ಹೊಸದುರ್ಗ: “ಜಗತ್ತಿನ ನಾನಾ ಮೂಲೆಗಳಿಂದ ದಾಳಿಕೋರರು ಬಂದು ನಮ್ಮ ಸಾವಿರಾರು ದೇವಾಲಯಗಳನ್ನು ಧ್ವಂಸಗೊಳಿಸಿದರು. ಆದರೆ, ನಮ್ಮ ಸನಾತನ ಸಂಸ್ಕೃತಿಯನ್ನು ಅಳಿಸಲು ಅವರಿಂದ ಸಾಧ್ಯವಾಗಲಿಲ್ಲ. ಇಂದು ಭಾರತ, ಭಾರತವಾಗಿಯೇ ಉಳಿದಿರಲು ಇಲ್ಲಿನ ಸನಾತನ ಹಿಂದೂ ಸಂಸ್ಕೃತಿ ಮತ್ತು ಆರ್.ಎಸ್.ಎಸ್ ನಂತಹ ಸಂಘಟನೆಗಳೇ ಕಾರಣ,” ಎಂದು ಶಿವಮೊಗ್ಗ ಶಾಸಕ ಹಾಗೂ ಸಂಘದ ಪ್ರಮುಖ ಚನ್ನಬಸಪ್ಪ (ಚೆನ್ನಿ) ಪ್ರತಿಪಾದಿಸಿದರು.
ತಾಲೂಕಿನ ದೇವಪುರದಲ್ಲಿ ಹುಣವಿನಡು-ದೇವಪುರ-ಅತ್ತಿಮಗೆ ವಲಯದ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
100ರ ಸಂಭ್ರಮದಲ್ಲಿ ಆರ್‌ಎಸ್‌ಎಸ್
“1925ರಲ್ಲಿ ಹಿಂದೂ ಎಂದು ಹೇಳಿಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದರು. ಇದನ್ನು ಮನಗಂಡ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರು ಸಂಘವನ್ನು ಸ್ಥಾಪಿಸಿದರು. ಅಂದು ಅವರು ಕಂಡ ಕನಸು ಇಂದು ನನಸಾಗಿದೆ. ಇಂದು ಆರ್‌ಎಸ್‌ಎಸ್ (RSS) ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಪ್ರಪಂಚದ 158 ರಾಷ್ಟ್ರಗಳಲ್ಲಿ ಹಿಂದೂ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ,” ಎಂದು ಚನ್ನಬಸಪ್ಪ ತಿಳಿಸಿದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಸೋಮನಾಥ ಕೇವಲ ಕಟ್ಟಡವಲ್ಲ!
ದೇಶದ ಇತಿಹಾಸವನ್ನು ಸ್ಮರಿಸಿದ ಅವರು, “ಗುಜರಾತಿನ ಸೋಮನಾಥ ಮಂದಿರ ಕೇವಲ ಕಲ್ಲು ಮಣ್ಣಿನ ಕಟ್ಟಡವಲ್ಲ; ಅದು ಈ ದೇಶದ ಸನಾತನ ಸಂಸ್ಕೃತಿಯ ಪ್ರತೀಕ. ಅಯೋಧ್ಯೆ, ಕಾಶಿ, ಮಥುರಾಗಳ ಮೇಲೆ ದಾಳಿ ನಡೆದರೂ ಹಿಂದೂ ಸಮಾಜ ಸೋಲಲಿಲ್ಲ. ಹಿಂದುತ್ವ ಎಂದರೆ ಪ್ರೀತಿ ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವ ಜೀವನ ಪದ್ಧತಿ,” ಎಂದು ವ್ಯಾಖ್ಯಾನಿಸಿದರು.
‘ದೇಶಕ್ಕಾಗಿ ಮತ್ತೊಂದು ಮಗು ಪಡೆಯಿರಿ’
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ರೂಪಾ ಅಗ್ರಹಾರ, “ಹಿಂದೂಗಳು ಕೇವಲ ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎನ್ನದೇ, ಭವ್ಯ ಭಾರತದ ನಿರ್ಮಾಣಕ್ಕಾಗಿ ದೇಶಕ್ಕಾಗಿಯೇ ಮತ್ತೊಂದು ಮಗುವನ್ನು ಪಡೆಯುವ ಅಗತ್ಯವಿದೆ,” ಎಂದು ಕರೆ ನೀಡಿದರು. ಅಲ್ಲದೇ ಮಕ್ಕಳಿಗೆ ಬಾಲ್ಯದಿಂದಲೇ ಧಾರ್ಮಿಕ ಸಂಸ್ಕಾರ ನೀಡುವ ಜವಾಬ್ದಾರಿ ತಾಯಂದಿರ ಮೇಲಿದೆ ಎಂದರು.
ಜಾತಿ ಮರೆತು ಒಂದಾಗಿ: ಕೆ.ಎಸ್. ಕಲ್ಮಠ್
ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಕೆ.ಎಸ್. ಕಲ್ಮಠ್ ಮಾತನಾಡಿ, “ಜಾತಿಯನ್ನು ಬದಿಗಿಟ್ಟು ನಾವೆಲ್ಲಾ ಹಿಂದೂ ಎಂದು ಗಟ್ಟಿಯಾಗಿ ಹೇಳಬೇಕಿದೆ. ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಸುವ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸಬೇಕು,” ಎಂದು ತಿಳಿಸಿದರು.
ಪ್ರಮುಖ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಕಾರ್ಯವಾಹ ವಾಸುದೇವ ಲೆಕ್ಕೆನಹಳ್ಳಿ, ಪ್ರಮುಖರಾದ ಗೂಳಿಹಟ್ಟಿ ಕೃಷ್ಣಮೂರ್ತಿ, ಎಸ್. ಲಿಂಗಮೂರ್ತಿ, ಸದ್ಗುರು ಪ್ರದೀಪ್, ತುಂಬಿನಕೆರೆ ಬಸವರಾಜ್, ಪನ್ನಗ ರಾಯ್ಕರ್ ಸೇರಿದಂತೆ ದೇವಪುರ, ಅತ್ತಿಮಗೆ ಮತ್ತು ಹುಣವಿನಡು ಭಾಗದ ಸಾವಿರಾರು ಹಿಂದೂ ಬಾಂಧವರು ಪಾಲ್ಗೊಂಡಿದ್ದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
