ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಕೆಎಸ್‌ಆರ್‌ಟಿಸಿ ಬಸ್ ಪಾಸ್‌ಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

student-bus-pass-online-application

—Election Update—

ಚಿತ್ರದುರ್ಗ: ರಾಜ್ಯದ ಶಾಲಾ-ಕಾಲೇಜುಗಳು ಹಾಗೂ ಪದವಿ ಪೂರ್ವ ಕಾಲೇಜುಗಳು ಈಗಾಗಲೇ ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುಗಮ ಪ್ರಯಾಣಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಚಿತ್ರದುರ್ಗ ವಿಭಾಗವು 2026-27ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಬಸ್ ಪಾಸ್‌ಗಳ ವಿತರಣೆಗೆ ಚಾಲನೆ ನೀಡಿದೆ. ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸರ್ಕಾರದ ಆದೇಶದಂತೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಬಸ್ ಪಾಸ್ ವಿತರಿಸಲು ನಿಗಮವು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‌ನ ಅಧಿಕೃತ ಲಿಂಕ್ https://sevasindhuservices.karnataka.gov.in/buspassservices ಮೂಲಕ ಆನ್‌ಲೈನ್‌ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ದಿನಾಂಕ 29-05-2026 ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.

ಕರ್ನಾಟಕ ಒನ್ / ಗ್ರಾಮ ಒನ್ ಕೇಂದ್ರಗಳಲ್ಲೂ ಅವಕಾಶ

ಇಂಟರ್ನೆಟ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳು ಚಿತ್ರದುರ್ಗ ಜಿಲ್ಲೆಯಾದ್ಯಂತ ಇರುವ ತಮ್ಮ ಹತ್ತಿರದ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಬಹುದು. ಆದರೆ, ಸರ್ಕಾರದ ನಿಯಮಾವಳಿಗಳ ಪ್ರಕಾರ ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು 30 ರೂ. ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ.

ಗಮನಿಸಿ: ಬಸ್ ಪಾಸ್‌ಗಾಗಿ ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿಗಳು ‘ಡಿಕ್ಲರೇಷನ್ ಫಾರಂ’ ಅನ್ನು ಸೇವಾಸಿಂಧು ತಂತ್ರಾಂಶ ಅಥವಾ ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಸುವಾಗ ನಿಮ್ಮ ವ್ಯಾಪ್ತಿಗೆ ಬರುವ ಪಾಸ್ ಕೌಂಟರ್ ಅನ್ನು ಸರಿಯಾಗಿ ಆಯ್ಕೆ ಮಾಡಿ ಸಬ್ಮಿಟ್ ಮಾಡಬೇಕು.

ಪಾಸ್ ವಿತರಣೆ ಮತ್ತು ಶುಲ್ಕ ಪಾವತಿ ಎಂದು?

ಅರ್ಜಿ ಸಲ್ಲಿಕೆಯಾದ ಬಳಿಕ, ನಿಮ್ಮ ಅರ್ಜಿ ಅನುಮೋದನೆಯಾದರೆ (Approved) ಪಾಸ್ ಪಡೆಯಬೇಕಾದ ಕೌಂಟರ್ ವಿವರಗಳನ್ನು ವಿದ್ಯಾರ್ಥಿಯ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ (SMS) ಮೂಲಕ ಕಳುಹಿಸಲಾಗುತ್ತದೆ. ದಿನಾಂಕ 01-06-2026 ರಿಂದ ಬಸ್ ಪಾಸ್‌ಗಳ ವಿತರಣೆ ಆರಂಭವಾಗಲಿದ್ದು, ವಿದ್ಯಾರ್ಥಿಗಳು ತಮಗೆ ನಿಗದಿಯಾದ ಕೌಂಟರ್‌ಗೆ ತೆರಳಿ ಪಾಸ್ ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ (UPI) ಮೂಲಕ ಪಾವತಿಸಿ ಪಾಸ್ ಪಡೆದುಕೊಳ್ಳಬಹುದು.

