,

ಹರಿಹರ ಪಂಚಮಸಾಲಿ ಪೀಠದಲ್ಲಿ ಸಮರ: ಕೂಡಲಸಂಗಮದ ಲೆಕ್ಕ ಕೇಳಿದ ಎಚ್.ಎಸ್. ನಾಗರಾಜ್!

H.S. Nagaraj addressing media about Panchamasali Peetha and Kudalasangama fund controversy.

—Advertisement—

ಹರಿಹರ: ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತು ಪೀಠದ ಆಂತರಿಕ ವಿಚಾರಗಳು ಈಗ ಬಹಿರಂಗ ಸಂಘರ್ಷಕ್ಕೆ ಸಾಕ್ಷಿಯಾಗುತ್ತಿವೆ. ಹರಿಹರ ಪಂಚಮಸಾಲಿ ಪೀಠದ ಪ್ರಮುಖರಾದ ಎಚ್.ಎಸ್. ನಾಗರಾಜ್ ಅವರು ಶಿವಶಂಕರ್ ಮತ್ತು ಅವರ ತಂಡದ ವಿರುದ್ಧ ಕಿಡಿಕಾರಿದ್ದು, “ಬೇರೆಯವರ ಲೆಕ್ಕ ಕೇಳುವ ಮೊದಲು, ಕೂಡಲಸಂಗಮ ಪೀಠದ ಹೆಸರಿನಲ್ಲಿ ಸಂಗ್ರಹಿಸಿದ ಕೋಟ್ಯಂತರ ರೂಪಾಯಿ ಹಣದ ಲೆಕ್ಕ ಕೊಡಿ” ಎಂದು ನೇರ ಸವಾಲು ಹಾಕಿದ್ದಾರೆ.

ಹಳ್ಳಿ ಹಳ್ಳಿಯಲ್ಲಿ ವಸೂಲಿ ಮಾಡಿದ ಹಣ ಎಲ್ಲಿ?

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಾಜ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಇವತ್ತು ಲೆಕ್ಕ ಕೊಡು ಅಂತ ಚಳುವಳಿ ಮಾಡುತ್ತಿದ್ದೀರಲ್ಲಾ, ಮೊದಲು ನೀವು ಕೂಡಲಸಂಗಮದಿಂದ ಮೀಸಲಾತಿ ಹೋರಾಟದ ಹೆಸರಿನಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ ಎತ್ತಿದ ಹಣ ಮತ್ತು ದವಸ ಧಾನ್ಯದ ಲೆಕ್ಕ ಕೊಡಿ. ಜನರ ಮುಂದೆ ನಾವು ಪಟ್ಟಿ ಬಿಡುಗಡೆ ಮಾಡುತ್ತೇವೆ. ಎಷ್ಟು ಹಣ ಸಂಗ್ರಹಿಸಿದ್ದೀರಿ? ಅದನ್ನು ಎಲ್ಲಿ ಬಳಸಿದ್ದೀರಿ? ಎಷ್ಟು ಮಾರಿಕೊಂಡಿದ್ದೀರಿ ಎಂಬುದು ನಮಗೆಲ್ಲಾ ಗೊತ್ತಿದೆ” ಎಂದು ಗಂಭೀರ ಆರೋಪ ಮಾಡಿದರು.

ಸ್ವಾಮೀಜಿಯವರನ್ನೇ ಏಕಾಂಗಿ ಮಾಡಿದ ಪಟಾಲಂ!

“ಕೂಡಲಸಂಗಮ ಪೀಠದ ಸ್ವಾಮೀಜಿಯವರನ್ನು ಇವತ್ತು ಏಕಾಂಗಿಯನ್ನಾಗಿ ಮಾಡಿದ್ದೇ ಈ ಪಟಾಲಂ. ಹಿಂದೆ ಪೀಠದ ವಿರುದ್ಧವೇ ಮಾತನಾಡಿದವರನ್ನು, ಸ್ವಾಮೀಜಿಯವರನ್ನು ಏಕವಚನದಲ್ಲಿ ನಿಂದಿಸಿದವರನ್ನು ಇವತ್ತು ವಿಜೃಂಭಣೆಯಿಂದ ಸ್ವಾಗತಿಸುತ್ತಿದ್ದೀರಿ. ಇದು ನಿಮ್ಮ ದ್ವಂದ್ವ ನೀತಿಯನ್ನು ತೋರಿಸುತ್ತದೆ. ನಿಮ್ಮ ಈ ನಾಟಕಗಳು ಹರಿಹರ ಪೀಠದಲ್ಲಿ ನಡೆಯುವುದಿಲ್ಲ” ಎಂದು ಗುಡುಗಿದ್ದಾರೆ.

ಸಮಾಜದ ಹೆಸರಿನಲ್ಲಿ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳಬೇಡಿ

ಪೀಠದಿಂದ ಈಗಾಗಲೇ ಉಚ್ಚಾಟನೆಗೊಂಡಿರುವ ವ್ಯಕ್ತಿಗಳು ಸಮಾಜದ ಹಿತಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಂಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಕೂಡಲಸಂಗಮದ ಟ್ರಸ್ಟ್‌ನಿಂದ ಹೊರಹಾಕಲ್ಪಟ್ಟ ಮೇಲೆ ಇವರು ಈಗ ಹರಿಹರ ಪೀಠದತ್ತ ಬಂದಿದ್ದಾರೆ. ಇಂತಹ ವ್ಯಕ್ತಿಗಳು ಗೌರವದಿಂದ ನಿರ್ಗಮಿಸುವುದು ಒಳಿತು ಎಂದು ಅವರು ಎಚ್ಚರಿಸಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp