ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೃದಯವಿದ್ರಾವಕ ಹಾಗೂ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಶಾಲಾ ಆವರಣದಲ್ಲಿ ಆಡುತ್ತಿದ್ದ 1ನೇ ತರಗತಿಯ ವಿದ್ಯಾರ್ಥಿನಿಗೆ ನಾಗರಹಾವು ಕಚ್ಚಿದ್ದು, ಆಕೆಯ ಪ್ರಾಣ ಉಳಿಸಲು ಹೋದ ಶಿಕ್ಷಕರು ಕೂಡ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
ನಡೆದಿದ್ದೇನು?
ಹುಣಸೇಕಟ್ಟೆ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ (6), ಶಾಲಾ ಆವರಣದಲ್ಲಿ ಆಡುತ್ತಿದ್ದಾಗ ಏಕಾಏಕಿ ವಿಷಕಾರಿ ನಾಗರಹಾವು ಆಕೆಯ ಕಾಲಿಗೆ ಕಚ್ಚಿದೆ. ಬಾಲಕಿ ನೋವಿನಿಂದ ಕಿರುಚಾಡುತ್ತಿದ್ದನ್ನು ಗಮನಿಸಿದ ಶಿಕ್ಷಕ ರವಿಶಂಕರ್ ಅವರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ವಿಷ ದೇಹಕ್ಕೆ ಹರಡಬಾರದು ಎಂಬ ಉದ್ದೇಶದಿಂದ, ಶಿಕ್ಷಕರು ಹಳೆಯ ಪದ್ಧತಿಯಂತೆ ಬಾಲಕಿಯ ಗಾಯದ ಭಾಗದಿಂದ ಬಾಯಿಯ ಮೂಲಕ ವಿಷವನ್ನು ಹೀರಲು ಪ್ರಯತ್ನಿಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಶಿಕ್ಷಕರ ದೇಹಕ್ಕೂ ವಿಷದ ಅಂಶ ಸೇರಿದ್ದರಿಂದ ಅವರು ಕೂಡ ತೀವ್ರವಾಗಿ ಅಸ್ವಸ್ಥಗೊಂಡರು. ತಕ್ಷಣವೇ ಬಾಲಕಿಯನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಹಾಗೂ ಶಿಕ್ಷಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ವೈದ್ಯರ ಕಟ್ಟುನಿಟ್ಟಿನ ಎಚ್ಚರಿಕೆ
ಶಿಕ್ಷಕರ ಸಮಯಪ್ರಜ್ಞೆ ಮತ್ತು ವಿದ್ಯಾರ್ಥಿನಿಯ ಮೇಲಿನ ಪ್ರೀತಿಯನ್ನು ಗ್ರಾಮಸ್ಥರು ಶ್ಲಾಘಿಸಿದ್ದರೂ, ವೈದ್ಯರು ಮಾತ್ರ ಈ ರೀತಿಯ ಪ್ರಥಮ ಚಿಕಿತ್ಸೆ ಅತ್ಯಂತ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ಹಾವಿನ ವಿಷವನ್ನು ಬಾಯಿಯಿಂದ ಹೀರುವುದು ವೈಜ್ಞಾನಿಕವಾಗಿ ತಪ್ಪು ಕ್ರಮವಾಗಿದೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಹಾವು ಕಚ್ಚಿದಾಗ ಈ ತಪ್ಪು ಮಾಡಬೇಡಿ:
- ಗಾಯದ ಭಾಗವನ್ನು ಬಾಯಿಯಿಂದ ಹೀರುವುದು ಅಥವಾ ಕೊಯ್ಯುವುದು ಮಾಡಬೇಡಿ.
- ರೋಗಿಯನ್ನು ಆತಂಕಕ್ಕೀಡು ಮಾಡದೆ ಶಾಂತವಾಗಿರಿಸಿ.
- ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ.
- ಮೂಢನಂಬಿಕೆ ಅಥವಾ ನಾಟಿ ಔಷಧಿಗಳ ಹಿಂದೆ ಹೋಗಿ ಅಮೂಲ್ಯ ಸಮಯ ವ್ಯರ್ಥ ಮಾಡಬೇಡಿ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
