ಇತ್ತೀಚಿನ ಆಧುನಿಕ ಜೀವನಶೈಲಿಯಲ್ಲಿ ರಾತ್ರಿ ತಡವಾಗಿ ಮಲಗುವುದು ಬಹುತೇಕರ ಹವ್ಯಾಸವಾಗಿಬಿಟ್ಟಿದೆ. ಆದರೆ, ಇತ್ತೀಚಿನ ಸಂಶೋಧನೆಯೊಂದು ಈ ಬಗ್ಗೆ ಅತ್ಯಂತ ಆಘಾತಕಾರಿ ನಿಜಾಂಶವನ್ನು ಹೊರಹಾಕಿದೆ. ಯಾರು ಪ್ರತಿದಿನ ರಾತ್ರಿ ತಡವಾಗಿ ಮಲಗುತ್ತಾರೋ, ಅವರು ದೀರ್ಘಕಾಲದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಅವರ ಆಯಸ್ಸು ಕೂಡ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಎಚ್ಚರಿಸಿವೆ.
ಕಡಿಮೆ ನಿದ್ದೆಯಿಂದಾಗುವ ಪ್ರಮುಖ ಆರೋಗ್ಯ ಸಮಸ್ಯೆಗಳು:
ಮಾನಸಿಕ ಆರೋಗ್ಯದ ಏರುಪೇರು: ಪ್ರತಿದಿನ ಕನಿಷ್ಠ 8 ಗಂಟೆಗಳ ಕಾಲ ನೆಮ್ಮದಿಯ ನಿದ್ದೆ ಮಾಡದಿದ್ದರೆ ಅದು ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಾನಸಿಕ ಒತ್ತಡ (Stress), ಖಿನ್ನತೆ ಮತ್ತು ಚಿಂತೆ ಹೆಚ್ಚಾಗುತ್ತದೆ.
ದೈಹಿಕ ಬದಲಾವಣೆಗಳು: ನಿದ್ದೆಯ ಕೊರತೆಯಿಂದಾಗಿ ದೇಹದ ತೂಕ ಅತಿಯಾಗಿ ಹೆಚ್ಚಾಗಲು (Weight Gain) ಮತ್ತು ಬೊಜ್ಜು ಬೆಳೆಯಲು ಕಾರಣವಾಗುತ್ತದೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ರೋಗನಿರೋಧಕ ಶಕ್ತಿ ಕುಂಠಿತ: ದೇಹಕ್ಕೆ ವಿಶ್ರಾಂತಿ ಸಿಗದಿದ್ದಾಗ ರೋಗಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ತಾನಾಗಿಯೇ ಕ್ಷೀಣಿಸುತ್ತದೆ.
ಮಾರಕ ಕಾಯಿಲೆಗಳ ಅಪಾಯ: ದೀರ್ಘಕಾಲದ ನಿದ್ದೆಯಿಲ್ಲದ ಜರ್ನಿ ನಿಮ್ಮನ್ನು ಮಧುಮೇಹ (Sugar) ಮತ್ತು ಹೃದಯ ರೋಗಗಳಂತಹ (Heart Diseases) ಅಪಾಯಕ್ಕೆ ದೂಡುತ್ತದೆ.
ಮೆಮೊರಿ ಮತ್ತು ದೃಷ್ಟಿ ದೋಷ: ಸೂಕ್ತ ನಿದ್ದೆಯಿಲ್ಲದಿದ್ದರೆ ಕಣ್ಣಿನ ದೃಷ್ಟಿ ಮಂಜಾಗುವುದು ಮತ್ತು ಮರೆವಿನ ಕಾಯಿಲೆ (Memory Loss) ಕಾಣಿಸಿಕೊಳ್ಳುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
