,

ಹರಿಹರ: ಮಾ.15ರಂದು ನಗರದ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸ್ಥಗಿತ

BESCOM official notice for power outage in Harihara on March 15, 2026.
— ​ಹರಿಹರ ನಗರದಲ್ಲಿ ಮಾ. 15ರಂದು ನಡೆಯಲಿರುವ ತುರ್ತು ವಿದ್ಯುತ್ ಕಾಮಗಾರಿಯ ಅಧಿಕೃತ ಪ್ರಕಟಣೆ.

—Advertisement—

📍 ದಾವಣಗೆರೆ ದಕ್ಷಿಣ

ಉಪಸಮರ - 2026

ಮಹಾ ಕದನ: ಯಾರಿಗೆ ಒಲಿಯಲಿದೆ ಟಿಕೆಟ್?

Samarth Jabbar Vinay Ajay Yashwanth
ಕ್ಷಣ ಕ್ಷಣದ ಲೈವ್ ಅಪ್ಡೇಟ್ಸ್ ➔

ಹರಿಹರ: ನಗರದ ಶಿವಮೊಗ್ಗ ರಸ್ತೆಯಲ್ಲಿ ಹಳೆಯ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಬರುವ ಮಾರ್ಚ್ 15ರಂದು (ಭಾನುವಾರ) ನಗರದ ಪ್ರಮುಖ ಬಡಾವಣೆಗಳಲ್ಲಿ ದಿನವಿಡೀ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಇಲಾಖೆ ತಿಳಿಸಿದೆ.

ವಿದ್ಯುತ್ ಸ್ಥಗಿತದ ಸಮಯ: ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ.

ವಿದ್ಯುತ್ ಸ್ಥಗಿತದ ಪ್ರದೇಶಗಳ ಪಟ್ಟಿ:

ಶಿವಮೊಗ್ಗ ರಸ್ತೆ, ಬೈಪಾಸ್, ತರಳಬಾಳು ಬಡಾವಣೆ, ವಿದ್ಯಾನಗರದ ಎ, ಬಿ ಮತ್ತು ಸಿ ಬ್ಲಾಕ್‌ಗಳು, ಇಂದಿರಾನಗರ, ಪ್ರಶಾಂತನಗರ, ಕಾಳಿದಾಸನಗರ, ಬೆಂಕಿನಗರ, ಜೆ.ಸಿ ಬಡಾವಣೆ, ದೇವಸ್ಥಾನ ರಸ್ತೆ, ಮುರಕಲ್ ಕಾಂಪೌಂಡ್, ವೀರಭದ್ರೇಶ್ವರ ದೇವಸ್ಥಾನದ ಸುತ್ತಮುತ್ತ, ರಾಮಮಂದಿರ, 1ನೇ ರೈಲ್ವೇ ಗೇಟ್, ಹರಿಹರೇಶ್ವರ ಫೀಡರ್ ವ್ಯಾಪ್ತಿಯ ಪ್ರದೇಶಗಳು, ಕೈಲಾಸನಗರ, ಗಂಗಾನಗರ, ಸ್ಟೇಷನ್ ರಸ್ತೆ, ಜಾಮೀಯಾ ಮಸೀದಿ ಹಾಗೂ ಹಳೇ ತಹಶೀಲ್ದಾರ್ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಭಾಗಗಳು.

ಕಾಮಗಾರಿಯ ಹಿನ್ನೆಲೆ

ಹರಿಹರ 66/11 ಕೆ.ವಿ ಎಂ.ಯು.ಎಸ್.ಎಸ್ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ದೃಷ್ಟಿಯಿಂದ ವಿದ್ಯುತ್ ಕಂಬಗಳ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕಾಮಗಾರಿ ಅನಿವಾರ್ಯವಾಗಿದ್ದು, ಗ್ರಾಹಕರು ಬೆಸ್ಕಾಂ ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp