ಯಶಸ್ವಿನಿ ಯೋಜನೆಯಲ್ಲಿ ಬಿಗ್ ಅಪ್‌ಡೇಟ್: ಇನ್ಮುಂದೆ ಹುಟ್ಟಿದ ಮಗುವಿಗೂ ಸಿಗಲಿದೆ 5 ಲಕ್ಷದವರೆಗೆ ಫ್ರೀ ಚಿಕಿತ್ಸೆ! ಇಲ್ಲಿದೆ ನೋಂದಣಿ ವಿವರ

Author Picture
Published On: January 20, 2026
Yashaswini health scheme registration and benefits chart for 2026.

—Advertisement—

ಯಶಸ್ವಿನಿ ಯೋಜನೆ: ರಾಜ್ಯದ ಸಹಕಾರ ಸಂಘಗಳ ಸದಸ್ಯರ ಪಾಲಿಗೆ ವರದಾನವಾಗಿರುವ ‘ಯಶಸ್ವಿನಿ‘ ಆರೋಗ್ಯ ರಕ್ಷಣಾ ಯೋಜನೆಯನ್ನು 2025-26ನೇ ಸಾಲಿಗೆ ಮುಂದುವರಿಸಲು ಸರ್ಕಾರ ಅಧಿಕೃತ ಮಾರ್ಗಸೂಚಿ ಪ್ರಕಟಿಸಿದೆ. ಈ ಬಾರಿ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಹಲವು ಹೊಸ ಬದಲಾವಣೆಗಳನ್ನು ತರಲಾಗಿದೆ ಎಂದು ದಾವಣಗೆರೆ ಜಿಲ್ಲೆ ಸಹಕಾರ ಸಂಘಗಳ ಉಪ ನಿಬಂಧಕರಾದ ಮಧುಶ್ರೀನಿವಾಸ.ಟಿ ಮಾಹಿತಿ ನೀಡಿದ್ದಾರೆ. 

ನವಜಾತ ಶಿಶುಗಳಿಗೂ ಉಚಿತ ಚಿಕಿತ್ಸೆ

ಯೋಜನೆಯ ಇತಿಹಾಸದಲ್ಲೇ ಮೊದಲ ಬಾರಿಗೆ, ಸದಸ್ಯತ್ವ ಹೊಂದಿರುವ ಕುಟುಂಬದಲ್ಲಿ ಜನಿಸುವ ನವಜಾತ ಶಿಶುವಿಗೂ ತಾಯಿಯ ಆಧಾರ್ ಕಾರ್ಡ್ ಆಧಾರದ ಮೇಲೆ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನಂತರದ ದಿನಗಳಲ್ಲಿ ಮಗುವಿನ ಹೆಸರನ್ನು ಅಧಿಕೃತವಾಗಿ ಕಾರ್ಡ್‌ಗೆ ಸೇರ್ಪಡೆ ಮಾಡಬಹುದಾಗಿದೆ.

ನೋಂದಣಿ ಮತ್ತು ಕಾಲಮಿತಿ

ವಂತಿಗೆ ಮತ್ತು ಚಿಕಿತ್ಸಾ ಮಿತಿ

  • ಗ್ರಾಮೀಣ ಭಾಗ: 4 ಸದಸ್ಯರ ಕುಟುಂಬಕ್ಕೆ ವಾರ್ಷಿಕ 500 ರೂ. ವಂತಿಗೆ, ಹೆಚ್ಚುವರಿ ಸದಸ್ಯರಿದ್ದಲ್ಲಿ ತಲಾ 100 ರೂ. ಪಾವತಿಸಬೇಕು.

  • ನಗರ ಭಾಗ: 4 ಸದಸ್ಯರ ಕುಟುಂಬಕ್ಕೆ ವಾರ್ಷಿಕ 1000 ರೂ. ವಂತಿಗೆ, ಹೆಚ್ಚುವರಿ ಸದಸ್ಯರಿಗೆ ತಲಾ 200 ರೂ. ನಿಗದಿಪಡಿಸಲಾಗಿದೆ.

  • ಚಿಕಿತ್ಸಾ ಮಿತಿ: ಪ್ರತಿ ಕುಟುಂಬಕ್ಕೆ ವಾರ್ಷಿಕ ಗರಿಷ್ಠ 5 ಲಕ್ಷ ರೂ.ವರೆಗೆ ನಗದು ರಹಿತ ವೈದ್ಯಕೀಯ ಸೇವೆ ಲಭ್ಯವಿದೆ.

  • SC/ST ವರ್ಗ: ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರ ವಂತಿಗೆಯನ್ನು ಸರ್ಕಾರವೇ ಭರಿಸಲಿದೆ.

ಯಾರು ಅರ್ಹರು?

  1. ಫಲಾನುಭವಿಗಳು ಸಹಕಾರ ಸಂಘಗಳಲ್ಲಿ ಕಡ್ಡಾಯವಾಗಿ ಸದಸ್ಯರಾಗಿರಬೇಕು.
  2. ಸಹಕಾರ ಸಂಘಗಳ ನೌಕರರಾಗಿದ್ದಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರಬೇಕು.
  3. ಮಾಸಿಕ ವೇತನ 30,000 ರೂ. ಗಳಿಗಿಂತ ಹೆಚ್ಚಿರುವವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
  4. ಯಾವುದೇ ಕಾರಣಕ್ಕೂ ಸುಳ್ಳು ಮಾಹಿತಿ ನೀಡಿ ನೋಂದಾಯಿಸಿಕೊಂಡರೆ ಸದಸ್ಯತ್ವ ರದ್ದಾಗುವುದಲ್ಲದೆ, ಕಟ್ಟಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಯಾವೆಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ?

ಒಟ್ಟು 2,128 ಚಿಕಿತ್ಸೆಗಳು ಈ ಯೋಜನೆಯಡಿ ಲಭ್ಯವಿದ್ದು, ಇದರಲ್ಲಿ ಕಿಡ್ನಿ ವೈಫಲ್ಯ, ಕ್ಯಾನ್ಸರ್, ಹೃದಯರೋಗ, ಹರಿಗೆ ಸೇರಿದಂತೆ ಪ್ರಮುಖ ಶಸ್ತ್ರಚಿಕಿತ್ಸೆಗಳು ಸೇರಿವೆ. ಫಲಾನುಭವಿಗಳು ನೆಟ್‌ವರ್ಕ್ ಆಸ್ಪತ್ರೆಗಳ ಜನರಲ್ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯಲು ಅರ್ಹರಿರುತ್ತಾರೆ; ಸ್ಪೆಷಲ್ ವಾರ್ಡ್ ಬಯಸಿದಲ್ಲಿ ಹೆಚ್ಚುವರಿ ವೆಚ್ಚವನ್ನು ಅವರೇ ಭರಿಸಬೇಕು ಎಂದು ದಾವಣಗೆರೆ ಜಿಲ್ಲೆ ಸಹಕಾರ ಸಂಘಗಳ ಉಪ ನಿಬಂಧಕರಾದ ಮಧುಶ್ರೀನಿವಾಸ.ಟಿ ಮಾಹಿತಿ ನೀಡಿದ್ದಾರೆ. 

ದಾಖಲೆಗಳು ಅಗತ್ಯ:

ಯಶಸ್ವಿನಿ ಯೋಜನೆ ನೋಂದಣಿ ಸಮಯದಲ್ಲಿ ಆಧಾರ್ ಕಾರ್ಡ್ ಮತ್ತು ಸಕ್ರಿಯ ಮೊಬೈಲ್ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Leave a Comment

Home
Web Stories
Instagram
WhatsApp