ದೇಶದ ಪಡಿತರ ವ್ಯವಸ್ಥೆಗೆ ಡಿಜಿಟಲ್ ಕರೆನ್ಸಿಯ ಸ್ಪರ್ಶ

Author Picture
Published On: February 15, 2026

—Advertisement—

ಮುಖ್ಯಾಂಶಗಳು

  • ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಪಾರದರ್ಶಕತೆಯತ್ತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟ ಕೇಂದ್ರ ಸರ್ಕಾರ
  • ಸಾಮಾಜಿಕ ವಲಯದಲ್ಲಿ ಡಿಜಿಟಲ್ ಕರೆನ್ಸಿ ಬಳಕೆ ಇದೇ ಮೊದಲು; RBI ಸಹಭಾಗಿತ್ವದಲ್ಲಿ ಪ್ರಥಮವಾಗಿ ಗುಜರಾತ್ ಅಲ್ಲಿ ಜಾರಿ
  • ಜೋಶಿ ಕಾರ್ಯ ವೈಖರಿ ಹಾಡಿ ಹೊಗಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ನವದೆಹಲಿ
ಪಾರದರ್ಶಕತೆ ಮತ್ತು ತ್ವರಿತ ಸೇವೆಗಾಗಿ ಡಿಜಿಟಲೀಕರಣಕ್ಕೆ ಒತ್ತು ನೀಡಿರುವ ಕೇಂದ್ರ ಸರ್ಕಾರ, ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಡಿಜಿಟಲೀಕರಣದ ಮಹತ್ಸಾಧನೆಗೆ ಹೊಸದೊಂದು ಮುನ್ನುಡಿ ಬರೆದಿದೆ.

ಡಿಜಿಟಲ್ ಕ್ರಾಂತಿಯತ್ತ ಮತ್ತೊಂದು ಮೈಲಿಗಲ್ಲು

ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ದೂರದೃಷ್ಠಿಯಂತೆ ಈಗಾಗಲೇ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’, ಅನ್ನ ಚಕ್ರ ಹೀಗೆ ವಿವಿಧ ಮಹತ್ವದ ಕಾರ್ಯಕ್ರಮ ಅನುಷ್ಠಾನಕ್ಕಿಳಿದ ಕೇಂದ್ರ ಸರ್ಕಾರ, ಇದೀಗ ಇದೇ ಮೊದಲ ಬಾರಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತವಾಗಿ ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆ ರೂಪದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.

ಕಳೆದ ಕೆಲ ವರ್ಷಗಳಲ್ಲಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ದೇಶದಲ್ಲಿ ಪಡಿತರ ವ್ಯವಸ್ಥೆಯ ಸಮಗ್ರ ಡಿಜಿಟಲ್ ರೂಪಾಂತರ ಕೈಗೊಂಡಿದ್ದು, ಪಾರದರ್ಶಕತೆ, ಪೋರ್ಟಬಿಲಿಟಿ ವ್ಯವಸ್ಥೆ ಪಡಿತರ ವಿತರಣೆಯನ್ನು ಅತ್ಯಂತ ಪಾರದರ್ಶಕ ಮತ್ತು ತ್ವರಿತಗೊಳಿಸಿದೆ.

ಏನಿದು ‘ಡಿಜಿಟಲ್ ಆಹಾರ ಕರೆನ್ಸಿ’?

ಇದೀಗ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಸಾಮಾಜಿಕ-ಸಾರ್ವತ್ರಿಕ ವಲಯದ ಯೋಜನೆಯಲ್ಲಿ ಇದೇ ಮೊದಲ ಬಾರಿ ಡಿಜಿಟಲ್ ಕರೆನ್ಸಿ ಬಳಸುವ ಮತ್ತೊಂದು ಹೊಸ ಪರಿವರ್ತನಾ ಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತವಾಗಿ ‘ಡಿಜಿಟಲ್ ಆಹಾರ ಕರೆನ್ಸಿ’ ವಿನೂತನ ವ್ಯವಸ್ಥೆ ಜಾರಿಗೊಳಿಸಿದೆ.

ಪ್ರಮುಖ ಲಾಭಗಳು:

ನ್ಯಾಯ ಬೆಲೆ ಅಂಗಡಿಯವರಿಗೆ ತತ್ ಕ್ಷಣವೇ ಕಮಿಷನ್ ಹಂಚಿಕೆ, ಫಲಾನುಭವಿಗಳಿಗೆ ಕ್ಷಣಾರ್ಧದಲ್ಲೇ ರೇಷನ್ ವಿತರಣೆ…ಹೀಗೆ ಪಡಿತರದ ಸಂಪೂರ್ಣ ವ್ಯವಸ್ಥೆ ಡಿಜಿಟಲ್ ಕರೆನ್ಸಿಗೆ ರೂಪಾಂತರವಾಗಿ ಪಾರದರ್ಶಕತೆಯತ್ತ ಇಟ್ಟ ದಿಟ್ಟ ಹೆಜ್ಜೆಯಾಗಿ ಗುರುತಿಸಿಕೊಳ್ಳುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪಾತ್ರವೂ ಇದರಲ್ಲಿ ಅಡಕವಾಗಿದೆ ಎಂಬುದು ಮತ್ತೊಂದು ವಿಶೇಷ.

ಗುಜರಾತ್‌ನಲ್ಲಿ ಯೋಜನೆಗೆ ಚಾಲನೆ

ಕೇಂದ್ರ ಸರ್ಕಾರ, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತ ‘ಡಿಜಿಟಲ್ ಆಹಾರ ಕರೆನ್ಸಿ’ ವಿನೂತನ ವ್ಯವಸ್ಥೆಯನ್ನು ಇಂದಿನಿಂದ ಪ್ರಥಮವಾಗಿ ಗುಜರಾತ್ ಅಲ್ಲಿ ಆರಂಭಿಸಿದೆ. ಅಹಮದಾಬಾದ್ ಅಲ್ಲಿ ಭಾನುವಾರ ಗೋಲ್ CBDC-ಆಧಾರಿತ ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಸಮ್ಮುಖದಲ್ಲಿ ಚಾಲನೆ ನೀಡಿದೆ.

📍 ಸದ್ಯಕ್ಕೆ ಎಲ್ಲೆಲ್ಲಿ ಯೋಜನೆ ಜಾರಿ?

ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಗುಜರಾತ್ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಸದ್ಯಕ್ಕೆ ಮೊದಲನೇ ಹಂತದಲ್ಲಿ ಈ ಕೆಳಗಿನ ಜಿಲ್ಲೆಗಳಲ್ಲಿ ಪ್ರಾರಂಭವಾಗಿದೆ:

  • ಅಹಮದಾಬಾದ್
  • ಆನಂದ್
  • ದಾಹೋದ್
  • ಸಬರಮತಿ

ಮುಂದಿನ ಹಂತದಲ್ಲಿ: ಪುದುಚೇರಿ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವ ಪ್ರಲ್ಹಾದ ಜೋಶಿ ಇದೇ ವೇಳೆ ಘೋಷಿಸಿದರು.

ದೇಶದ ಇತಿಹಾಸದಲ್ಲೇ ಮೊದಲು

ಸಿಬಿಡಿಸಿ ಆಧಾರಿತ ವ್ಯವಸ್ಥೆಯಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಬಳಸಿ ಪಡಿತರ ವಿತರಣೆ ದೇಶದ ಇತಿಹಾಸದಲ್ಲಿ ಇದೇ ಮೊದಲು. ಫಲಾನುಭವಿಗಳ ಡಿಜಿಟಲ್ ವ್ಯಾಲೆಟ್‌ಗಳಿಗೆ ಪ್ರೋಗ್ರಾಮೆಬಲ್ ಡಿಜಿಟಲ್ ಕರೆನ್ಸಿಯಾಗಿ ನೇರವಾಗಿ ಜಮಾ ಮಾಡಲಾಗುತ್ತದೆ. ಇದನ್ನು ಪಿಡಿಎಸ್ ಅಡಿಯಲ್ಲಿ ಆಹಾರ ಧಾನ್ಯ ಖರೀದಿಸಲು ಸಹ ಬಳಸಬಹುದು. ಇದು ನೈಜ-ಸಮಯದ ಮೇಲ್ವಿಚಾರಣೆ ಮತ್ತು ಸುರಕ್ಷಿತ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ. ಅಲ್ಲದೆ, ಯಾವುದೇ ಅವ್ಯವಹಾರಕ್ಕೂ ಅಸ್ಪದವಾಗುವುದಿಲ್ಲ ಎಂದು ಜೋಶಿ ವಿವರಿಸಿದರು.

QR-ಕೂಪನ್ ಕೋಡ್ ಬಳಕೆ

ಪಡಿತರ ಫಲಾನುಭವಿಗಳ ಡಿಜಿಟಲ್ ವ್ಯಾಲೆಟ್‌ಗಳು ಪ್ರೋಗ್ರಾಮೆಬಲ್ ಡಿಜಿಟಲ್ ರೂಪಾಯಿ ಹೊಂದಿರುತ್ತವೆ. ಫಲಾನುಭವಿಗಳ ಅನುಕೂಲಕ್ಕಾಗಿ ಪಿಡಿಎಸ್ ಅಡಿ ಆಹಾರ ಧಾನ್ಯ ಖರೀದಿಸಲು ನ್ಯಾಯಬೆಲೆ ಅಂಗಡಿಗಳಲ್ಲಿ ತಡೆರಹಿತ QR ಕೋಡ್, ಕೂಪನ್ ಕೋಡ್ ಆಧಾರಿತ ವಹಿವಾಟನ್ನು ಸಕ್ರಿಯಗೊಳಿಸುತ್ತದೆ ಎಂದರು.

ಡಿಜಿಟಲ್ ಆಹಾರ ಕರೆನ್ಸಿ ಪ್ರಯೋಜನಗಳು

  • ✅ ವಲಸೆ ಬಂದ ಜನಸಂಖ್ಯೆಯುಳ್ಳ ರಾಜ್ಯಗಳಲ್ಲಿ ಸರಾಗವಾಗಿ ಹಕ್ಕು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
  • ✅ ಸ್ಮಾರ್ಟ್ ಫೋನ್ ಮೂಲಕ QR CODE ಬಳಸಿ ಹಾಗೂ ನಾರ್ಮಲ್ ಫೋನ್ ಗಳಲ್ಲಿ 10 digit code ಬಳಸಿ ಸಹ ಪಡಿತರ ವಿತರಣೆ ಸಾಧ್ಯವಾಗುತ್ತದೆ.
  • ✅ ಆಧಾರ್-ಸಕ್ರಿಯಗೊಳಿಸಿದ ದೃಢೀಕರಣ ಮತ್ತು ನೈಜ-ಸಮಯದ ವಹಿವಾಟು, ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಪಿಒಎಸ್ ಸಾಧನಗಳ ನಿಯೋಜನೆ, ಪಡಿತರ ವಿತರಣೆಯಲ್ಲಿ ಪಾರದರ್ಶಕತೆ.
  • ✅ ಸಾರಿಗೆ ವೆಚ್ಚ ಕಡಿಮೆತಾಗುತ್ತದೆ ಮತ್ತು ಕುಂದುಕೊರತೆ ಪರಿಹಾರ, ತ್ವರಿತ ಸ್ಪಂದನೆ, ಹೊಣೆಗಾರಿಕೆ ಮತ್ತು ನಾಗರಿಕ-ಕೇಂದ್ರಿತ ಸೇವಾ ವಿತರಣೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ಪ್ರಲ್ಹಾದ ಜೋಶಿ ಕಾರ್ಯಕ್ಕೆ ಅಮಿತ್ ಶಾ ಶ್ಲಾಘನೆ

ಈ ನೂತನ CBDC ಆಧಾರಿತ “ಡಿಜಿಟಲ್ ಆಹಾರ ಕೂಪನ್” ವ್ಯವಸ್ಥೆಗೆ ಚಾಲನೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ದೇಶದ ಕೋಟ್ಯಂತರ ಕಡುಬಡವರಿಗೆ ತ್ವರಿತವಾಗಿ ಪಡಿತರ ತಲುಪಿಸುವ ಜತೆಗೆ ದೇಶಾದ್ಯಂತ ಪಡಿತರ ವ್ಯವಸ್ಥೆಯನ್ನು ಅತ್ಯಂತ ಪರಾದರ್ಶಕೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿರಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು:
ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ನಿಮುಬೆನ್ ಜಯಂತಿಭಾಯಿ, ಗುಜರಾತ್‌ ಡಿಸಿಎಂ ಹರ್ಷ ಸಂಘವಿ; ಗುಜರಾತ್‌ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಮಣಭಾಯಿ ಭಿಕಾಬಾಯಿ ಸೋಲಂಕಿ, ರಾಜ್ಯ ಸಚಿವ ಪೂನಮಚಂದ್ ಛಾನಾಭಾಯಿ, ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೋನಾ ಖಂಡರ್; ಆರ್‌ಬಿಐ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ವಾಸುದೇವನ್, ಗಾಂಧಿನಗರದ ಮೇಯರ್ ಮೀರಬೆನ್ ಪಟೇಲ್ ಇತರ ಗಣ್ಯರಿದ್ದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Leave a Comment

Home
Web Stories
Instagram
WhatsApp