ದಾವಣಗೆರೆ : ಕರ್ನಾಟಕದಾದ್ಯಂತ ಬಾಕಿ ಉಳಿಸಿಕೊಂಡಿರುವ ಟ್ರಾಫಿಕ್ ಫೈನ್ (ಸಂಚಾರ ದಂಡ) ಪಾವತಿಸಲು ಕಾಯುತ್ತಿರುವ ವಾಹನ ಸವಾರರಿಗೆ ರಾಜ್ಯ ಸರ್ಕಾರವು ಮತ್ತೊಮ್ಮೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಪೊಲೀಸ್ ಇಲಾಖೆಯಲ್ಲಿ ಸಂಚಾರ ಈ-ಚಲನ್‌ಗಳ ಮೂಲಕ ದಾಖಲಾಗಿರುವ ಮತ್ತು ಇನ್ನುವರೆಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳ ಇತ್ಯರ್ಥಕ್ಕಾಗಿ ಬರೋಬ್ಬರಿ ಶೇಕಡಾ 50 ರಷ್ಟು (50% OFF) ರಿಯಾಯಿತಿಯನ್ನು ಘೋಷಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಸುವರ್ಣಾವಕಾಶದ ಅವಧಿ ಎಷ್ಟು ದಿನ?

ಈ ವಿಶೇಷ ರಿಯಾಯಿತಿ ಸೌಲಭ್ಯವು ಸೀಮಿತ ಅವಧಿಗೆ ಮಾತ್ರ ಲಭ್ಯವಿರಲಿದೆ. ದಿನಾಂಕ 21.06.2026 ರಿಂದ 10.07.2026 ರವರೆಗೆ ಮಾತ್ರ ಈ ಆಫರ್ ಜಾರಿಯಲ್ಲಿರಲಿದ್ದು, ಸವಾರರು ತಮ್ಮ ವಾಹನಗಳ ಮೇಲಿರುವ ಬಾಕಿ ದಂಡದ ಅರ್ಧದಷ್ಟು ಮೊತ್ತವನ್ನು ಪಾವತಿಸುವ ಮೂಲಕ ತಮ್ಮ ಮೇಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಬಾಕಿ ಇರುವ ದಂಡದ ವಿವರಗಳನ್ನು ವೀಕ್ಷಿಸುವುದು ಮತ್ತು ಪಾವತಿಸುವ ವಿಧಾನಗಳು:
ಸಾರ್ವಜನಿಕರ ಅನುಕೂಲಕ್ಕಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾಧ್ಯಮಗಳಲ್ಲಿ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಕೆಳಗಿನ ವಿಧಾನಗಳ ಮೂಲಕ ನೀವು ಹಣ ಪಾವತಿಸಬಹುದು:

-
ಕರ್ನಾಟಕ ಸ್ಟೇಟ್ ಪೊಲೀಸ್ (ಕೆ.ಎಸ್.ಪಿ) ಆಪ್ ಮೂಲಕ ಸುಲಭವಾಗಿ ಪಾವತಿಸಬಹುದು.
-
ಬೆಂಗಳೂರು ಸಂಚಾರ ಪೊಲೀಸರ ಅಧಿಕೃತ ಬಿಟಿಪಿ-ಅಸ್ತ್ರಂ (BTP-ASTraM) ಆಪ್ ಬಳಕೆ ಮಾಡಬಹುದು.
-
ನಿಮ್ಮ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಿಗೆ ಖುದ್ದಾಗಿ ಭೇಟಿ ನೀಡಿ ದಂಡ ಕಟ್ಟಬಹುದು.
-
ನಗರಗಳಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರಕ್ಕೆ (Traffic Management Centre) ಭೇಟಿ ನೀಡಬಹುದು.
-
ಕರ್ನಾಟಕ ಒನ್ (Karnataka One) ಅಥವಾ ಬೆಂಗಳೂರು ಒನ್ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಹಣ ಪಾವತಿಸಬಹುದು.
ಮಧ್ಯ ಕರ್ನಾಟಕ ಭಾಗದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ವಾಹನ ಮಾಲೀಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಂಡು, ತಮ್ಮ ವಾಹನಗಳ ಮೇಲಿರುವ ಹಳೇ ಕೇಸ್‌ಗಳನ್ನು ಕ್ಲಿಯರ್ ಮಾಡಿಕೊಳ್ಳಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಮನವಿ ಮಾಡಿದೆ. ಜುಲೈ 10 ರ ನಂತರ ಪೂರ್ಣ ಪ್ರಮಾಣದ ದಂಡ ತೆರಬೇಕಾಗುವುದರಿಂದ ತಡ ಮಾಡದೇ ಇಂದೇ ನಿಮ್ಮ ಚಲನ್ ಪರಿಶೀಲಿಸಿ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
