ಲ್ಯಾಂಡ್ ಲಾರ್ಡ್‌: ಇದು ನೈಜ ಬದುಕಿನ ಕನ್ನಡಿ – ಚಿತ್ರದುರ್ಗ ಮಠಾಧೀಶರ ಪ್ರಶಂಸೆ

Author Picture
Published On: January 30, 2026
ಲ್ಯಾಂಡ್ ಲಾರ್ಡ್‌ : ಕುಂಚಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಭಗೀರಥ ಪೀಠದ ಶ್ರೀ ಭಗೀರಥ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಸ್ವಾಮೀಜಿ.

—Advertisement—

ಚಿತ್ರದುರ್ಗ/ದಾವಣಗೆರೆ: ದುನಿಯಾ ವಿಜಯ್ ಅಭಿನಯದ, 2026ರ ಬಹುನಿರೀಕ್ಷಿತ ಲ್ಯಾಂಡ್ ಲಾರ್ಡ್ (Landlord) ಸಿನಿಮಾವನ್ನು ವೀಕ್ಷಿಸಿದ ಚಿತ್ರದುರ್ಗದ ಪ್ರಮುಖ ಮಠಾಧೀಶರು ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುಂಚಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಭಗೀರಥ ಪೀಠದ ಶ್ರೀ ಭಗೀರಥ ಸ್ವಾಮೀಜಿ ಹಾಗೂ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಸ್ವಾಮೀಜಿ ಅವರು ಚಿತ್ರತಂಡದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಲ್ಯಾಂಡ್ ಲಾರ್ಡ್‌: ಚಿತ್ರದುರ್ಗ ಮಠಾಧೀಶರ ಪ್ರಶಂಸೆ

“ನೈಜ ಇತಿಹಾಸದ ಅನಾವರಣ” – ಶ್ರೀ ಶಾಂತವೀರ ಸ್ವಾಮೀಜಿ ಸಿನಿಮಾ ವೀಕ್ಷಿಸಿದ ನಂತರ ಮಾತನಾಡಿದ ಕುಂಚಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ, “ಇದು ಸಮಾಜದಲ್ಲಿ ನಡೆದಂತಹ ವ್ಯಥೆಯ ಕಥೆ. ನಮ್ಮ ಅಜ್ಜ-ಮುತ್ತಜ್ಜನ ಕಾಲದಲ್ಲಿ ಏನೆಲ್ಲಾ ಶೋಷಣೆಗಳು ಆಗಿರಬಹುದು ಎನ್ನುವ ನೈಜ ಇತಿಹಾಸದ ಮೇಲೆ ಈ ಸಿನಿಮಾ ಬೆಳಕು ಚೆಲ್ಲಿದೆ. ಸಂವಿಧಾನ ಬರುವ ಮುನ್ನ ಸಮಾಜದ ಸ್ಥಿತಿ ಹೇಗಿತ್ತು ಮತ್ತು ಸಂವಿಧಾನ ಬಂದ ನಂತರ ಸಿಕ್ಕ ರಕ್ಷಣೆ ಎಂತಹುದು ಎಂಬುದನ್ನು ಈ ಚಿತ್ರ ಅದ್ಭುತವಾಗಿ ತೋರಿಸಿಕೊಟ್ಟಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಸಂವಿಧಾನದ ಅರಿವು ಮೂಡಿಸುವ ಚಿತ್ರ” – ಶ್ರೀ ವಾಲ್ಮೀಕಿ ಸ್ವಾಮೀಜಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಸ್ವಾಮೀಜಿ ಮಾತನಾಡಿ, “ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಪ್ರತಿಯೊಬ್ಬರಿಗೂ ಹೇಗೆ ಸಮಾನತೆ ಮತ್ತು ರಕ್ಷಣೆ ಸಿಕ್ಕಿದೆ ಎಂಬುದನ್ನು ಈ ಚಿತ್ರದ ಮೂಲಕ ನಿರ್ದೇಶಕರು ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಇಂತಹ ಸಾಮಾಜಿಕ ಕಳಕಳಿಯ ಚಿತ್ರಗಳು ಹೆಚ್ಚು ಬರಬೇಕು,” ಎಂದು ಅಭಿಪ್ರಾಯಪಟ್ಟರು.

“ರೈತರು, ಕುಟುಂಬ ಸಮೇತ ನೋಡಬೇಕಾದ ಸಿನಿಮಾ” – ಶ್ರೀ ಭಗೀರಥ ಸ್ವಾಮೀಜಿ ಭಗೀರಥ ಪೀಠದ ಶ್ರೀ ಭಗೀರಥ ಸ್ವಾಮೀಜಿ ಮಾತನಾಡಿ, “ಇದೊಂದು ಕೌಟುಂಬಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಚಿತ್ರ. ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ, ರೈತರು, ಶೋಷಿತರು ಸೇರಿದಂತೆ ಎಲ್ಲರೂ ಕುಟುಂಬ ಸಮೇತ ಬಂದು ನೋಡಲೇಬೇಕಾದ ಸಿನಿಮಾ ಇದಾಗಿದೆ. ಇಂದಿನ ಪೀಳಿಗೆಗೆ ಹಳೆಯ ಕಾಲದ ಸಂಘರ್ಷ ಮತ್ತು ಸಂವಿಧಾನದ ಮೌಲ್ಯ ತಿಳಿಸಲು ಈ ಸಿನಿಮಾ ನೋಡಬೇಕು,” ಎಂದು ಕರೆ ನೀಡಿದರು.

“ಸಮಾಜದಲ್ಲಿ ಅಡಗಿ ಕುಳಿತಿರುವ ಅಸಮಾನತೆಯನ್ನು ಹೋಗಲಾಡಿಸಲು ಮತ್ತು ಇಂದಿನ ಯುವ ಪೀಳಿಗೆಗೆ ನಮ್ಮ ನೈಜ ಇತಿಹಾಸವನ್ನು ತಿಳಿಸಲು ಇಂತಹ ಸಿನಿಮಾಗಳು ಅತ್ಯಂತ ಅವಶ್ಯಕ. ದುನಿಯಾ ವಿಜಯ್ ಮತ್ತು ಚಿತ್ರತಂಡದ ಈ ಸಾಮಾಜಿಕ ಕಳಕಳಿ ಮೆಚ್ಚುವಂತದ್ದು.”

ಶ್ರೀ ಈಶ್ವರಾನಂದ ಸ್ವಾಮೀಜಿ

ಕನಕ ಗುರುಪೀಠ

“ಇದು ಸಮಾಜದಲ್ಲಿ ನಡೆದಂತಹ ವ್ಯಥೆಯ ಕಥೆ. ಇಲ್ಲಿ ಕೊಲೆ, ಸುಲಿಗೆ ಅಥವಾ ಡ್ಯುಯೆಟ್ ಹಾಡುಗಳಿಲ್ಲ. ಕೇವಲ ಸಮಾಜದಲ್ಲಿ ನಡೆದ ನೈಜ ‘ಕಂಟೆಂಟ್’ ಮಾತ್ರ ಇದೆ. ಬಸವಣ್ಣನವರ ‘ಇವನಾರವ’ ಎಂಬ ವಚನದಂತೆ, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಈ ಸಿನಿಮಾ ಸಾರುತ್ತಿದೆ.”

ಶ್ರೀ ಶಾಂತವೀರ ಸ್ವಾಮೀಜಿ

ಕುಂಚಟಿಗ ಮಠ, ಹೊಸದುರ್ಗ

“ಸಂವಿಧಾನ ಬರುವ ಮುನ್ನ ಭೂಮಾಲೀಕರು ಜನರನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು ಮತ್ತು ಕಾನೂನಿನ ಅರಿವು ಬಂದ ಮೇಲೆ ಆದ ಬದಲಾವಣೆಗಳನ್ನು ಈ ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಮೇಲ್ವರ್ಗದವರು ಕೂಡ ಬಂದು ಈ ಸಿನಿಮಾಗೆ ಬೆಂಬಲ ಕೊಡಬೇಕು.”

ಶ್ರೀ ವಾಲ್ಮೀಕಿ ಸ್ವಾಮೀಜಿ

ವಾಲ್ಮೀಕಿ ಗುರುಪೀಠ, ರಾಜನಹಳ್ಳಿ, ಹರಿಹರ ತಾಲೂಕು

“ನಾವು ಇವತ್ತು ಇಲ್ಲಿ ನಿಂತು ಮಾತನಾಡುತ್ತಿದ್ದೇವೆ ಅಂದರೆ ಅದು ಡಾ. ಅಂಬೇಡ್ಕರ್ ಅವರು ಹಾಕಿಕೊಟ್ಟ ಸಂವಿಧಾನದ ಭಿಕ್ಷೆ. ಸಾಮಾಜಿಕ ನ್ಯಾಯ ಮತ್ತು ಶೈಕ್ಷಣಿಕ ಹಕ್ಕು ಎಲ್ಲರಿಗೂ ಸಮಾನವಾಗಿ ಸಿಗಬೇಕು. ಹಳೆಯ ಕಾಲದ ಮೌಢ್ಯಗಳು ಅಳಿದು ಹೋಗಲಿ.”

ಶ್ರೀ ಭಗೀರಥ ಸ್ವಾಮೀಜಿ

ಭಗೀರಥ ಪೀಠ, ಹೊಸದುರ್ಗ

ಈ ಸಂದರ್ಭದಲ್ಲಿ ಚಿತ್ರದ ನಾಯಕ ದುನಿಯಾ ವಿಜಯ್, ನಿರ್ಮಾಪಕರಾದ ಸತ್ಯ ಪ್ರಕಾಶ್, ನಿರ್ದೇಶಕ ಜಡೇಶ್ ಹಂಪಿ ಹಾಗೂ ಚಿತ್ರತಂಡದವರು ಉಪಸ್ಥಿತರಿದ್ದರು. ಸ್ವಾಮೀಜಿಗಳು ಚಿತ್ರತಂಡಕ್ಕೆ ಶಾಲು ಹೊದಿಸಿ ಸನ್ಮಾನಿಸಿ, ಶುಭ ಹಾರೈಸಿದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Leave a Comment

Home
Web Stories
Instagram
WhatsApp