ದಾವಣಗೆರೆ ನಗರದ ಈ ಭಾಗಗಳಲ್ಲಿ ಇಂದು  ವಿದ್ಯುತ್ ಕಡಿತ: ಇಲ್ಲಿದೆ ಸಂಪೂರ್ಣ ವಿವರ

Davanagere BESCOM official power cut notification letter

—Election Update—

ದಾವಣಗೆರೆ: ನಗರದ ಕೆಲವು ಪ್ರಮುಖ ಬಡಾವಣೆಗಳಲ್ಲಿ ಇಂದು (ಜೂನ್ 6) ಬೆಸ್ಕಾಂ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ದಾವಣಗೆರೆ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಸ್ಕಾಂ ನಗರ ಉಪವಿಭಾಗ-2ರ ವ್ಯಾಪ್ತಿಗೆ ಬರುವ ಯರಗುಂಟ, ಶಿವಾಲಿ ಹಾಗೂ ಶಿವನಗರ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ತುರ್ತು ದುರಸ್ತಿ ಮತ್ತು ನಿರ್ವಹಣಾ ಕೆಲಸಗಳು ನಡೆಯಲಿವೆ. ಹೀಗಾಗಿ ಸಾರ್ವಜನಿಕರು ಬೆಸ್ಕಾಂ ಜೊತೆ ಸಹಕರಿಸಬೇಕಾಗಿ ಕೋರಲಾಗಿದೆ.

ವಿದ್ಯುತ್ ಕೈಕೊಡುವ ಸಮಯ:

  • ದಿನಾಂಕ: 06 ಜೂನ್ 2026 (ಶನಿವಾರ)
  • ಸಮಯ: ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 04:00 ಗಂಟೆಯವರೆಗೆ (ಒಟ್ಟು 6 ಗಂಟೆಗಳು)

ಎಲ್ಲೆಲ್ಲಿ ವಿದ್ಯುತ್ ಇರುವುದಿಲ್ಲ?

ಈ ಕೆಳಗಿನ ಬಡಾವಣೆಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಗದಿತ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ:

  • ಬಿಸ್ಮಿಲ್ಲಾ ನಗರ, ಎಲ್ ಬಿ ಎಸ್ ನಗರ, ಎಸ್‌ಎಸ್‌ಎಂ ನಗರ
  • ಬಿ ಡಿ ಕಾರ್ಮಿಕರ ಬಡಾವಣೆ, ಶಿವ ನಗರ, ಮಿಲತ್ ಕಾಲೋನಿ
  • ಅಜಾದ್ ನಗರ, ಭಾಷಾ ನಗರ, ಚೌಡೇಶ್ವರಿ ನಗರ, ಗಾಂಧಿ ನಗರ
    ​ಬಿ ಏನ್ ಲೇಔಟ್ -1, ಎಸ್.ಪಿ.ಎಸ್ ನಗರ
  • ಮಂಡಕ್ಕಿ ಬಟ್ಟಿ ಮತ್ತು ಎಸ್.ಟಿ.ಪಿ ಪ್ಲಾಂಟ್‌ ಸುತ್ತಮುತ್ತಲ ಪ್ರದೇಶಗಳು.

ಮನೆಯಲ್ಲಿ ನೀರು ಸಂಗ್ರಹಣೆ ಹಾಗೂ ಇತರೆ ಅಗತ್ಯ ಕೆಲಸಗಳನ್ನು ಬೆಳಿಗ್ಗೆ 10 ಗಂಟೆಯ ಒಳಗಾಗಿ ಪೂರ್ಣಗೊಳಿಸಿಕೊಳ್ಳಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp