,

ಬಂಗಾರದ ಬೆಲೆ ಕಂಡಿದ್ದ ಕಡಲೆ ಈಗ ಪಾತಾಳಕ್ಕೆ! ಬೆಂಬಲ ಬೆಲೆಗೆ ನೋಂದಣಿ ಆರಂಭ: ಇಲ್ಲಿದೆ ಪೂರ್ತಿ ಡೀಟೈಲ್ಸ್

Author Picture
Published On: February 17, 2026

—Advertisement—

ಚಿತ್ರದುರ್ಗ: “ರೈತನೆಂದರೆ ಸಾಲದಲ್ಲಿ ಹುಟ್ಟಿ, ಸಾಲದಲ್ಲೇ ಬೆಳೆದು, ಸಾಲದಲ್ಲೇ ಸಾಯುವವನು” ಎಂಬ ಮಾತು ಮತ್ತೊಮ್ಮೆ ಸಾಬೀತಾಗುವಂತಿದೆ ಕೋಟೆನಾಡು ಚಿತ್ರದುರ್ಗದ ಕಡಲೆ ಬೆಳೆಗಾರರ ಪರಿಸ್ಥಿತಿ. ಕಳೆದ ವರ್ಷ ಬಂಗಾರದ ಬೆಲೆ ಕಂಡಿದ್ದ ಕಡಲೆ (Bengal Gram), ಈ ಬಾರಿ ಪಾತಾಳಕ್ಕೆ ಕುಸಿದಿದ್ದು ಅನ್ನದಾತನನ್ನು ಸಂಕಷ್ಟದ ಸುಳಿಗೆ ದೂಡಿದೆ.

ಕಳೆದ ವರ್ಷದ ಬೆಲೆ
₹7,556 /ಕ್ವಿಂಟಾಲ್
ಈಗಿನ ಕುಸಿದ ಬೆಲೆ
₹3,847 /ಕ್ವಿಂಟಾಲ್

ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳೇನು?

ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆ ಬೆಳೆ ಕಟಾವಾಗಿ ಎಪಿಎಂಸಿಗೆ ಬರುತ್ತಿದೆ. ಆದರೆ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಇಳುವರಿ ಕುಂಠಿತವಾಗಿದೆ. ಸಾಮಾನ್ಯವಾಗಿ ಇಳುವರಿ ಕಡಿಮೆ ಇದ್ದಾಗ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಬೇಕಿತ್ತು. ಆದರೆ ಈ ಬಾರಿ ಪರಿಸ್ಥಿತಿ ಉಲ್ಟಾ ಆಗಿದೆ.

ಹೊರಗಿನ ಆವಕ ಹೆಚ್ಚಳ: ಸ್ಥಳೀಯ ಎಪಿಎಂಸಿಗೆ ಕೇವಲ ಚಿತ್ರದುರ್ಗದ ರೈತರಲ್ಲದೆ, ಆಂಧ್ರಪ್ರದೇಶದ ರಾಯದುರ್ಗ, ತುಮಕೂರು ಜಿಲ್ಲೆಯ ಪಾವಗಡ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು ಕಡೆಯಿಂದಲೂ ರೈತರು ಇದೇ ಮಾರುಕಟ್ಟೆಗೆ ಕಡಲೆ ತರುತ್ತಿದ್ದಾರೆ. ಈ ಭಾಗಗಳಲ್ಲಿ ಉತ್ತಮ ಗುಣಮಟ್ಟದ ಕಡಲೆ ಬಂದಿದ್ದು, ಆವಕ ಹೆಚ್ಚಾದ ಕಾರಣ ಸ್ಥಳೀಯ ಮಾರುಕಟ್ಟೆಯಲ್ಲಿ ದರ ಕುಸಿತ ಕಂಡಿದೆ ಎಂದು ವಿಶ್ಲೇಷಿಸಲಾಗಿದೆ.

ರೈತ ಕಲ್ಲೇಶ್


ಮುಂಗಾರು ಕೈಕೊಟ್ಟರೂ ಹಿಂಗಾರಿನಲ್ಲಿ ಕಡಲೆ ಕೈಹಿಡಿಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಎಕರೆಗೆ ಸಾವಿರಾರು ಖರ್ಚು ಮಾಡಿದ್ದೇವೆ. ಈಗ ಮಾರುಕಟ್ಟೆಗೆ ಬಂದರೆ ಕಡಲೆಗೆ ಬೆಲೆಯೇ ಇಲ್ಲ. ಕ್ವಿಂಟಾಲ್‌ಗೆ ಕನಿಷ್ಠ 7,000 ರೂಪಾಯಿ ಸಿಗದಿದ್ದರೆ ನಾವು ಮಾಡಿರೋ ಸಾಲ ತೀರಿಸೋದಾದ್ರೂ ಹೇಗೆ? ಸರ್ಕಾರ ನಮ್ಮ ನೆರವಿಗೆ ಬರಬೇಕು.

– ಕಲ್ಲೇಶ್, ರೈತರು, ಪಾಳೇದಹಳ್ಳಿ (ಹೊಸದುರ್ಗ ತಾ.)

ಬೆಂಬಲ ಬೆಲೆಗೆ ನೋಂದಣಿ: ನಿಯಮಗಳೇನು?

ದರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯ ಸಹಕಾರ ಮಾರಾಟ ಮಂಡಳದಿಂದ ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಯಿ ಖರೀದಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಕೆಎಸ್‌ಸಿಎಂಎಫ್ ಶಾಖಾ ವ್ಯವಸ್ಥಾಪಕ ಬಸವೇಶ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ರೈತರು ಆಧಾರ್ ಕಾರ್ಡ್ ಬಳಸಿ ಬಯೋಮೆಟ್ರಿಕ್ ಮೂಲಕ ಹೆಸರು ನೋಂದಣಿ ಮಾಡಿಸಬೇಕು ಎಂದಿದ್ದಾರೆ.

  • ಸರ್ಕಾರದ ಬೆಂಬಲ ಬೆಲೆ: ಪ್ರತಿ ಕ್ವಿಂಟಾಲ್‌ಗೆ ₹5,845
  • ಖರೀದಿ ಮಿತಿ: ಪ್ರತಿ ಎಕರೆಗೆ 4 ಕ್ವಿಂಟಾಲ್
  • ಗರಿಷ್ಠ ಪ್ರಮಾಣ: ಒಬ್ಬ ರೈತರಿಂದ ಗರಿಷ್ಠ 40 ಕ್ವಿಂಟಾಲ್

ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಆಕ್ರೋಶ:

“ಈ ವರ್ಷ ಶೇ. 50 ರಷ್ಟು ಇಳುವರಿ ತಗ್ಗಿದೆ. ಇಳುವರಿ ಕಡಿಮೆಯಾದಾಗ ಬೆಲೆ ಹೆಚ್ಚಾಗುತ್ತದೆ. ಆದರೆ ಈ ಬಾರಿ ಬೆಲೆಯೂ ಕುಸಿದಿದೆ. ಸರ್ಕಾರ ಸಕಾಲಕ್ಕೆ ಖರೀದಿ ಕೇಂದ್ರ ತೆರೆಯದ ಕಾರಣ ರೈತರು ನಷ್ಟ ಅನುಭವಿಸುವಂತಾಗಿದೆ.”

55,000 ಹೆಕ್ಟೇರ್ ಗುರಿ, ಬಿತ್ತನೆಯಾಗಿದ್ದು ಎಷ್ಟು?

ಜಿಲ್ಲೆಯಲ್ಲಿ ಅಂದಾಜು 55,000 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗುತ್ತಿತ್ತು. ಆದರೆ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಕಡಲೆ ಬೆಳೆ ತೀವ್ರ ಹಾನಿಗೊಳಗಾಗಿದ್ದು, ಕೇವಲ 39,500 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ರೈತರು ಕೈಗೆಟುಕಿದೆ. ಈಗ ಬೆಲೆ ಕುಸಿತದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ರೈತರ ಒಕ್ಕೊರಲ ಒತ್ತಾಯ: ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್‌ಗೆ ₹7,000 ನಿಗದಿ ಮಾಡಬೇಕು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp