ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಧನಲಾಭ, ಇವರಿಗೆ ಖರ್ಚಿನ ಚಿಂತೆ! ನಿಮ್ಮ ಇಂದಿನ ಅದೃಷ್ಟ ಸಂಖ್ಯೆ ಯಾವುದು ನೋಡಿ

Author Picture
Published On: February 14, 2026
dina bhavishya ದಿನ ಭವಿಷ್ಯ

—Advertisement—

ದಿನ ಭವಿಷ್ಯ: ಇಂದು ಶನಿವಾರ, ಫೆಬ್ರವರಿ 14, 2026. ಇಂದಿನ ದಿನ ಗ್ರಹಗಳ ಸಂಚಾರ ಹೇಗಿದೆ? ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ? ಯಾರಿಗೆ ಎಚ್ಚರಿಕೆ ಅಗತ್ಯ? ಮಧ್ಯ ಕರ್ನಾಟಕದ ಜನಪ್ರಿಯ ಜಾಲತಾಣದಲ್ಲಿ ಇಂದಿನ ಸಂಪೂರ್ಣ ಪಂಚಾಂಗ ಮತ್ತು ರಾಶಿಫಲ ಇಲ್ಲಿದೆ.

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ
ಫೆಬ್ರವರಿ 14, 2026
ಶನಿವಾರ
ಮಧ್ಯ ಕರ್ನಾಟಕ ಲೈವ್ – ಜ್ಯೋತಿಷ್ಯ ಫಲ

🕉️ ಇಂದಿನ ಪಂಚಾಂಗ

  • ಸಂವತ್ಸರ: ಕ್ರೋಧಿನಾಮ ಸಂವತ್ಸರ, ಉತ್ತರಾಯಣ
  • ಮಾಸ: ಮಾಘ ಮಾಸ | ಪಕ್ಷ: ಕೃಷ್ಣ ಪಕ್ಷ
  • ತಿಥಿ: ದ್ವಾದಶಿ (ಸಂಜೆ 04:01 ರವರೆಗೆ)
  • ನಕ್ಷತ್ರ: ಪೂರ್ವಾಷಾಢ (ಸಂಜೆ 06:16 ರವರೆಗೆ)
  • ರಾಹುಕಾಲ: ಬೆಳಿಗ್ಗೆ 09:48 ರಿಂದ 11:12
  • ಗುಳಿಕಕಾಲ: ಬೆಳಿಗ್ಗೆ 07:00 ರಿಂದ 08:24

♈ ಮೇಷ ರಾಶಿ

ಕೆಲಸಗಳಲ್ಲಿ ಅಡೆತಡೆ ಉಂಟಾದರೂ ಅಂತಿಮವಾಗಿ ಯಶಸ್ಸು. ಕುಟುಂಬದಲ್ಲಿ ಮನಸ್ತಾಪ ಬರದಂತೆ ಎಚ್ಚರವಹಿಸಿ. ಹಿರಿಯರಿಗೆ ಗೌರವ ಕೊಡಿ.

ಅದೃಷ್ಟ ಸಂಖ್ಯೆ: 5

♉ ವೃಷಭ ರಾಶಿ

ಪ್ರೀತಿಪಾತ್ರರ ಭೇಟಿ. ವ್ಯಾಪಾರದಲ್ಲಿ ಚೇತರಿಕೆ, ಆರ್ಥಿಕ ಲಾಭ. ಉದ್ಯೋಗ ಆಕಾಂಕ್ಷಿಗಳಿಗೆ ಬಯಸಿದ ಉದ್ಯೋಗ ಸಿಗುವ ಸಾಧ್ಯತೆ.

ಅದೃಷ್ಟ ಸಂಖ್ಯೆ: 3

♊ ಮಿಥುನ ರಾಶಿ

ಹಿರಿಯರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಅನಗತ್ಯ ಯೋಚನೆ ಬೇಡ. ಮೌನದಿಂದ ಕಾರ್ಯ ಸಾಧನೆ. ಸಮಸ್ಯೆಗಳಿಗೆ ಪರಿಹಾರ.

ಅದೃಷ್ಟ ಸಂಖ್ಯೆ: 1

♋ ಕರ್ಕಾಟಕ ರಾಶಿ

ಸ್ನೇಹಿತರ ಸಹಾಯದಿಂದ ಕೆಲಸ ಸುಲಲಿತ. ಪುಣ್ಯಕ್ಷೇತ್ರ ದರ್ಶನ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ.

ಅದೃಷ್ಟ ಸಂಖ್ಯೆ: 5

♌ ಸಿಂಹ ರಾಶಿ

ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ. ಕೃಷಿ ಕೆಲಸಗಳಲ್ಲಿ ಆಸಕ್ತಿ. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿ.

ಅದೃಷ್ಟ ಸಂಖ್ಯೆ: 8

♍ ಕನ್ಯಾ ರಾಶಿ

ಆತುರದ ನಿರ್ಧಾರ ಬೇಡ. ವಿವೇಚನೆ ಮುಖ್ಯ. ಆತ್ಮವಿಶ್ವಾಸವಿರಲಿ. ನಾಲ್ಕು ರೀತಿಯಲ್ಲಿಯೂ ಧನಾಗಮನ ಯೋಗ.

ಅದೃಷ್ಟ ಸಂಖ್ಯೆ: 6

♎ ತುಲಾ ರಾಶಿ

ದೈವಾನುಗ್ರಹದಿಂದ ಧನಲಾಭ. ಮನೆಯಲ್ಲಿ ಧಾರ್ಮಿಕ ಕಾರ್ಯ. ಹಿರಿಯರ ಮಾರ್ಗದರ್ಶನ ಪಡೆಯಿರಿ. ಶುಭ ದಿನ.

ಅದೃಷ್ಟ ಸಂಖ್ಯೆ: 4

♏ ವೃಶ್ಚಿಕ ರಾಶಿ

ಕುಟುಂಬದ ಸಮಸ್ಯೆಗಳಿಗೆ ತಾಳ್ಮೆ ಅಗತ್ಯ. ನವಗ್ರಹ ಜಪ ಮಾಡಿ. ವಿದ್ಯಾರ್ಥಿಗಳಿಗೆ ಶುಭ. ಭೂಮಿ ವ್ಯವಹಾರದಲ್ಲಿ ಲಾಭ.

ಅದೃಷ್ಟ ಸಂಖ್ಯೆ: 4

♐ ಧನು ರಾಶಿ

ದೈವಾನುಕೂಲ, ಧನಲಾಭ. ಸಹೋದರರ ಜೊತೆ ಬಾಂಧವ್ಯ ವೃದ್ಧಿ. ಅನಗತ್ಯ ವಾದ-ವಿವಾದಗಳಿಂದ ದೂರವಿರಿ.

ಅದೃಷ್ಟ ಸಂಖ್ಯೆ: 2

♑ ಮಕರ ರಾಶಿ

ನಿರೀಕ್ಷಿಸದ ಆಶ್ಚರ್ಯಕರ ಕಾರ್ಯ ಸಾಧನೆ. ಮನೆಯಲ್ಲಿ ಹರ್ಷ. ಬರಹಗಾರರಿಗೆ, ಕಲಾವಿದರಿಗೆ ಸನ್ಮಾನ ಯೋಗ.

ಅದೃಷ್ಟ ಸಂಖ್ಯೆ: 2

♒ ಕುಂಭ ರಾಶಿ

ವಾದ ವಿವಾದಗಳಿಂದ ದೂರವಿರಿ. ಖರ್ಚು ಅಧಿಕ. ದುಶ್ಚಟಗಳಿಗೆ ದಾಸರಾಗಬೇಡಿ. ಆಧ್ಯಾತ್ಮಿಕ ಚಿಂತನೆ ನಡೆಸಿ.

ಅದೃಷ್ಟ ಸಂಖ್ಯೆ: 9

♓ ಮೀನ ರಾಶಿ

ಧನಾದಾಯ ಹೆಚ್ಚಳ ಜೊತೆಗೆ ಖರ್ಚು. ನೂತನ ಗೃಹ ನಿರ್ಮಾಣಕ್ಕೆ ಸಕಾಲವಲ್ಲ. ವಿದೇಶ ಯಾತ್ರಾ ಯೋಗವಿದೆ.

ಅದೃಷ್ಟ ಸಂಖ್ಯೆ: 7

ವಿಶೇಷ ಸೂಚನೆ: ಇದು ಗೋಚಾರ ಫಲವಾಗಿದ್ದು, ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಗಳಲ್ಲಿ ವ್ಯತ್ಯಾಸವಿರಬಹುದು. ಶುಭವಾಗಲಿ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp