ಹರಿಹರ (ಜಿಗಳಿ): ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಪ್ರತಿಷ್ಠಿತ ‘ಗುರುಧ್ಯಾನ ವಿದ್ಯಾಸಂಸ್ಥೆ’ (ಆಂಗ್ಲ ಮಾಧ್ಯಮ ಶಾಲೆ) ವಿದ್ಯಾರ್ಥಿಗಳು 2025-26ನೇ ಸಾಲಿನ ಜವಾಹರ್ ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.

ದಾವಣಗೆರೆ ಜಿಲ್ಲೆಯಾದ್ಯಂತ ಕೇವಲ 80 ಮಕ್ಕಳಿಗೆ ಮಾತ್ರ ನವೋದಯ ಶಾಲೆಗೆ ಪ್ರವೇಶಾವಕಾಶವಿದೆ. ಈ 80 ಸ್ಥಾನಗಳ ಪೈಕಿ ಜಿಗಳಿಯ ಗುರುಧ್ಯಾನ ಶಾಲೆಯ ಬರೋಬ್ಬರಿ 13 ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಸಿಂಹಪಾಲು ಪಡೆದಿದ್ದಾರೆ. ವಿಶೇಷವೆಂದರೆ, ಇದೇ ಶಾಲೆಯ ಓರ್ವ ವಿದ್ಯಾರ್ಥಿ ಇಡೀ ದಾವಣಗೆರೆ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ತಾಲೂಕಿಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾನೆ.

ಗ್ರಾಮೀಣ ಭಾಗದಲ್ಲಿದ್ದರೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಿರುವ ಗುರುಧ್ಯಾನ ವಿದ್ಯಾಸಂಸ್ಥೆಯು ಈ ಬಾರಿಯ ಫಲಿತಾಂಶದಲ್ಲಿ ತನ್ನ ಪಾರುಪತ್ಯ ಮೆರೆದಿದೆ. ನವೋದಯ ವಸತಿಯುತ ಶಾಲೆಗೆ ಆಯ್ಕೆಯಾದ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
2025-26 ನೇ ಸಾಲಿನಲ್ಲಿ ನವೋದಯ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳ ವಿವರ ಇಲ್ಲಿದೆ:
| ಕ್ರ.ಸಂ | ವಿದ್ಯಾರ್ಥಿಯ ಹೆಸರು (Name) | ಜನ್ಮ ದಿನಾಂಕ (DOB) | ರೋಲ್ ನಂಬರ್ (Roll No) | ವರ್ಗ (Category) |
|---|---|---|---|---|
| 01 | ಎಂ. ಜಿ. ಜಯಂತ್ (M G Jayanth) | 30/10/2014 | 1746354 | Urban (GM) |
| 02 | ಕೆ. ಎಚ್. ಲಾವಣ್ಯ (K H Lavanya) | 30/09/2015 | 1746419 | GM (OBC) |
| 03 | ಸಮೃದ್ಧಿ ಎನ್. ಎ. (Samruddhi N A) | 11/10/2015 | 1746269 | GM |
| 04 | ಹನುಮನಗೌಡ ಬಿ. (Hanumanagowda B) | 28/07/2014 | 1746255 | GM |
| 05 | ಕಿಶೋರ್ ಟಿ. (Kishor T) | 15/10/2014 | 1747354 | GM |
| 06 | ರಿಷಿತ್ ಗೌಡ ಡಿ. (Rishith Gowda D) | 06/07/2014 | 1745405 | GM |
| 07 | ಶ್ರೇಯಸ್ ಎಂ. ಎಚ್. (Shreyas M H) | 04/08/2015 | 1745647 | GM |
| 08 | ಲಾವಣ್ಯ ಕೆ. ಎ. (Lavanya K A) | 19/04/2015 | 1746577 | ST |
| 09 | ಸಾನ್ವಿ ಸಾಲಕಟ್ಟೆ (Sanavi Salakatte) | 15/12/2015 | 1746439 | ST |
| 10 | ಶ್ರೇಯಾ ಎಂ. (Shreya M) | 21/01/2015 | 1746268 | ST |
| 11 | ಹಂಸ ಆರ್. (Hamsa R) | 19/06/2015 | 1747160 | OBC |
| 12 | ಪೃಥ್ವಿ ಎಸ್. ಎಚ್. (Pruthvi S H) | 18/08/2015 | 1746228 | OBC |
| 13 | ಧ್ರುವ ನಾರಾಯಣ ಜೆ. ಕೆ. (Dhruva Narayana JK) | 25/11/2014 | 1746678 | OBC |
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
