ನೆನೆಸಿದ ಗೋಡಂಬಿ : ಆರೋಗ್ಯದ ದೃಷ್ಟಿಯಿಂದ ಡ್ರೈ ಫ್ರೂಟ್ಸ್ ಸೇವನೆ ಎಷ್ಟು ಮುಖ್ಯವೋ, ಅದನ್ನು ಸರಿಯಾದ ರೀತಿಯಲ್ಲಿ ಸೇವಿಸುವುದು ಕೂಡ ಅಷ್ಟೇ ಮುಖ್ಯ. ಹೆಚ್ಚಿನವರು ಗೋಡಂಬಿಯನ್ನು ಹಾಗೆಯೇ ತಿನ್ನುತ್ತಾರೆ. ಆದರೆ ಗೋಡಂಬಿಯನ್ನು ಹಾಲಿನಲ್ಲಿ ನೆನೆಸಿಟ್ಟು ಸೇವಿಸುವುದರಿಂದ ಅದರ ಪೌಷ್ಟಿಕಾಂಶಗಳು ದ್ವಿಗುಣಗೊಳ್ಳುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಈ ಅದ್ಭುತ ಮಿಶ್ರಣದಿಂದ ಸಿಗುವ 5 ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ.
1. ಮಲಬದ್ಧತೆ ಸಮಸ್ಯೆಗೆ ಪರ್ಫೆಕ್ಟ್ ಮನೆಮದ್ದು
ನೀವು ಪ್ರತಿದಿನ ಮಲಬದ್ಧತೆಯಿಂದ ಬಳಲುತ್ತಿದ್ದರೆ, ಹಾಲಿನಲ್ಲಿ ನೆನೆಸಿದ ಗೋಡಂಬಿ ನಿಮಗೆ ವರದಾನವಾಗಬಲ್ಲದು. ಇದರಲ್ಲಿ ಸಮೃದ್ಧವಾದ ನಾರಿನಂಶ (Fiber) ಇದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ. ಇದರಿಂದ ಹೊಟ್ಟೆಯು ಸ್ವಚ್ಛವಾಗಿ, ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
2. ಮುಖದ ಕಾಂತಿ ಹೆಚ್ಚಿಸಿ, ಸುಕ್ಕುಗಳನ್ನು ತಡೆಯುತ್ತದೆ
ಸೌಂದರ್ಯ ಪ್ರಿಯರಿಗೆ ಇದೊಂದು ನೈಸರ್ಗಿಕ ಟಾನಿಕ್ ಇದ್ದಂತೆ. ಗೋಡಂಬಿಯಲ್ಲಿರುವ ವಿಟಮಿನ್ ಬಿ6 ಮತ್ತು ಕೆ ತ್ವಚೆಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಈ ಮಿಶ್ರಣವನ್ನು ನಿಯಮಿತವಾಗಿ ಸೇವಿಸುವುದರಿಂದ ಮುಖದ ಮೇಲಿನ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳು ಮಾಯವಾಗಿ, ತ್ವಚೆಯು ಕಾಂತಿಯುತವಾಗಿ ಹಾಗೂ ಎಳೆಯದಾಗಿ ಕಾಣುತ್ತದೆ.
3. ಮೂಳೆಗಳ ದೃಢತೆಗೆ ಅತ್ತ್ಯುತ್ತಮ
ಗೋಡಂಬಿಯಲ್ಲಿ ಮೆಗ್ನೇಸಿಯಮ್, ಮ್ಯಾಂಗನೀಸ್ ಮತ್ತು ವಿಟಮಿನ್ ಕೆ ಹೇರಳವಾಗಿದೆ. ಇದು ಹಾಲಿನ ಕ್ಯಾಲ್ಸಿಯಂನೊಂದಿಗೆ ಸೇರಿದಾಗ ಮೂಳೆಗಳಿಗೆ ಹೆಚ್ಚಿನ ಶಕ್ತಿ ನೀಡುತ್ತದೆ. ಕೀಲು ನೋವು ಮತ್ತು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆ ಇರುವವರು ಇದನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.
4. ರೋಗನಿರೋಧಕ ಶಕ್ತಿಯ ಬೂಸ್ಟರ್
ಬದಲಾಗುತ್ತಿರುವ ಹವಾಮಾನಕ್ಕೆ ತಕ್ಕಂತೆ ನಾವು ಪದೇ ಪದೇ ಕಾಯಿಲೆ ಬೀಳುವುದು ಸಹಜ. ಹಾಲಿನಲ್ಲಿ ನೆನೆಸಿದ ಗೋಡಂಬಿ ಸೇವನೆಯು ರೋಗನಿರೋಧಕ ಶಕ್ತಿಯನ್ನು (Immunity Power) ಬಲಪಡಿಸುತ್ತದೆ. ಇದರಲ್ಲಿರುವ ಪ್ರಬಲ ಆ್ಯಂಟಿ ಆಕ್ಸಿಡೆಂಟ್‌ಗಳು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತವೆ.
5. ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಲು ಸಹಕಾರಿ
ದೇಹದ ತೂಕ ಕಡಿಮೆಯಿದ್ದು, ತೆಳ್ಳಗಿರುವವರು ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಲು ಇದು ಬೆಸ್ಟ್ ಫುಡ್. ಇದರಲ್ಲಿರುವ ಆರೋಗ್ಯಕರ ಕೊಬ್ಬು ಮತ್ತು ಕ್ಯಾಲೋರಿಗಳು ಸ್ನಾಯುಗಳ ಬೆಳವಣಿಗೆಗೆ ಪೂರಕವಾಗಿದ್ದು, ದೇಹಕ್ಕೆ ಸದೃಢವಾದ ಶಕ್ತಿಯನ್ನು ಒದಗಿಸುತ್ತದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
