ದಾವಣಗೆರೆಯ ಹಲವೆಡೆ ಇಂದು (ಜೂನ್ 03) ದಿನವಿಡೀ ಕರೆಂಟ್ ಕಟ್: ಯಾವೆಲ್ಲ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ? ಇಲ್ಲಿದೆ ಮಾಹಿತಿ

Davanagere BESCOM official power cut notification letter

—Election Update—

ದಾವಣಗೆರೆ: ನಗರದ ಪ್ರಮುಖ ಬಡಾವಣೆಗಳು ಹಾಗೂ ವಾಣಿಜ್ಯ ಪ್ರದೇಶಗಳ ಸಾರ್ವಜನಿಕರೇ ಗಮನಿಸಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬೆಸ್ಕಾಂ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು ನಗರದ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಸ್ಕಾಂ ನಗರ ಉಪವಿಭಾಗ-1ರ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ನೀಡಿರುವ ಮಾಹಿತಿ ಪ್ರಕಾರ, ಫೀಡರ್‌ಗಳ ದುರಸ್ತಿ ಮತ್ತು ತುರ್ತು ನಿರ್ವಹಣಾ ಕೆಲಸ ಇರುವುದರಿಂದ ಜೂನ್ 03 ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಒಟ್ಟು 8 ಗಂಟೆಗಳ ಕಾಲ ಕರೆಂಟ್ ಇರುವುದಿಲ್ಲ.

ವಿದ್ಯುತ್ ಕೈಕೊಡುವ ಪ್ರಮುಖ ಪ್ರದೇಶಗಳ ಪಟ್ಟಿ:

ನಿಮ್ಮ ಏರಿಯಾ ಈ ಪಟ್ಟಿಯಲ್ಲಿದೆಯೆ ಎಂದು ಪರಿಶೀಲಿಸಿಕೊಳ್ಳಿ ಮತ್ತು ಮುಂಜಾಗ್ರತಾ ಕ್ರಮವಾಗಿ ನೀರು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ:

  • ಕೆ.ಬಿ. ಬಡಾವಣೆ (KB Extension)
  • ಲಾಯರ್ ರಸ್ತೆ ಹಾಗೂ ದೀಕ್ಷಿತ್ ರಸ್ತೆ
  • ಶಿವಪ್ಪ ಸರ್ಕಲ್ ಮತ್ತು ಜಯದೇವ ಸರ್ಕಲ್
  • ನಾಯ್ಡು ಹೋಟೆಲ್ ಹಾಗೂ ಸಿಗಂದೂರು ಹೋಟೆಲ್ ಸುತ್ತಮುತ್ತ
  • ಸಿದ್ದಮ್ಮ ಪಾರ್ಕ್ ಮತ್ತು ತ್ರಿಶೂಲ್ ರಸ್ತೆ
  • ಹಳೇ ಬಸ್ ನಿಲ್ದಾಣ ಹಾಗೂ ಹೈಸ್ಕೂಲ್ ಬಸ್ ನಿಲ್ದಾಣದ ಆಸುಪಾಸು
  • ಜಾಯ್ ಆಲುಕ್ಕಾಸ್, ಬಿಗ್ ಬಜಾರ್ ವಾಣಿಜ್ಯ ಸಂಕೀರ್ಣಗಳು
  • ಪಿ.ಡಬ್ಲ್ಯೂ.ಡಿ (PWD) ವಸತಿ ಗೃಹಗಳು
  • ಆಕ್ಸಿಸ್ ಬ್ಯಾಂಕ್ ಕಟ್ಟಡ ಮತ್ತು ಸುರಭಿ ಅಪಾರ್ಟ್‌ಮೆಂಟ್
  • ರೇಣುಕಾ ಮಂದಿರ ಹಾಗೂ ಈ ಮೇಲಿನ ಪ್ರದೇಶಗಳ ಸುತ್ತಮುತ್ತಲಿನ ಜಾಗಗಳು.

ಸಂಜೆ 5:00 ಗಂಟೆಯ ನಂತರ ಕಾಮಗಾರಿ ಮುಗಿದ ತಕ್ಷಣ ವಿದ್ಯುತ್ ಸಂಪರ್ಕವನ್ನು ಯಥಾಸ್ಥಿತಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಸಾರ್ವಜನಿಕರು ಬೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಲು ಕೋರಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp