲಿ ಜಾಗರೂಕತೆ ಅಗತ್ಯ.
✨ ಅದೃಷ್ಟ ಸಂಖ್ಯೆ: 5
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
📩 ಸುದ್ದಿ ಕಳುಹಿಸಿ
madhayakarnatakalive@gmail.com