ಬಸ್ ಪಾಸ್ ವಿತರಣಾ ಕೌಂಟರ್‌ಗಳ ವಿವರ:

ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಈ ಕೆಳಗಿನ ಕೇಂದ್ರಗಳಲ್ಲಿ ಪಾಸ್‌ಗಳನ್ನು ವಿತರಿಸಲಾಗುತ್ತದೆ:

ತಾಲ್ಲೂಕು/ಸ್ಥಳ ಪಾಸ್ ವಿತರಣಾ ಕೌಂಟರ್ ವಿವರಗಳು
ಚಿತ್ರದುರ್ಗ ಎಸ್‍ಬಿಎಂ ರಸ್ತೆಯ ಮೃತ್ಯುಂಜಯ ಕಾಂಪ್ಲೆಕ್ಸ್ (ಸೃಜನ್ ಇಎನ್‍ಟಿ ಕ್ಲೀನಿಕ್ ಹತ್ತಿರ) ಮತ್ತು ಕೆಳಗೋಟೆಯ ವೈಶಾಲಿ ಸರ್ಕಲ್ (ಬಾಯ್ಸ್ ಜೂನಿಯರ್ ಕಾಲೇಜು ಎದುರಿನ ಭೀಮಪ್ಪ ನಾಯಕ ರಸ್ತೆ ಕರ್ನಾಟಕ ಒನ್).
ಚಳ್ಳಕೆರೆ ಕೆಎಸ್‍ಆರ್‍ಟಿಸಿ ಬಸ್‍ಸ್ಟಾಂಡ್ ಎದುರಿನ ಮುನಿಸಿಪಲ್ ಬಿಲ್ಡಿಂಗ್ ರೂಂ ನಂ-8ರ ಕರ್ನಾಟಕ ಒನ್.
ಮೊಳಕಾಲ್ಮುರು ಎಸ್‍ಬಿಎಂಐ ಬ್ಯಾಂಕ್ ಹತ್ತಿರದ ಕರ್ನಾಟಕ ಒನ್.
ಹೊಸದುರ್ಗ ಗಾಂಧಿ ಸರ್ಕಲ್ ಹತ್ತಿರದ ಹೊಳಲ್ಕೆರೆ ರೋಡ್ ಕರ್ನಾಟಕ ಒನ್.
ಹೊಳಲ್ಕೆರೆ ಚಿತ್ರದುರ್ಗ ರೋಡ್, ತಾಲ್ಲೂಕು ಆಫೀಸ್ ಎದುರುಗಡೆಯ ಕರ್ನಾಟಕ ಒನ್.
ಪಾವಗಡ ತಾಲ್ಲೂಕು ಆಫೀಸ್ ರೋಡ್, ಎಂಟಿಆರ್ ಹೋಟೆಲ್ ಹತ್ತಿರದ ಕರ್ನಾಟಕ ಒನ್.
ಹಿರಿಯೂರು ಕರೂರು ವೈಶ್ಯ ಬ್ಯಾಂಕ್ ಹತ್ತಿರದ ಕರ್ನಾಟಕ ಒನ್.

ಸಹಾಯವಾಣಿ ಸಂಖ್ಯೆಗಳು (Helpline Numbers):

ಬಸ್ ಪಾಸ್ ಸಲ್ಲಿಕೆ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು:

  • ವಿಭಾಗೀಯ ಸಂಚಾರ ಅಧಿಕಾರಿಗಳು: 9606908962
  • ಚಿತ್ರದುರ್ಗ ಘಟಕ ವ್ಯವಸ್ಥಾಪಕರು: 7760990465
  • ಚಳ್ಳಕೆರೆ ಘಟಕ ವ್ಯವಸ್ಥಾಪಕರು: 7760999445
  • ಹೊಸದುರ್ಗ ಘಟಕ ವ್ಯವಸ್ಥಾಪಕರು: 7760998020
  • ಪಾವಗಡ ಘಟಕ ವ್ಯವಸ್ಥಾಪಕರು: 7760990918
  • ಹಿರಿಯೂರು ಘಟಕ ವ್ಯವಸ್ಥಾಪಕರು: 6364220531

ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿ, ವಿದ್ಯಾರ್ಥಿಗಳು ಸರ್ಕಾರದ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp