ದಾವಣಗೆರೆ ವಿವಿ ಘಟಿಕೋತ್ಸವ:‌ ಕೃಷಿಕನ ಮಗಳ ಮುಡಿಗೆ 7 ಚಿನ್ನದ ಪದಕ; ಎನ್.ಬಿ. ನಯನಾ ವಿವಿಯ ‘ಚಿನ್ನದ ಹುಡುಗಿ’!

Author Picture
Published On: January 29, 2026

—Advertisement—

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ 13ನೇ ವಾರ್ಷಿಕ ಘಟಿಕೋತ್ಸವಕ್ಕೆ ವೇದಿಕೆ ಸಜ್ಜಾಗಿದ್ದು, ಈ ಬಾರಿ ಗ್ರಾಮೀಣ ಪ್ರತಿಭೆಗಳೇ ಮೇಲುಗೈ ಸಾಧಿಸಿವೆ. ಸ್ನಾತಕೋತ್ತರ ವಾಣಿಜ್ಯ ವಿಭಾಗದ (M.Com) ವಿದ್ಯಾರ್ಥಿನಿ ಎನ್.ಬಿ. ನಯನಾ ಬರೋಬ್ಬರಿ 7 ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ವಿಶ್ವವಿದ್ಯಾಲಯದ ‘ಚಿನ್ನದ ಹುಡುಗಿ’ಯಾಗಿ ಹೊರಹೊಮ್ಮಿದ್ದಾರೆ.

🏆 ವಿವಿಯ ‘ಚಿನ್ನದ ಹುಡುಗಿ’ಯ ಬೆರಗಾಗಿಸುವ ಸಾಧನೆ

 ರೈತನ ಮಗಳ ಬಂಗಾರದ ಸಾಧನೆ: ಹರಿಹರ ತಾಲೂಕಿನ ಜಿಗಳಿ ಗ್ರಾಮದ ನಯನಾ ಅವರದ್ದು ಕಡುಬಡತನವನ್ನೇ ಮೆಟ್ಟಿ ನಿಂತ ಸಾಧನೆ. ತಂದೆ ಭರಮನಗೌಡ ಮತ್ತು ತಾಯಿ ಮೀನಾಕ್ಷಿ ಅವರಿಗೆ ಜಮೀನು ಅಲ್ಪಸ್ವಲ್ಪ ಇದೆ. ದಾವಣಗೆರೆಯಲ್ಲಿ ಅಜ್ಜ-ಅಜ್ಜಿಯ ಮನೆಯಲ್ಲಿದ್ದುಕೊಂಡು ವ್ಯಾಸಂಗ ಪೂರೈಸಿದ್ದಾರೆ.

ಐಎಎಸ್ ಕನಸು: ಕೆಎಎಸ್ (KAS) ಮತ್ತು ಐಎಎಸ್ (IAS) ಪರೀಕ್ಷೆಗಳಿಗೆ ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದು, ಸರ್ಕಾರಿ ಆಡಳಿತ ಸೇವೆಯಲ್ಲಿ ಉನ್ನತ ಹುದ್ದೆ ಅಲಂಕರಿಸುವ ಕನಸು ಅವರದ್ದಾಗಿದೆ.

ನನಗೆ ಏಳು ಚಿನ್ನದ ಪದಕ ಬಂದಿರುವುದು ಸಂತಸ ತಂದಿದೆ. ಕಷ್ಟಪಟ್ಟು ಓದಿದಕ್ಕೆ ಪ್ರತಿಫಲ ಸಿಕ್ಕಿದೆ. ಇದಕ್ಕೆ ನನ್ನ ತಂದೆ, ತಾಯಿ ಹಾಗೂ ಕುಟುಂಬದ ಸಹಕಾರ ಹೆಚ್ಚಿದೆ. ಮುಂದಿನ ಸಾಧನೆಗೆ ನನಗೆ ಸ್ಪೂರ್ತಿ ತಂದಿದೆ
— ನಯನಾ ಎನ್.ಬಿ. ಚಿನ್ನದ ಕುವರಿ

ಘಟಿಕೋತ್ಸವದ ಸಂಪೂರ್ಣ ವಿವರ: ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕುಲಪತಿ ಪ್ರೊ. ಬಿ.ಟಿ. ಕುಂಬಾರ ಅವರು ಘಟಿಕೋತ್ಸವದ ವಿವರಗಳನ್ನು ಹಂಚಿಕೊಂಡರು.

ಒಟ್ಟು ಪದವಿ: ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಒಟ್ಟು 12,706 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.

ಚಿನ್ನದ ಪದಕ: ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ 45 ವಿದ್ಯಾರ್ಥಿಗಳು ಒಟ್ಟು 87 ಚಿನ್ನದ ಪದಕಗಳನ್ನು ಹಂಚಿಕೊಳ್ಳಲಿದ್ದಾರೆ.

ಸಂಶೋಧನೆ: 70 ಸಂಶೋಧನಾರ್ಥಿಗಳಿಗೆ ಪಿಎಚ್‌ಡಿ ಪದವಿ ನೀಡಿ ಗೌರವಿಸಲಾಗುವುದು.

12,706
ಒಟ್ಟು ಪದವಿಗಳು
87
ಚಿನ್ನದ ಪದಕಗಳು
70
ಪಿಎಚ್‌ಡಿ ಪದವಿ

🎓 ದಾವಣಗೆರೆ ವಿವಿ ಗೌರವ ಡಾಕ್ಟರೇಟ್ (D.Lit) ಪುರಸ್ಕೃತರು


  • ಎಲ್. ರೇವಣಸಿದ್ದಪ್ಪ – ನಿವೃತ್ತ ಪೊಲೀಸ್ ಅಧಿಕಾರಿ

  • ಪ್ರೊ. ಸಿ.ಎಚ್. ಮುರಿಗೇಂದ್ರಪ್ಪ – ಹಿರಿಯ ಪ್ರಾಧ್ಯಾಪಕರು & ಶೈಕ್ಷಣಿಕ ಸಂಘಟಕರು

  • ಎಂ. ರಾಮಪ್ಪ – ಹಿರಿಯ ಸಮಾಜ ಸೇವಕರು (ಚಳ್ಳಕೆರೆ)

📅 ಘಟಿಕೋತ್ಸವದ ವಿವರಗಳು

ಅಧ್ಯಕ್ಷತೆ:
ಥಾವರ್‌ಚಂದ್ ಗೆಹ್ಲೋಟ್ (ರಾಜ್ಯಪಾಲರು)
ಮುಖ್ಯ ಅತಿಥಿ:
ಡಾ. ವಾಸುದೇವ ಕೆ. ಅತ್ರೆ (ಪದ್ಮವಿಭೂಷಣ ಪುರಸ್ಕೃತರು)
ಪದವಿ ಪ್ರದಾನ:
ಡಾ. ಎಂ.ಸಿ. ಸುಧಾಕರ್ (ಉನ್ನತ ಶಿಕ್ಷಣ ಸಚಿವರು)

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಎಸ್.ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಪ್ರೊ. ಸಿ.ಕೆ. ರಮೇಶ್ ಹಾಗೂ ಹಣಕಾಸು ಅಧಿಕಾರಿ ವಂದನಾ ಉಪಸ್ಥಿತರಿದ್ದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Leave a Comment

Home
Web Stories
Instagram
WhatsApp