,

🔴 ಸೂರಗೊಂಡನಕೊಪ್ಪ ಜಾತ್ರೆಗೆ ಕೌಂಟ್‌ಡೌನ್: ಒಂದೇ ವೇದಿಕೆಯಲ್ಲಿ ಸಿಎಂ, ಎಚ್‌ಡಿಕೆ, ಬಿಎಸ್‌ವೈ! ಬಂಜಾರ ಕಾಶಿಯಲ್ಲಿ ಸಂಭ್ರಮವೋ ಸಂಭ್ರಮ

Author Picture
Published On: February 12, 2026
Suragondanakoppa Sant Sevalal Jatra 2026 Live Updates - Bhayagad Kshetra Temple Entrance and Sevalal Maharaj Portrait

—Advertisement—

ಸೂರಗೊಂಡನಕೊಪ್ಪ ಜಾತ್ರೆ: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕು ಸೂರಗೊಂಡನಕೊಪ್ಪದ ಪುಣ್ಯಕ್ಷೇತ್ರ, ಬಂಜಾರ ಸಮುದಾಯದ ಪಾಲಿನ ‘ಕಾಶಿ’ ಎಂದೇ ಕರೆಯಲ್ಪಡುವ ಭಾಯಾಗಡ್ ಕ್ಷೇತ್ರ ಐತಿಹಾಸಿಕ ಜಾತ್ರೆಗೆ ಸರ್ವಸನ್ನದ್ಧವಾಗಿದೆ. ಫೆಬ್ರವರಿ 13 ರಿಂದ 15 ರವರೆಗೆ ನಡೆಯಲಿರುವ ಸಂತ ಸೇವಾಲಾಲ್ ಅವರ 287ನೇ ಜಯಂತ್ಯುತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

ಈ ಬಾರಿಯ ವಿಶೇಷವೆಂದರೆ ರಾಜ್ಯದ ಮೂರು ಪ್ರಬಲ ರಾಜಕೀಯ ಶಕ್ತಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೂರಗೊಂಡನಕೊಪ್ಪ ಜಾತ್ರೆಗೆ ಕೌಂಟ್‌ಡೌನ್: ಜಾತ್ರೆಯ ಹೈಲೈಟ್ಸ್ ಮತ್ತು ವೇಳಾಪಟ್ಟಿ ಇಲ್ಲಿದೆ

ದಿನ-1: ಫೆಬ್ರವರಿ 13 (ಶುಕ್ರವಾರ) – ಭಕ್ತಿ ಸಮರ್ಪಣೆ ಜಾತ್ರೆಯ ಮೊದಲ ದಿನ ಧಾರ್ಮಿಕ ವಿಧಿವಿಧಾನಗಳಿಗೆ ಮೀಸಲು.

  • ಬೆಳಗ್ಗೆ ದೂದ್ಯಾ ತಳಾವ್‌ನಿಂದ 101 ಪೂರ್ಣ ಕುಂಭಮೇಳದೊಂದಿಗೆ ಮಹಿಳೆಯರಿಂದ ಅದ್ಧೂರಿ ಗಂಗಾಪೂಜೆ ನೆರವೇರಲಿದೆ.

  • ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ಶಿಲಾಮೂರ್ತಿಗೆ ವಿಶೇಷ ಪೂಜೆ.

  • ವಾಝಾ-ಭಜನೆಯೊಂದಿಗೆ ಸಾಧು ಸಂತರ ಭವ್ಯ ಮೆರವಣಿಗೆ, ಕಾಟಿ ಆರೋಹಣ, ಮಾಲಾ ವಿಸರ್ಜನೆ ಮತ್ತು ಪಲ್ಲಕ್ಕಿ ಉತ್ಸವ ಜರುಗಲಿದೆ.

ದಿನ-2: ಫೆಬ್ರವರಿ 14 (ಶನಿವಾರ) – ರಾಜಕೀಯ ಶಕ್ತಿಪ್ರದರ್ಶನ ಶನಿವಾರ ಮಧ್ಯಾಹ್ನ 2 ಗಂಟೆಗೆ ನಡೆಯುವ ಬೃಹತ್ ಸಮಾರಂಭದಲ್ಲಿ ರಾಜ್ಯದ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ.

  • ಉದ್ಘಾಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ.

  • ಅಧ್ಯಕ್ಷತೆ: ಶಾಸಕ ಡಿ.ಜಿ. ಶಾಂತನಗೌಡ.

  • ವಿಶೇಷ ಆಹ್ವಾನಿತರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಕಾನೂನು ಸಚಿವ ಎಚ್.ಕೆ. ಪಾಟೀಲ್.

  • ಪುಷ್ಪಾರ್ಚನೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ.

  • ಗಣ್ಯರು: ಸಚಿವರಾದ ಡಾ.ಎಚ್.ಸಿ. ಮಹಾದೇವಪ್ಪ, ಡಾ.ಜಿ. ಪರಮೇಶ್ವರ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಸಚಿವರು ಮತ್ತು ಶಾಸಕರು ಸಾಕ್ಷಿಯಾಗಲಿದ್ದಾರೆ.

ದಿನ-3: ಫೆಬ್ರವರಿ 15 (ಭಾನುವಾರ) – ಮಹಾಭೋಗ್ ಮತ್ತು ವಿಸರ್ಜನೆ

  • ಮುಂಜಾನೆ 6:30ಕ್ಕೆ ಮಹಾಭೋಗ್ ಕಾರ್ಯಕ್ರಮ.

  • ಮಧ್ಯಾಹ್ನ ದೂದಿಯ ತಳಾವ್‌ನಲ್ಲಿ ಸಂಪ್ರದಾಯದಂತೆ ತೀಜ್ ವಿಸರ್ಜನೆ ನಡೆಯಲಿದ್ದು, ಇದರೊಂದಿಗೆ ಮೂರು ದಿನಗಳ ಅದ್ಧೂರಿ ಜಾತ್ರೆಗೆ ತೆರೆ ಬೀಳಲಿದೆ.

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಮತ್ತು ಹೊರರಾಜ್ಯಗಳಿಂದಲೂ ಲಕ್ಷಾಂತರ ಬಂಜಾರ ಭಕ್ತರು ಸೂರಗೊಂಡನಕೊಪ್ಪಕ್ಕೆ ಹರಿದು ಬರುತ್ತಿದ್ದಾರೆ. ಮದ್ಯಕರ್ನಾಟಕ ಲೈವ್ ಕ್ಷಣಕ್ಷಣದ ಮಾಹಿತಿಯನ್ನು ನಿಮಗೆ ನೀಡಲಿದೆ.

LIVE UPDATES

Loading...

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp