ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಡಿಕೆಶಿ ಜೊತೆ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ 13 ನೂತನ ಸಚಿವರಿಗೆ ಇಲಾಖೆಗಳ ಜವಾಬ್ದಾರಿ ನೀಡಲಾಗಿದೆ.
ಈ ಪೈಕಿ CM ಡಿಕೆ ಶಿವಕುಮಾರ್, ಹಣಕಾಸು ಇಲಾಖೆ, DPAR ಸೇರಿದಂತೆ ಇತರೆ ಕೆಲ ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ. ಹಣಕಾಸು, ಜಲಸಂಪನ್ಮೂಲ, ಗೃಹ, ಲೋಕೋಪಯೋಗಿ, ಬೆಂಗಳೂರು ಅಭಿವೃದ್ದಿ ಮುಂತಾದ ಖಾತೆಗಳು ಯಾರಿಗೆ ಹಂಚಿಕೆಯಾಗಲಿದೆ ಎಂಬ ಗೊಂದಲಗಳಿಗೆ ಇಂದು ತೆರೆ ಬಿದ್ದಿದೆ.

13 ಸಚಿವರಿಗೆ ಖಾತೆ ಹಂಚಿಕೆ.. ಯಾರಿಗೆ ಯಾವ ಖಾತೆ
- ಡಿಕೆ ಶಿವಕುಮಾರ್ – ಮುಖ್ಯಮಂತ್ರಿ – ಹಣಕಾಸು, ಗುಪ್ತಚರ, ಸಹಕಾರ, ಸಿಬ್ಬಂದಿ ಆಡಳಿತ ಸುಧಾರಣೆ.
- ಡಾ. ಜಿ ಪರಮೇಶ್ವರ – ಉಪಮುಖ್ಯಮಂತ್ರಿ – ಕಂದಾಯ, ಯುವ ಸಬಲೀಕರಣ.
- ಕೃಷ್ಣ ಬೈರೇಗೌಡ – ಬೆಂಗಳೂರು ಅಭಿವೃದ್ದಿ.
- ಪ್ರಿಯಾಂಕ್ ಖರ್ಗೆ – ಗೃಹ, ಐಟಿಬಿಟಿ.
- ಡಾ.ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ದಿ, ಹಿಂದುಳಿದ ಕಲ್ಯಾಣ.
- ಯುಟಿ ಖಾದರ್ – ಆರೋಗ್ಯ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.
- ಸತೀಶ್ ಜಾರಕಿಹೊಳಿ – ಲೋಕೋಪಯೋಗಿ.
- ಎಂಬಿ ಪಾಟೀಲ್ – ಬೃಹತ್ ಕೈಗಾರಿಕೆ.
- ಕೆಜೆ ಜಾರ್ಜ್ – ಇಂಧನ, ಪ್ರವಾಸೋದ್ಯಮ.
- ಕೆಎಚ್ ಮುನಿಯಪ್ಪ – ಆಹಾರ ಇಲಾಖೆ.
- ರಾಮಲಿಂಗಾ ರೆಡ್ಡಿ – ಜಲಸಂಪನ್ಮೂಲ.
- ಈಶ್ವರ್ ಖಂಡ್ರೆ – ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ.
- ಬೈರತಿ ಸುರೇಶ್ – ಸಾರಿಗೆ ಇಲಾಖೆ.
- ಡಾ.ಶರಣ ಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
