,

ಹೊಸದುರ್ಗ: ಏಪ್ರಿಲ್ 5ರಂದು ಮಹಿಳಾ ದಿನಾಚರಣೆ; ಪದ್ಮಶ್ರೀ ಡಾ. ಮಾಲತಿ ಹೊಳ್ಳ, ನಟಿ ಅನು ಪ್ರಭಾಕರ್, ಭವ್ಯ ಗೌಡ ಭಾಗಿ

Author Picture
Published On: April 3, 2026
actress Bhavya Gowda, para-athlete Dr. Malathi Holla, and actress Anu Prabhakar for Hosadurga Women's Day event

—Advertisement—

ಮಧ್ಯ ಕರ್ನಾಟಕ ಲೈವ್ಹೊಸದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತರು, ಸಿನಿಮಾ ತಾರೆಯರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಒಂದೇ ವೇದಿಕೆಯಲ್ಲಿ ಸೇರುತ್ತಿರುವುದು ವಿಶೇಷವಾಗಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ.) ತಾಲೂಕು ಘಟಕ ಹೊಸದುರ್ಗ ಹಾಗೂ ಶ್ರೀ ಸಚ್ಚಿದಾನಂದ ಸೇವಾ ಟ್ರಸ್ಟ್ (ರಿ.) ಇವರ ಸಂಯುಕ್ತಾಶ್ರಯದಲ್ಲಿ ಈ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿವರಗಳು:

  • ದಿನಾಂಕ: 05.04.2026ನೇ ಭಾನುವಾರ

  • ಸಮಯ: ಬೆಳಗ್ಗೆ 10.00 ಗಂಟೆಗೆ

  • ಸ್ಥಳ: ಎಸ್.ಆರ್. ಭೀಮರಾಜ್ ಶೆಟ್ಟಿ ಬಡಾವಣೆ, ಸಾರ್ವಜನಿಕ ಆಸ್ಪತ್ರೆ ಹತ್ತಿರ, ಅಜ್ಜಂಪುರ ರಸ್ತೆ, ಹೊಸದುರ್ಗ.

ಗಮನ ಸೆಳೆಯಲಿರುವ ಗಣ್ಯರ ದಂಡು ಕಾರ್ಯಕ್ರಮದ ಉದ್ಘಾಟನೆಯನ್ನು ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹೊಸದುರ್ಗ ತಾಲೂಕು ಘಟಕದ ಅಧ್ಯಕ್ಷರಾದ ವಕೀಲ ಶ್ರೀ ಎಸ್. ಮಂಜುನಾಥ್ ವಹಿಸಲಿದ್ದಾರೆ.

ತಾರಾಮೌಲ್ಯದ ಮೆರಗು ಈ ಕಾರ್ಯಕ್ರಮಕ್ಕೆ ಸಿನಿಮಾ ಹಾಗೂ ಕಿರುತೆರೆಯ ತಾರೆಯರ ಆಗಮನವಾಗುತ್ತಿದ್ದು, ಹೊಸದುರ್ಗದ ಜನತೆಯಲ್ಲಿ ಸಂಭ್ರಮ ಮನೆಮಾಡಿದೆ. ಖ್ಯಾತ ಚಲನಚಿತ್ರ ನಟಿ ಶ್ರೀಮತಿ ಅನುಪ್ರಭಾಕರ್ ಹಾಗೂ ಬಿಗ್‌ಬಾಸ್ ಮಾಜಿ ಸ್ಪರ್ಧಿ, ಖ್ಯಾತ ಧಾರಾವಾಹಿ ಕಲಾವಿದೆ ಭವ್ಯಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

ಇವರೊಂದಿಗೆ ಮುಖ್ಯ ಅತಿಥಿಗಳಾಗಿ:

  • ಬಸವರಾಜು, ಅಧ್ಯಕ್ಷರು, ಶ್ರೀ ಸಚ್ಚಿದಾನಂದ ಸೇವಾ ಟ್ರಸ್ಟ್ (ರಿ.)

  • ಸಿಂಧು ಅಶೋಕ್, ಮಹಿಳಾ ಅಧ್ಯಕ್ಷರು, ಅ.ಭಾ.ವೀ.ಲಿಂ. ಮಹಾಸಭಾ, ಹೊಸದುರ್ಗ

  • ಪ್ರೊ. ಸುತ್ತೂರು ಎಸ್. ಮಾಲಿನಿ, ಮೈಸೂರು ವಿ.ವಿ.

  • ಪುಷ್ಪಲತಾ ಕುಮಾರ್, ಅಧ್ಯಕ್ಷರು, ಮಹಾಸಭಾ ನಗರ ಘಟಕ

  •  ಸೌಮ್ಯ ಶಿವರಾಜ್, ಮಹಾಪೋಷಕರು ಹಾಗೂ ಕಾರ್ಯದರ್ಶಿಗಳು

  • ದೀಪಾ ಪ್ರಸನ್ನ ಕುಮಾರ್, ಅಧ್ಯಕ್ಷರು, ಮಹಿಳಾ ಯುವ ಘಟಕ ಹೊಸದುರ್ಗ

  • ಡಾ. ಅಮ್ಮರಾಮಚಂದ್ರ, ಅಂತರರಾಷ್ಟ್ರೀಯ ಜಾನಪದ ಕಲಾವಿದರು, ಮೈಸೂರು

ಸಮಸ್ತ ಸಾರ್ವಜನಿಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಶ್ರೀ ಸಚ್ಚಿದಾನಂದ ಸೇವಾ ಟ್ರಸ್ಟ್ ಪದಾಧಿಕಾರಿಗಳು ಕೋರಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Home
Web Stories
Instagram
WhatsApp