,

ನವೋದಯ ಪ್ರವೇಶ ಪರೀಕ್ಷೆ: ಜಿಗಳಿಯ ಗುರುಧ್ಯಾನ ವಿದ್ಯಾಸಂಸ್ಥೆಯ 13 ವಿದ್ಯಾರ್ಥಿಗಳು ಆಯ್ಕೆ

ನವೋದಯ ಶಾಲೆಗೆ ಆಯ್ಕೆಯಾದ ದಾವಣಗೆರೆಯ ಜಿಗಳಿ ಗುರುಧ್ಯಾನ ಶಾಲೆಯ 13 ವಿದ್ಯಾರ್ಥಿಗಳು ಮತ್ತು ಶಾಲೆಯ ಆಡಳಿತ ಮಂಡಳಿ
— 2025-26ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಹರಿಹರ ತಾಲೂಕಿನ ಜಿಗಳಿ ಗುರುಧ್ಯಾನ ವಿದ್ಯಾಸಂಸ್ಥೆಯ ಸಾಧಕ ವಿದ್ಯಾರ್ಥಿಗಳು

—Election Update—

ಹರಿಹರ (ಜಿಗಳಿ): ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಪ್ರತಿಷ್ಠಿತ ‘ಗುರುಧ್ಯಾನ ವಿದ್ಯಾಸಂಸ್ಥೆ’ (ಆಂಗ್ಲ ಮಾಧ್ಯಮ ಶಾಲೆ) ವಿದ್ಯಾರ್ಥಿಗಳು 2025-26ನೇ ಸಾಲಿನ ಜವಾಹರ್ ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.

jigali-gurudhyana-school-navodaya-exam-13-students-selected

 

ದಾವಣಗೆರೆ ಜಿಲ್ಲೆಯಾದ್ಯಂತ ಕೇವಲ 80 ಮಕ್ಕಳಿಗೆ ಮಾತ್ರ ನವೋದಯ ಶಾಲೆಗೆ ಪ್ರವೇಶಾವಕಾಶವಿದೆ. ಈ 80 ಸ್ಥಾನಗಳ ಪೈಕಿ ಜಿಗಳಿಯ ಗುರುಧ್ಯಾನ ಶಾಲೆಯ ಬರೋಬ್ಬರಿ 13 ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಸಿಂಹಪಾಲು ಪಡೆದಿದ್ದಾರೆ. ವಿಶೇಷವೆಂದರೆ, ಇದೇ ಶಾಲೆಯ ಓರ್ವ ವಿದ್ಯಾರ್ಥಿ ಇಡೀ ದಾವಣಗೆರೆ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ತಾಲೂಕಿಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾನೆ.

jigali-gurudhyana-school-navodaya-exam-student-jayant-selected

 

ಗ್ರಾಮೀಣ ಭಾಗದಲ್ಲಿದ್ದರೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಿರುವ ಗುರುಧ್ಯಾನ ವಿದ್ಯಾಸಂಸ್ಥೆಯು ಈ ಬಾರಿಯ ಫಲಿತಾಂಶದಲ್ಲಿ ತನ್ನ ಪಾರುಪತ್ಯ ಮೆರೆದಿದೆ. ನವೋದಯ ವಸತಿಯುತ ಶಾಲೆಗೆ ಆಯ್ಕೆಯಾದ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

 

2025-26 ನೇ ಸಾಲಿನಲ್ಲಿ ನವೋದಯ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳ ವಿವರ ಇಲ್ಲಿದೆ:

ಕ್ರ.ಸಂ ವಿದ್ಯಾರ್ಥಿಯ ಹೆಸರು (Name) ಜನ್ಮ ದಿನಾಂಕ (DOB) ರೋಲ್ ನಂಬರ್ (Roll No) ವರ್ಗ (Category)
01 ಎಂ. ಜಿ. ಜಯಂತ್ (M G Jayanth) 30/10/2014 1746354 Urban (GM)
02 ಕೆ. ಎಚ್. ಲಾವಣ್ಯ (K H Lavanya) 30/09/2015 1746419 GM (OBC)
03 ಸಮೃದ್ಧಿ ಎನ್. ಎ. (Samruddhi N A) 11/10/2015 1746269 GM
04 ಹನುಮನಗೌಡ ಬಿ. (Hanumanagowda B) 28/07/2014 1746255 GM
05 ಕಿಶೋರ್ ಟಿ. (Kishor T) 15/10/2014 1747354 GM
06 ರಿಷಿತ್ ಗೌಡ ಡಿ. (Rishith Gowda D) 06/07/2014 1745405 GM
07 ಶ್ರೇಯಸ್ ಎಂ. ಎಚ್. (Shreyas M H) 04/08/2015 1745647 GM
08 ಲಾವಣ್ಯ ಕೆ. ಎ. (Lavanya K A) 19/04/2015 1746577 ST
09 ಸಾನ್ವಿ ಸಾಲಕಟ್ಟೆ (Sanavi Salakatte) 15/12/2015 1746439 ST
10 ಶ್ರೇಯಾ ಎಂ. (Shreya M) 21/01/2015 1746268 ST
11 ಹಂಸ ಆರ್. (Hamsa R) 19/06/2015 1747160 OBC
12 ಪೃಥ್ವಿ ಎಸ್. ಎಚ್. (Pruthvi S H) 18/08/2015 1746228 OBC
13 ಧ್ರುವ ನಾರಾಯಣ ಜೆ. ಕೆ. (Dhruva Narayana JK) 25/11/2014 1746678 OBC

 

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp