,

ಹರಿಹರ: ಜಿಗಳಿ ಗ್ರಾಮದಲ್ಲಿ ಅದ್ದೂರಿ ಶ್ರೀ ರಂಗನಾಥಸ್ವಾಮಿ ರಥೋತ್ಸವ! ಇಲ್ಲಿದೆ ಜಾತ್ರಾ ಮಹೋತ್ಸವದ ಸಂಪೂರ್ಣ ವಿವರ

Author Picture
Published On: February 28, 2026
ಜಿಗಳಿ ಗ್ರಾಮದಲ್ಲಿ ಅದ್ದೂರಿ ಶ್ರೀ ರಂಗನಾಥಸ್ವಾಮಿ ರಥೋತ್ಸವ

—Advertisement—

ಹರಿಹರ: ಜಿಗಳಿ ಗ್ರಾಮದಲ್ಲಿ ಅದ್ದೂರಿ ಶ್ರೀ ರಂಗನಾಥಸ್ವಾಮಿ ರಥೋತ್ಸವ! ಇಲ್ಲಿದೆ ಜಾತ್ರಾ ಮಹೋತ್ಸವದ ಸಂಪೂರ್ಣ ವಿವರ

ದಾವಣಗೆರೆ/ಹರಿಹರ: ಹರಿಹರ ತಾಲೂಕಿನ ಜಿಗಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಇತಿಹಾಸ ಪ್ರಸಿದ್ಧ “ಶ್ರೀ ರಂಗನಾಥಸ್ವಾಮಿಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ” ಬಹು ಸಡಗರ-ಸಂಭ್ರಮದಿಂದ ಜರುಗಲಿದೆ.

ಫೆಬ್ರವರಿ 21 ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಮಾರ್ಚ್ 1 ರಂದು ಪ್ರಮುಖ ರಥೋತ್ಸವ ನಡೆಯಲಿದೆ. ಭಕ್ತ ಸಾಗರವೇ ಹರಿದುಬರುವ ನಿರೀಕ್ಷೆ ಇದ್ದು, ಜಾತ್ರೆಯ ಅಂಗವಾಗಿ ಮಹಾ ಅನ್ನದಾಸೋಹ ಹಾಗೂ ವಿವಿಧ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜಾತ್ರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳು:

  • ಫೆಬ್ರವರಿ 28 (ಶನಿವಾರ): ರಾತ್ರಿ 8:30ಕ್ಕೆ ಸರಿಯಾಗಿ ಮಹಾರಥಕ್ಕೆ ಕಳಸಧಾರಣೆ ಕಾರ್ಯಕ್ರಮ.
  • ಮಾರ್ಚ್ 01 (ಭಾನುವಾರ – ರಥೋತ್ಸವ): ಬೆಳಗ್ಗೆ 8:00 ಗಂಟೆಗೆ ಗಜ ಉತ್ಸವ. ಬಳಿಕ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ರಂಗನಾಥಸ್ವಾಮಿ, ಶ್ರೀ ಬೀರಲಿಂಗೇಶ್ವರಸ್ವಾಮಿ, ಶ್ರೀ ಆಂಜನೇಯಸ್ವಾಮಿ ದೇವರುಗಳ ಒಡಗೂಡಿ ವಿವಿಧ ವಾದ್ಯಗಳೊಂದಿಗೆ ಅದ್ದೂರಿ “ರಥೋತ್ಸವ” ಜರುಗಲಿದೆ.
  • ಮಾರ್ಚ್ 02 (ಸೋಮವಾರ): ಬೆಳಗ್ಗೆ 10:30ರಿಂದ ಜವಳ, ಮುದ್ರೆ ಕಾರ್ಯಕ್ರಮ. ಸಂಜೆ ಯುವಕರು ಕಾತುರದಿಂದ ಕಾಯುವ “ಓಕುಳಿ” ಕಾರ್ಯಕ್ರಮ ನಡೆಯಲಿದೆ.
  • ಮಾರ್ಚ್ 03 (ಮಂಗಳವಾರ): ಸಂಜೆ 7:30 ರಿಂದ ದೇವರುಗಳ ಭೂತನ್ ಸೇವೆ ಹಾಗೂ ರಾಜ ಬೀದಿಗಳಲ್ಲಿ ಉತ್ಸವ.
  • ಮಾರ್ಚ್ 06 (ಶುಕ್ರವಾರ): ಶ್ರೀ ಚೌಡಮ್ಮ ದೇವಿಯ ಹಬ್ಬದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

🍲 ಮಹಾ ಅನ್ನಸಂತರ್ಪಣೆ:

ಮಾರ್ಚ್ 02 ರಂದು (ಸೋಮವಾರ) ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀ ಅಂಬಾಭವಾನಿ ದೇವಸ್ಥಾನಗಳ ಆವರಣದಲ್ಲಿ ಭಕ್ತಾದಿಗಳಿಗೆ ಗ್ರಾಮಸ್ಥರಿಂದ ಅನ್ನಸಂತರ್ಪಣೆ (ಪ್ರಸಾದ) ಏರ್ಪಡಿಸಲಾಗಿದೆ.
(ವಿಶೇಷ ಸೂಚನೆ: ಹರಕೆ, ಕಾಣಿಕೆ ನೀಡುವ ಭಕ್ತರು ಕಮಿಟಿಯವರಿಂದ ಅಧಿಕೃತ ರಶೀದಿಯನ್ನು ಪಡೆಯತಕ್ಕದ್ದು.)

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಶ್ರೀ ರಂಗನಾಥಸ್ವಾಮಿ ದೇವರ ಸಮಸ್ತ ಭಕ್ತವೃಂದ ಹಾಗೂ ಜಿಗಳಿ ಗ್ರಾಮಸ್ಥರು
ಮೊಬೈಲ್: 9008279275

Tags: #Harihara #Jigali #RanganathaswamyJatra #Rathotsava #DavanagereNews #KarnatakaTemples

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Leave a Comment

Home
Web Stories
Instagram
WhatsApp