ದಾವಣಗೆರೆ: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಭಕ್ತಸಾಗರವೇ ಹರಿದು ಬರುತ್ತಿದೆ. ಇದರ ನಡುವೆ ದಾವಣಗೆರೆಯ ಭಕ್ತರೊಬ್ಬರು ಸ್ವಾಮಿಗೆ ವಿಶಿಷ್ಟ ರೀತಿಯಲ್ಲಿ ಹರಕೆ ತೀರಿಸಲು ಮುಂದಾಗಿದ್ದಾರೆ.
ದಾವಣಗೆರೆ ಮೂಲದ ಶಂಭು ಎಂಬುವವರು ಕೊಟ್ಟೂರು ಬಸವೇಶ್ವರನಿಗೆ ‘ದೀಡ್ ನಮಸ್ಕಾರ’ (ಮೈಚಾಚು ಸೇವೆ) ಹಾಕುವ ಮೂಲಕ ಯಾತ್ರೆ ಕೈಗೊಂಡಿದ್ದಾರೆ. ಸಂಕಷ್ಟಗಳು ಬಂದಾಗ ದೇವರ ಮೊರೆ ಹೋಗುವುದು ಸಹಜ. ಅಂತೆಯೇ ಶಂಭು ಅವರು ತಮ್ಮ ಕಷ್ಟ ಪರಿಹಾರಕ್ಕಾಗಿ ಕೊಟ್ಟೂರು ಸ್ವಾಮಿಗೆ ಹರಕೆ ಹೊತ್ತಿದ್ದು, ಅದನ್ನು ತೀರಿಸಲು ದಾವಣಗೆರೆಯಿಂದ ಕೊಟ್ಟೂರಿಗೆ ದೀಡ್ ನಮಸ್ಕಾರ ಹಾಕುತ್ತಲೇ ಸಾಗುತ್ತಿದ್ದಾರೆ.
ದಾವಣಗೆರೆಯಿಂದ ಕೊಟ್ಟೂರಿಗೆ ಸುಮಾರು 60ಕ್ಕೂ ಹೆಚ್ಚು ಕಿಲೋಮೀಟರ್ ಅಂತರವಿದ್ದು, ಈ ಕಠಿಣ ದೂರವನ್ನು ಅವರು ನೆಲದ ಮೇಲೆ ಸಾಷ್ಟಾಂಗ ನಮಸ್ಕಾರ ಹಾಕುತ್ತಲೇ ಕ್ರಮಿಸುತ್ತಿದ್ದಾರೆ. ಫೆಬ್ರವರಿ 15 ರಂದು ನಡೆಯಲಿರುವ ಕೊಟ್ಟೂರು ಜಾತ್ರೆ ಮತ್ತು ರಥೋತ್ಸವದ ವೇಳೆಗೆ ಅವರು ಕ್ಷೇತ್ರವನ್ನು ತಲುಪುವ ಗುರಿ ಹೊಂದಿದ್ದಾರೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಬರಿಗಾಲಿನಲ್ಲಿ, ರಸ್ತೆಯುದ್ದಕ್ಕೂ ಸಾಷ್ಟಾಂಗ ನಮಸ್ಕಾರ ಹಾಕುತ್ತಾ ಸಾಗುತ್ತಿರುವ ಶಂಭು ಅವರ ಭಕ್ತಿಗೆ ರಸ್ತೆಯಲ್ಲಿ ಹೋಗುವ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
