ಶ್ರೀಮತಿ ಗೌರಮ್ಮ
ಹೊಳಲ್ಕೆರೆ: ಇಲ್ಲಿನ ತಾಳಕಟ್ಟ ಗ್ರಾಮದ ನಿವಾಸಿ ಹಾಗೂ ಖ್ಯಾತ ಚಲನಚಿತ್ರ ಛಾಯಾಗ್ರಾಹಕ ಶೇಖರ್ ಚಂದ್ರು (D.O.P) ಅವರ ತಾಯಿ
ಶ್ರೀಮತಿ ಗೌರಮ್ಮ (72)
ಅವರು ಬುಧವಾರ ಬೆಳಗ್ಗೆ 5.15ಕ್ಕೆ ನಿಧನರಾಗಿದ್ದಾರೆ.
ತಾಳಕಟ್ಟ ಗ್ರಾಮದ ಜನತಾ ಮನೆ ನಿವಾಸಿಗಳಾದ ಮಳ್ಳಯ್ಯರ ದೊಡ್ಡಯ್ಯನವರ ಧರ್ಮಪತ್ನಿಯಾದ ಗೌರಮ್ಮನವರು, ವಯೋಸಹಜವಾಗಿ ವಿಧಿವಶರಾಗಿದ್ದಾರೆ.
ಮೃತರು ಪತಿ ಮಳ್ಳಯ್ಯರ ದೊಡ್ಡಯ್ಯ, ಪುತ್ರರಾದ ಖ್ಯಾತ ಚಲನಚಿತ್ರ ಛಾಯಾಗ್ರಾಹಕ ಚಂದ್ರು (ಶೇಖರ್ ಚಂದ್ರ), ವಕೀಲರಾದ ವಸಂತ್ ಕುಮಾರ್, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ತಾಳಕಟ್ಟ ಗ್ರಾಮದ ಅವರ ತೋಟದಲ್ಲಿ
ಬುಧವಾರ ಮಧ್ಯಾಹ್ನ 2.30ಕ್ಕೆ
ನೆರವೇರಿಸಲು ಗುರು ಹಿರಿಯರು ಮತ್ತು ಕುಟುಂಬಸ್ಥರು ನಿಶ್ಚಯಿಸಿರುತ್ತಾರೆ.
“ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ ವರ್ಗದವರಿಗೆ ದುಃಖ ತಡೆಯುವ ಶಕ್ತಿ ನೀಡಲಿ.”
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
