ಹೊಸದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ಕುಂಚಟಿಗ ಮಠದ ಸಮೀಪ ಚಿರತೆಯೊಂದು ತನ್ನ ಮರಿಗಳೊಂದಿಗೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಭೀತಿ ಸೃಷ್ಟಿಸಿದೆ.
ಮತ್ತೆ ಶುರುವಾಯ್ತು ವನ್ಯಜೀವಿಗಳ ಆತಂಕ
ಕಳೆದ ಎರಡು-ಮೂರು ದಿನಗಳಿಂದ ಮಠದ ಆವರಣದ ಆಸುಪಾಸಿನಲ್ಲಿ ಚಿರತೆ ಮತ್ತು ಅದರ ಮರಿಗಳು ಓಡಾಡುತ್ತಿರುವುದನ್ನು ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಈ ಹಿಂದೆ ಇದೇ ಮಠದ ಆವರಣದಲ್ಲಿ ಕರಡಿಗಳು ಕಾಣಿಸಿಕೊಂಡು ಜನರ ನಿದ್ದೆಗೆಡಿಸಿದ್ದವು. ಈಗ ಚಿರತೆಯ ಸಂಚಾರ ದೃಢಪಟ್ಟಿರುವುದರಿಂದ ಜನರು ಸಂಜೆ ವೇಳೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.
ವಾಯುವಿಹಾರಿಗಳಲ್ಲಿ ಭೀತಿ
ಕುಂಚಟಿಗ ಮಠದ ರಸ್ತೆಯು ಪಟ್ಟಣದ ಜನರ ನೆಚ್ಚಿನ ವಾಯುವಿಹಾರದ ತಾಣವಾಗಿದೆ. ಪ್ರತಿದಿನ ನೂರಾರು ಜನರು ಇಲ್ಲಿ ಬೆಳಿಗ್ಗೆ ಮತ್ತು ಸಂಜೆ ನಡಿಗೆಗಾಗಿ ಬರುತ್ತಾರೆ. ಆದರೆ ಚಿರತೆಯ ಭಯದಿಂದ ಈಗ ವಾಯುವಿಹಾರಕ್ಕೆ ಬರುವವರ ಸಂಖ್ಯೆ ಕ್ಷೀಣಿಸಿದೆ. ಮಠದ ಭಕ್ತರು ಹಾಗೂ ರೈತರು ತಮ್ಮ ಸಾಕುಪ್ರಾಣಿಗಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಅರಣ್ಯ ಇಲಾಖೆಗೆ ಸಾರ್ವಜನಿಕರ ಆಗ್ರಹ
ಚಿರತೆಯು ಜನವಸತಿ ಪ್ರದೇಶಕ್ಕೆ ಬರುವ ಮೊದಲೇ ಅದನ್ನು ಸೆರೆಹಿಡಿಯಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಕೂಡಲೇ ಬೋನು ಇಟ್ಟು ಚಿರತೆಯನ್ನು ಜೋಗಿಮಟ್ಟಿ ಅರಣ್ಯ ಅಥವಾ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
